ವಿಶೇಷ ಚೇತನರು ಸ್ವಾಭಿಮಾನದ ಜೀವನ ನಡೆಸಬೇಕೆಂಬ ಉದ್ದೇಶದಿಂದ ಸರ್ಕಾರದ ವತಿಯಿಂದ ಹಲವು ಸವಲತ್ತುಗಳನ್ನು ನೀಡಲಾಗುತ್ತಿದ್ದು, ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ವಿಕಲಚೇತನರು ಹಾಗೂ ಸಬಲೀಕರಣ ಇಲಾಖೆ ಮಂಡ್ಯ, ಭಾರತ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ವತಿಯಿಂದ ಆರ್‌ಡಿಪಿ ಯೋಜನೆಯಡಿ ಅಲಿಂಕೋ ಸಂಸ್ಥೆಯ ಸಹಯೋಗದೊಂದಿಗೆ ಮಳವಳ್ಳಿ ತಾಲ್ಲೂಕಿನ ವಿಕಲಚೇತನರಿಗೆ ವಿವಿಧ ಸಾಧನ ಸಲಕರಣಗಳನ್ನು ವಿತರಿಸಿದ ನಂತರ ಅವರು ಮಾತನಾಡಿದರು.
12 ವಿಧದ ಸಲಕರಣಗ ಳನ್ನು ನೀಡಲಾಗುತ್ತಿದೆ, ಯಂತ್ರ ಚಾಲಿತ ದ್ವೀಚಕ್ರವಾಹನ, ಸೈಕಲ್ ಗಳು, ವೀಲ್‌ಚೇರ್, ಕಂಕಳು ದೊಣ್ಣೆ, ನಡಿಗೆ ಕೋಲು ರೋಲೇಟರ್, ಕಲಿಕಾ ಸಾಮಾಗ್ರಿಗಳ ಕಿಟ್, ಸಿ. ಪಿ ವಿಲ್‌ಚೇರ್, ಶ್ರಾವಣ ಸಾಧನಾ, ಕೃತಕ ಅಂಗಗಳು ಸೇರಿದಂತೆ ೨೫೮ ವಿಶೇಷ ಚೇತನರಿಗೆ ಸಾಧನಾ ಸಲಕರಣಗಳನ್ನು ನೀಡಲಾಗುತ್ತಿದೆ ಎಂದರು.
ಅರ್ಥಿಕವಾಗಿ ಹಿಂದುಳಿದವರಿಗೆ ಸಲವತ್ತು ಪಡೆಯಲು ದುಸ್ಸರವಾಗಿದೆª, ಕೇಂದ್ರಸರ್ಕಾರದ ಹಾಗೂ ಅಲಿಂಕೋ ಸಂಸ್ಥೆಯ ಜವಾಬ್ದಾರಿಯೊಂದಿಗೆ 15 ಲಕ್ಷದ 25 ರೂ ಅನುದಾನದಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತಿದೆ, ಪೋಷಕರು ಸಲಕರಣಿಗಳು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ತಹಶೀಲ್ದಾರ್ ಡಾ. ಎಸ್.ವಿ ಲೊಕೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಎಚ್.ಜಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ತಾಲ್ಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ, ಪ್ರಭಾರ ಸಿಡಿಪಿಓ ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಸಂತೋಷ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ. ರಾಜು, ಸಿ.ಮಾಧು, ದೇವರಾಜು ಸೇರಿದಂತೆ ಇತರರು ಇದ್ದರು.




