Friday, November 20, 2026

ಪ್ರಾಯೋಗಿಕ ಆವೃತ್ತಿ

ವೈಜ್ಞಾನಿಕ ಕೃಷಿ ಮಾಡುವಲ್ಲಿ ರೈತರು ವಿಫಲ : ನ್ಯಾ.ನಾಗಮೋಹನ್‌ದಾಸ್

ವೈಜ್ಞಾನಿಕ ಕೃಷಿ ಮಾಡುವಲ್ಲಿ ಜಿಲ್ಲೆಯ ರೈತರು ವಿಫಲರಾಗಿದ್ದಾರೆ. ಮಣ್ಣು, ನೀರು, ಯಂತ್ರೋಪಕರಣ, ಬೀಜ, ರಸಗೊಬ್ಬರ ಬಳಕೆ ಸೇರಿದಂತೆ ಕೃಷಿ ಕ್ಷೇತ್ರದ ಬೆಳವಣಿಗೆಗೆ ರಚನಾತ್ಮಕ ಚರ್ಚೆ ಅಗತ್ಯತೆ ಇದೆ. ವೈಜ್ಞಾನಿ ಕೃಷಿ ಬಗ್ಗೆ ರೈತರಿಗೆ ಕಾರ್ಯಾಗಳನ್ನು ನಡೆಸಿ ಅರಿವು ಮೂಡಿಸಬೇಕಿದೆ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಸಲಹೆ ನೀಡಿದರು.

ಮಂಡ್ಯ ನಗರದ ಕೆ.ವಿ.ಶಂಕರಗೌಡ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರಭಾವತಿ ಎಚ್.ಹನುಮೇಗೌಡ ಕಾನೂನು ಸೇವಾ ಪ್ರಶಸ್ತಿ, ಶಾರದಮ್ಮ ಎಂ.ಎಲ್.ಸುಬ್ಬಣ್ಣ ಕೃಷಿ ಪ್ರಶಸ್ತಿ, ವಿಣಾ ಡಾ.ಎಂ.ಮಂಚಯ್ಯ ವೈದ್ಯಕೀಯ ಸೇವಾ ಪ್ರಶಸ್ತಿ, ರತ್ನಮ್ಮ ಕುನ್ನಮರಿಗೌಡ ಕೃಷಿ ಪ್ರಶಸ್ತಿ, ಡಾ.ಸಿ.ಶಿವರಾಮಯ್ಯ ಕೃಷಿ ಪ್ರಶಸ್ತಿ ಹಾಗೂ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ರಮಾ ನಾಗರಾಜ್ ಚಿತ್ರದುರ್ಗ ಅವರ ಪ್ರಾಯೋಜಿತ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಮಣ್ಣು, ನೀರು, ಗೊಬ್ಬರ ಹಾಗೂ ಬಿತ್ತನೆ ಬೀಜ ಬಳಸುವ ವಿಧಾನವನ್ನು ವೈಜ್ಞಾನಿಕವಾಗಿ ನಮ್ಮ ರೈತರು ಇನ್ನೂ ತಿಳಿದುಕೊಂಡಿಲ್ಲ. ಇದರಿಂದ ಕೃಷಿಯಲ್ಲಿ ಸಾಧನೆ ಮಾಡಲಾಗುತ್ತಿಲ್ಲ. ಮಂಡ್ಯ ಜಿಲ್ಲೆ ಶೈಕ್ಷಣಿಕ, ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಬೆಳೆಯಬೇಕಿದೆ ಎಂದು ಹೇಳಿದರು.

ಮಂಡ್ಯದ ವಿ.ಸಿ.ಫಾರಂನಲ್ಲಿ ಕೃಷಿಗೆ ಸಂಬಂಧಿಸಿದಂತೆ ಜಪಾನ್ ದೇಶದವರು ಬಂದು ತರಬೇತಿ ನೀಡಿದ್ದರು. ಆ ಸಂದರ್ಭದಲ್ಲಿ ಮಂಡ್ಯ ಜಿಯಲ್ಲಿ ವೈeನಿಕವಾಗಿ ಕೃಷಿ ಮಾಡುತ್ತಿಲ್ಲ ಎಂಬ ಮಾತುಗಳು ಬಂದಿತು. ಈ ಬಗ್ಗೆ ಗಂಭೀರವನಾಗಿ ಚಿಂತನೆ ನಡೆಸಬೇಕಾಗಿದೆ ಎಂದರು.

ನನಗೆ ಹಲವು ಪ್ರಶಸ್ತಿಗಳು ಬಂದಿವೆ, ಅದರ ಜೊತೆ ಹಣವೂ ಬಂದಿದೆ. ಇಲ್ಲಿಯತನಕ 10 ಲಕ್ಷಕ್ಕೂ ಹೆಚ್ಚು ಹಣವನ್ನು ಸಂವಿಧಾನದ ಓದಿಗಾಗಿ ಖರ್ಚು ಮಾಡಿದ್ದೇನೆ, ಈಗ ಕೊಡುವ ಹಣವನ್ನು ಸಹ ನಾನು ಸಂವಿಧಾನ ಓದಿಗಾಗಿ ಖರ್ಚು ಮಾಡುವೆ. ಸಂವಿಧಾನವನ್ನು ಎಷ್ಟು ಜನ ಓದಿದ್ದೀರಾ ಅದನ್ನು ಅರ್ಥ ಮಾಡಿಕೊಂಡಿದ್ದೀರಾ ಎಂಬುನ್ನು ಅರಿತುಕೊಳ್ಳಬೇಕು. ದೇಶದಲ್ಲಿ ಸಮಸ್ಯೆಗಳು, ಸವಾಲುಗಳು ಇವೆ, ಇದೆಲ್ಲವನ್ನೂ ಸರಿದಾರಿಯಲ್ಲಿ ತೆಗೆದುಕೊಂಡು ಹೋಗುವುದು ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.

ಕನಕಪುರ ರೂರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಮಾತನಾಡಿ, ಕೃಷಿಗೆ ಭವಿಷ್ಯವಿಲ್ಲ ಎನ್ನುವ ಜನರೇ ಹೆಚ್ಚಿzರೆ, ಈ ಹಿಂದೆ ಶೇ.೮೦ ರಷ್ಟು ಇದ್ದ ರೈತರು ಪ್ರಸ್ತುತದಲ್ಲಿ ಶೇ.೫೫ಕ್ಕೆ ಕುಸಿದಿದೆ. ನಮ್ಮ ಕೃಷಿಗೆ ಭವಿಷ್ಯವಿದೆ ಎಂಬುದಕ್ಕೆ ಇವರು ದೇಶದ ೧೩೦ ಕೋಟಿ ಜನರಿಗೆ ಅನ್ನ ನೀಡುತ್ತಿರುವುದೇ ಸಾಕ್ಷಿಯಾಗಿದೆ. ಇದು ಮತ್ತಷ್ಟು ಹೆಚ್ಚಾಗಬೇಕಿದೆ ಎಂದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಮಾತನಾಡಿ, ಮದ್ದೂರಿನಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡಲು ಬಂದಾಗ ಸುಮಾರು ೧೨ ಸಾವಿರ ಪ್ರಕರಣಗಳಿದ್ದವು, ಅದರಲ್ಲಿ ರೈತರ ಪ್ರಕರಣಗಳನ್ನು ಸೇರಿದಂತೆ ಹಲವು ಪ್ರಕರಣಗಳನ್ನು ಇತ್ಯರ್ಥಗೊಳಿಸಿರುವ ಸಮಾಧಾನವಿದೆ. ಮದ್ದೂರಿನಿಂದ ವರ್ಗಾವಣೆಗೊಂಡಾಗ ಅಂದಿನ ಕೊನೆಯ ತೀರ್ಪು ನೀಡಿ ಪ್ರಕರಣದಿಂದ ಬಿಡುಗಡೆಗೊಳಿಸಿದ್ದು, ಅಂದಿನ ಶಾಸಕರಾಗಿದ್ದ ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರzಗಿತ್ತು, ಜೊತೆಗೆ ಕೇವಲ ೧೨,೨೦೦ ಪ್ರಕರಣಗಳಲ್ಲಿ ಕೇವಲ ೪೧೯ ಮಾತ್ರ ಉಳಿಸಿ ಮಿಕ್ಕೆಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಿರುವುದು ಹೆಮ್ಮೆ ಎನಿಸಿತ್ತು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಮ.ರಾಮಕೃಷ್ಣ ಅಭಿನಂದನಾ ನುಡಿಯಾಡಿದರು.

ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ (ಕಾನೂನು ಸೇವಾ ಪ್ರಶಸ್ತಿ, ೨೦ ಸಾವಿರ), ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂ ಗ್ರಾಮದ ಪ್ರಗತಿಪರ ಕೃಷಿಕ ಚಂದ್ರಶೇಖರ್ (ಕೃಷಿ ಪ್ರಶಸ್ತಿ, ೨೦ ಸಾವಿರ), ಮಂಡ್ಯ ತಾಲ್ಲೂಕಿನ ದೊಡ್ಡಬಾಣಸವಾಡಿ ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅಂಬಿಕಾ (ವೈದ್ಯಕೀಯ ಪ್ರಶಸ್ತಿ, ೨೦ ಸಾವಿರ), ಕನಕಪುರ ತಾಲ್ಲೂಕಿನ ಪ್ರಗತಿಪರ ಕೃಷಿಕ ಬಿ.ಕೆ.ಪದ್ಮಾ (ಕೃಷಿ ಪ್ರಶಸ್ತಿ, ೧೦, ಸಾವಿರ), ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಪ್ರಗತಿಪರ ಕೃಷಿಕ ಪ್ರೊ.ಎಂ.ಸಿ.ಬೋರೇಗೌಡ (ಕೃಷಿ ಪ್ರಶಸ್ತಿ, ೧೦ ಸಾವಿರ) ಹಾಗೂ ಪ್ರಶಸ್ತಿ ಫಲಕ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ವಕೀಲ ಪಿ.ಮಂಜುನಾಥ್ ಹಾಗೂ ಮಂಡ್ಯ ಕಾನೂನು ಕಾಲೇಜಿನ ವಿದ್ಯಾರ್ಥಿ ಜಿ.ಎಸ್.ಚೈತ್ರಾ ಅವರಿಗೆ ತಲಾ ೫ ಸಾವಿರದೊಂದಿಗೆ ಫಲಕ ನೀಡಿ ಗೌರವಿಸಲಾಯಿತು.

ಪ್ರಭಾವತಿ ಹನುಮೇಗೌಡ ಕುಟುಂಬದಿಂದ ಎಂ.ಎಸ್.ಹರೀಶ್, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಚಂದಗಾಲು ಲೋಕೇಶ್, ಕಾರ್ಯದರ್ಶಿ ಹರೀಶ್‌ಕುಮಾರ್ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ