ಶಿವಸುಂದರ್
ಆತ್ಮೀಯರೇ….. ಒಂದೆರಡು ಹೆಚ್ಚುವರಿ ಮಾತುಗಳು…
1.ಸರಳತೆಗೂ ಮಾಂಸಾಹಾರ ಮಾರಾಟದ ನಿಷೇಧಕ್ಕೂ ಸಂಬಂಧವಿಲ್ಲ.
ಏಕೆಂದರೆ….
ಸಮ್ಮೇಳನದಲ್ಲಿ ಕೊಡುತ್ತಿರುವ ಸಸ್ಯಾಹಾರ ಸರಳವಾಗಿಯೇನೂ ಇಲ್ಲ…
ಅಲ್ಲದೆ ಇತರರು ಕೂಡ ಸಮ್ಮೇಳನದಲ್ಲಿ ಮಾಂಸಾಹಾರ ಮಾರಾಟ ಮಾಡಬಾರದೇನ್ನುವ ಕ್ರಮಕ್ಕೂ ಸರಳತೆಗೂ ಯಾವ ಸಂಬಂಧವೂ ಇಲ್ಲ..ಏಕೆಂದರೆ ಸಸ್ಯಾಹಾರ ಮಾರಾಟ ನಿಷೇಧವಾಗಿಲ್ಲ…
2.ಸರ್ವಮಾನ್ಯ ಆಹಾರಕ್ಕೂಮಾಂಸಾಹಾರ ನಿಷೇಧಕ್ಕೂ ಸಂಬಂಧವಿಲ್ಲ…
ಏಕೆಂದರೆ…
ಸಸ್ಯಾಹಾರ ಸರ್ವಮಾನ್ಯವೇನಲ್ಲ… ಮತ್ತು ಮಾಂಸಾಹಾರ ಈ ದೇಶದ ಬಹುಸಂಖ್ಯಾತರ ಆಹಾರ ಸಂಸ್ಕೃತಿ…
ಹೀಗಾಗಿ
ಸಸ್ಯಾಹಾರಿಗಳಿಗೆ ಸಸ್ಯಾಹಾರ, ಮಾಂಸಹಾರಿಗಳಿಗೆ ಮಾಂಸಾಹಾರ ವೆನ್ನುವುದು ನಾಗರಿಕ ಆಹಾರ ಸಂಸ್ಕೃತಿಯ ಲಕ್ಷಣ….ಬಹುಸಂಖ್ಯಾತರ ಮಾಂಸಾಹಾರ ನಿಷೇಧ ಫ್ಯಾಶಿಸ್ಟ್ ಸಂಸ್ಕೃತಿ…
3. ಸಸ್ಯಾಹಾರಕ್ಕೂ ಸಾತ್ವಿಕತೆಗೂ ಸಂಬಂಧವಿಲ್ಲ…
ಇತಿಹಾಸದ ಮತ್ತು ವರ್ತಮಾನದ ನರಮೇಧಾಗಳಿಗೆ ಕಾರಣವಾಗಿರುವ ಮೈ ತುಂಬಾ ದ್ವೇಷವನ್ನೇ ತುಂಬಿಕೊಂಡಿರುವ ಫ್ಯಾಶಿಸ್ಟ್ ರಲ್ಲಿ ಬಹುಪಾಲು ಸಸ್ಯಾಹಾರಿಗಳೇ… ಈ ಮಾಂಸಾಹಾರ ಮಾರಾಟ ನಿಷೇಧ ಕ್ರಮವೂ ಒಂದು ಫ್ಯಾಶಿಸ್ಟ್ ಕ್ರಮವೇ..
ಅದಕ್ಕೆ ತದ್ವಿರುದ್ಧವಾಗಿ “ಗೋವು ತಿಂದು ಗೋವಿನಂತಾದವರು”, ಹಾಲು ಕೊಟ್ಟು ಸಮಾಜವನ್ನು ಪೊರೆದವರು ಮಾಂಸಹಾರಿ ಬಹುಜನ ಶ್ರಮಿಕರು…
ಆಹಾರಕ್ಕೂ ಸ್ವಭಾವಕ್ಕೂ ಸಂಬಂಧವಿಲ್ಲ…
ಆದ್ದರಿಂದ ಅಸಲಿ ಸಮಸ್ಯೆ….
ಈ ಆಹಾರ ನಿಷೇಧದ ಹಿಂದಿನ ಬ್ರಾಹ್ಮಣ ಶಾಹಿ ಫ್ಯಾಶಿಸ್ಟ್ ಸಂಸ್ಕೃತಿಯದ್ದು…
ಸರ್ಕಾರಿ ಕಾರ್ಯಕ್ರಮಗಳಲ್ಲಿ, ಸರ್ಕಾರಿ ಪೋಷಿತ ಕಾರ್ಯಕ್ರಮಗಳಲ್ಲಿ, ಸರ್ಕಾರಿ ಜಯಂತಿ ದಿನಗಳಲ್ಲಿ, ಕೆಲವೊಮ್ಮೆ ಅಂಬೇಡ್ಕರ್ ದಿನಗಳಲ್ಲೂ, ಸರ್ಕಾರಿ ಭವನಗಳಲ್ಲೂ, ಕೆಲವೊಮ್ಮೆ ಬಲಿಷ್ಠ ಅಬ್ರಾಹ್ಮಣ ಜಾತಿಗಳ ಸಂಭ್ರಮಗಳಲ್ಲೂ…..
ಬಹುಸಂಖ್ಯಾತರ ಮಾಂಸಾಹಾರ ಸಂಸ್ಕೃತಿಯನ್ನು ಅಪಮಾನಿಸಿ ಅಧಿಕೃತವಾಗಿ ಅಥವಾ ಅನಾಧಿಕೃತವಾಗಿ ನಿಷೇಧಿಸುತ್ತಿರುವುದು…..
ಆ ಜಾತಿ ಶ್ರೇಷ್ಠತೆಯ ಆಹಾರ ಸಂಸ್ಕೃತಿಯ ಮೂಲಕ ಬಹಿರಂಗವಾಗಿ ಬ್ರಾಹ್ಮಣಶಾಹಿ ಮತ್ತು ನವ ಬ್ರಾಹ್ಮಣಶಾಹಿಗೆ ಮಾನ್ಯತೆ ಕೊಡುತ್ತಿರುವುದು…
ಅಸಲಿ ಸಮಸ್ಯೆ…
ಜೋಶಿಯವರು ಸಮ್ಮೇಳನದಲ್ಲಿ ಮಾಂಸಾಹಾರ ಮಾರಾಟವನ್ನು ಕೂಡ ಬಹಿರಂಗ ನಿಷೇಧಿಸಿರುವುದು ಮತ್ತು ಅದನ್ನು ಮಾದಕ ವ್ಯಸನಗಳ ಜೊತೆಗೆ ಹೋಲಿಸಿರುವುದು ದಲಿತ-ರೈತ -ಶೂದ್ರ ಶ್ರಮಣ ಸಂಸ್ಕೃತಿಯ ಮೇಲೆ ನೇರ ಹಾಗೂ ಬಹಿರಂಗ ಬ್ರಾಹ್ಮಣಶಾಹಿ ದಾಳಿ…
ಇದನ್ನು ಬಹಿರಂಗವಾಗಿಯೇ ವಿರೋಧಿಸಬೇಕು
ಮಂಡ್ಯದ ಬಾಡೂಟದ ಬಳಗ ಈ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರತಿರೋಧವನ್ನು ನಾಡೋಜರಿಂದ ಹಿಡಿದು ಸಾಮಾನ್ಯ ನಾಡಿಗರವರೆಗೆ ಎಲ್ಲರೂ ಬೆಂಬಲಿಸಬೇಕು…
ಹಾಗೂ ಈ ವಿರೋಧವನ್ನು ಅಧಿಕೃತ ಮಾಂಸಾಹಾರ ನಿಷೇಧವಿರುವ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಿಗೂ ವಿಸ್ತರಿಸಬೇಕು…
ಆದರೆ ಅದೇ ಸಮಯದಲ್ಲಿ…
1. ಹಸಿವಿನ ಸೂಚ್ಯಂಕದಲ್ಲಿ ಭಾರತ ಆಫ್ರಿಕಾಗಿಂತ ಕೆಳಗಿಳಿಯುತ್ತಿರುವ ಹೊತ್ತಿನಲ್ಲಿ ಇಂಥಾ ಕಾರ್ಯಕ್ರಮ ಗಳಲ್ಲಿ ಮತ್ತು ಎಲ್ಲಾ ಸರ್ಕಾರಿ ಕಾರ್ಯಕ್ರಮ ಗಳಲ್ಲಿ…ಅದ್ದೂರಿ ಸಸ್ಯಾಹಾರದ ಬದಲು….
ಸರಳ ಮಾಂಸಾಹಾರ, ಸರಳ ಸಸ್ಯಾಹಾರವನ್ನು ಒತ್ತಾಯಿಸ ಬೇಕು…
2. ಇದರಾಚೆಗೆ ಸಾಹಿತ್ಯವೂ ದುಡಿವ ಜನರ ಖಡ್ಗವಾಗದೆ ದಿನೇ ದಿನೇ ಉಳ್ಳವರ ಪರೋಕ್ಷ ಪರಾಕು ಸಾಹಿತ್ಯವೋ ಅಥವಾ ಮೇಲೆ ಚಲಿಸುತ್ತಿರುವ ವರ್ಗ ವ್ಯಕ್ತಿಗಳ ವಿರಾಮ ವ್ಯಸನಗಳ ಅಭಿವ್ಯಕ್ತಿ ಮಾತ್ರ ಆಗುತ್ತಿರುವುದೇಕೆಂದು ಯೋಚಿಸಬೇಕು….
ಅದಕ್ಕೆ ಒಂದು ಜನಪರ್ಯಾಯ ಕಟ್ಟುವುದರ ತುರ್ತು ಇರುವುದನ್ನು ಮನಗಾಣಬೇಕಿದೆ…




