Monday, November 23, 2026

ಪ್ರಾಯೋಗಿಕ ಆವೃತ್ತಿ

ಮಾಂಸಾಹಾರಕ್ಕೆ ಮುನ್ನಡಿ ಬರೆದ ‘ಮಂಡ್ಯ ಸಾಹಿತ್ಯ ಸಮ್ಮೇಳನ’ | ಆಹಾರ ಸಮಿತಿಯಿಂದಲೇ ಅಧಿಕೃತವಾಗಿ ಮೊಟ್ಟೆ ವಿತರಣೆ

ಇದುವರೆಗೆ ನಡೆದ 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಾಂಸಾಹಾರವನ್ನು ಮೂಲೆ ಗುಂಪು ಮಾಡಿ, ಸಸ್ಯಾಹಾರವನ್ನೇ ಹೇರಿಕೆ ಮಾಡಿದ್ದರ ವಿರುದ್ದ ಮಂಡ್ಯದ ನೆಲೆದಲ್ಲಿನ ಪ್ರಗತಿಪರ ಸಂಘಟನೆಗಳ ಮುಖಂಡರು ನಡೆಸಿದ ಹೋರಾಟ ಅಂತಿಮವಾಗಿ ವಿಜಯ ಸಿಕ್ಕಿದೆ.

ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ರಾತ್ರಿಯ ಊಟಕ್ಕೆ ಆಹಾರ ಸಮಿತಿಯು ಹತ್ತಾರು ಸಾವಿರ ಮೊಟ್ಟೆಗಳನ್ನು ವಿತರಣೆ ಮಾಡಿದೆ. ಇದರಿಂದಾಗಿ ಇಷ್ಟು ದಿನ ಹೋರಾಟ ಮಾಡಿದ ಪ್ರಗತಿಪರ ಮುಖಂಡರು ಸಂತಸ ಹಂಚಿಕೊಂಡಿದ್ದು, ನಮ್ಮ ಹೋರಾಟಕ್ಕೆ ಅಂತಿಮವಾಗಿ ಜಯ ಸಿಕ್ಕಿದೆ ಎಂದಿದ್ದಾರೆ.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆದ  ಚಲುವರಾಯಸ್ವಾಮಿಯವರು, ನಮ್ಮೊಂದಿಗೆ ಮಾತುಕತೆ ನಡೆಸಿ ಕೊನೆ ದಿನ ಮೊಟ್ಟೆ ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದರು. ಅವರು ನುಡಿದಂತೆ ನಡೆದುಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ, ಮಂಡ್ಯದಲ್ಲಿ ಆಹಾರ ಸಮಾನತೆಗಾಗಿ ನಾವು ನಡೆಸಿದ ಹೋರಾಟ ಇತಿಹಾಸದ ಪುಟದಲ್ಲಿ ದಾಖಲಾಗಲಿದೆ ಎಂದು ತಿಳಿಸಿದ್ಧಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ