Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪ್ರಗತಿಪರ ಸಂಘಟನೆಗಳಿಂದ ಕುವೆಂಪು ಜನ್ಮದಿನ ಆಚರಣೆ

ಮಂಡ್ಯದ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಇಂದು ಮಂಡ್ಯದ ಪ್ರವಾಸಿ ಮಂದಿರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಣೆ ಮಾಡಲಾಯಿತು.

ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕುವೆಂಪು ಅವರ ಸ್ಮರಣೆ ಮಾಡಲಾಯಿತು. ವಕೀಲ ಚೀರನಹಳ್ಳಿ ಲಕ್ಷ್ಮಣ್ ಮಾತನಾಡಿ, ಮೌಢ್ಯದ ವಿರುದ್ದ ಸಮರ ಸಾರಿದ್ದ ಕುವೆಂಪು ಅವರ ವೈಚಾರಿಕ ಪ್ರಜ್ಞೆ ಇಂದಿಗೂ ಪ್ರಸ್ತುತವಾಗಿದೆ. ಅವರ ಪರಿಕಲ್ಪನೆಯ ಅಡಂಬರವಿಲ್ಲದ ಮಂತ್ರಮಾಂಗಲ್ಯ ಮದುವೆಯು ಲಕ್ಷಾಂತರ ಜನರ ಜೀವನವನ್ನು ಬೆಳಕಾಗಿಸಿದೆ ಎಂದು ಸ್ಮರಿಸಿದರು.

ದಸಂಸ ಮುಖಂಡ ಸೋಮನಹಳ್ಳಿ ಅಂದಾನಿ ಮಾತನಾಡಿ, ಶ್ರೂದ ಸಮುದಾಯದಲ್ಲಿ ಜನಿಸಿ ಕರ್ನಾಟಕಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಪುಟ್ಟಪ್ಪ ಅವರ ಸಾಧನೆ ಒಂದು ಮೈಲಿಗಲ್ಲಾಗಿದೆ. ಅವರ ಸಾಹಿತ್ಯ ಕೃಷಿಯನ್ನು ಗಮನಿಸಿ ಅವರನ್ನು ಕನ್ನಡದ ಷೇಕ್ಸ್‌ಪಿಯರ್ ಎಂದು ಬಣ್ಣಿಸಲಾಗುತ್ತದೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಸ್ವಾಭಿಮಾನಿ ಸಮ ಸಮಾಜದ ನರಸಿಂಹಮೂರ್ತಿ, ದಸಂಸ ಮುಖಂಡ ಎಂ.ವಿ.ಕೃ‍ಷ್ಣ, ವಕೀಲ ಜೆ.ರಾಮಯ್ಯ, ಅಂಬೇಡ್ಕರ್ ವಾರಿಯರ್ಸ್ ಗಂಗರಾಜು, ಸಾಹಿತಿ ಶಂಕರಪ್ಪಗೌಡ, ಅಹಿಂದ ಮುಖಂಡ ಶಿವರುದ್ರಪ್ಪ, ನಂಜುಂಡ ಮೌರ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ