Saturday, November 21, 2026

ಪ್ರಾಯೋಗಿಕ ಆವೃತ್ತಿ

ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟಕ್ಕೆ ಆಗ್ರಹ | ಮಂಡ್ಯ ಜಿಲ್ಲಾಡಳಿತಕ್ಕೆ ಇಂದು ಸಂಜೆ 5ರ ಗಡುವು

ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ 87ನೇ ಸಮ್ಮೇಳನದಲ್ಲಿ ಮಾಂಸಾಹಾರ ನೀಡಬೇಕೆಂದು ಹಲವಾರು ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು, ಇಂದು (ಡಿ.19) ಸಂಜೆ 5 ಗಂಟೆಯೊಳಗೆ ಮಾಂಸಾಹಾರ ನೀಡುವ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಬೇಕು, ಇಲ್ಲವಾದಲ್ಲಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ನಾವು ದ್ರಾವಿಡರು ಸಂಘಟನೆಯ ಅಭಿಗೌಡ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಅಸಮಾನತೆಯನ್ನು ತೊಡೆದು ಹಾಕಲು ನಾವು ಈಗಾಗಲೇ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಆಹಾರ ಕ್ರಾಂತಿ ಚಳುವಳಿ ನಡೆಸುತ್ತಿರುವುದು ಇಡೀ ರಾಜ್ಯದ ಗಮನ ಸೆಳೆದಿದೆ, ಇದು ಒಂದು ಚಳವಳಿಯ ರೂಪ ಪಡೆದಿದೆ, ಹಾಗಾಗಿ ಎಲ್ಲರೂ ಜಿಲ್ಲಾಡಳಿತದ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಜಿಲ್ಲಾಡಳಿತ ತನ್ನ ನಿಲುವನ್ನು ಸ್ಪಷ್ಟಪಡಿಸದೇ ಇದ್ದರೆ ಮುಂದಾಗುವ ಎಲ್ಲ ಬೆಳೆವಣಿಗೆಗಾಗಿ ಹೊಣೆ ಹೊರ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮ್ಮೇಳನದಲ್ಲಿ ಸಸ್ಯ ಆಹಾರ ನೀಡುತ್ತಿರುವ ಸಂಬಂಧ ಆಹಾರದಲ್ಲಿ ಅಸಮಾನತೆ ಉಂಟಾಗಿ ಸಸ್ಯ ಆಹಾರವು ಮಾಂಸಾಹಾರದ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ತಮಗೆ ತಿಳಿದ ಮತ್ತು ಕಂಡು ಕೇಳ ಅರಿಯದ ವಿಷಯವಾಗಿರುತ್ತದೆ. ಆದ್ದರಿಂದ ಸದರಿ ವಿಚಾರದಲ್ಲಿ ಜಿಲ್ಲಾಡಳಿತ ಹಾಗೂ ಸಮ್ಮೇಳನ ಉಸ್ತುವಾರಿ ವಹಿಸಿರುವ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರು ಮತ್ತು ಆಹಾರ ಸಮಿತಿಯ ಅಧ್ಯಕ್ಷರು ಹಾಗೂ ಇತರೆ ಸದಸ್ಯರುಗಳಿಗೆ ಈಗಾಗಲೇ ನಾವು ಲಿಖಿತ ರೂಪದಲ್ಲಿ ಲಿಖಿತವಾಗಿ ಸಾರ್ವಜನಿಕ ಆಹಾರ ಪದ್ಧತಿಯಲ್ಲಿ ಶೋಷಣೆ ಮತ್ತು ಅಸ್ಪೃಶತೆ ಆಚರಣೆಯಾಗದಂತೆ ತಡೆಯಬೇಕು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಗಂಗರಾಜು, ನರಸಿಂಹಮೂರ್ತಿ, ಹೆಚ್.ಡಿ.ಜಯರಾಂ, ಜೆ.ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ