Thursday, November 19, 2026

ಪ್ರಾಯೋಗಿಕ ಆವೃತ್ತಿ

ಸರ್ಕಾರದ ಸೌಲಭ್ಯ ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ದೊರೆಯಲಿ: ದರ್ಶನ್ ಪುಟ್ಟಣ್ಣಯ್ಯ

ಇಂದಿನ ಕೆಟ್ಟ ವ್ಯವಸ್ಥೆಯ ನಡುವೆಯೂ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳು ಪ್ರಾಮಾಣಿಕವಾಗಿ ದೊರೆಯುವಂತೆ ಮಾಡಲು ಸರ್ಕಾರಿ ನೌಕರರು ಮುಂದಾಗಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಾಂಡವಪುರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ತಾಲೂಕು‌ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಭಿವೃದ್ದಿಯಲ್ಲಿ ರಾಜಕಾರಣ ಬೇಡ
ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಆದರೆ ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ದೊರಕಿಸುವಾಗ ರಾಜಕಾರಣ ಸಲ್ಲದು. ಎಲ್ಲಾ ಸರ್ಕಾರಿ ನೌಕರರು ಒಗ್ಗಟ್ಟಾಗಿ ದುಡಿಯುವ ಮೂಲಕ ಬಡ ವರ್ಗದವರು ಹಾಗೂ ಸಾಮಾನ್ಯ ಜನರನ್ನು ಮೇಲಕ್ಕೇತ್ತುವ ಕೆಲಸ ಮಾಡಬೇಕು ಎಂದು ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಹೊಸ ವರ್ಷವು ತಾಲೂಕಿನ ಸರ್ಕಾರಿ ನೌಕರರಿಗೆ ಹಾಗೂ ಎಲ್ಲಾ ಶಿಕ್ಷಕರಿಗೂ ಒಳ್ಳೆಯದನ್ನು ಮಾಡಲಿ. ಜತೆಗೆ ನೂತನ ವರ್ಷದಲ್ಲಿ ಮಳೆ, ಬೆಳೆ ಉತ್ತಮವಾಗಿ ಬಂದು ರೈತರು ಸಮೃದ್ದಿ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.

ಭವನಗಳ ದುರಸ್ತಿ ಭರವಸೆ : ತಾಲೂಕು ಸರ್ಕಾರಿ ನೌಕರರ ಭವನದ ದುರಸ್ತಿ ಕಾರ್ಯ ಮಾಡಿಸಲು ಬದ್ಧನಿದ್ದೇನೆ. ಜತೆಗೆ ತಾಲೂಕಿನ ಶಿಕ್ಷಕರೆಲ್ಲರೂ ಒಂದೆಡೆ ಸೇರಿ ಚಟುವಟಿಕೆ ನಡೆಸುವ ಶಿಕ್ಷಕರ ಭವನವನ್ನು ಮೊದಲ ಆಧ್ಯತೆಯನ್ನಾಗಿ ಪರಿಗಣಿಸಿ ಅದರ ಮೇಲಂತಸ್ತಿನ ಕಾಮಗಾರಿ ಹಾಗೂ ಕೆಳ ಹಂತಸ್ತಿನ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.

ಈ ವೇಳೆ ತಹಸೀಲ್ದಾರ್ ಎಸ್.ಸಂತೋಷ್, ತಾ.ಪಂ ಇಒ ಲೋಕೇಶ್‌ಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ, ಮಾಜಿ ಅಧ್ಯಕ್ಷ ಎಸ್.ಪರಮೇಶ್, ರಾಜ್ಯ ಪರಿಷತ್ ಸದಸ್ಯ ಡಾ.ಸಿ.ಎ.ಅರವಿಂದ, ಖಜಾಂಚಿ ಎನ್.ಜೆ.ಜಯರಾಮು, ಕಾರ್ಯದರ್ಶಿ ಎಂ.ಡಿ.ಕುಮಾರ್, ಗೌರವಾಧ್ಯಕ್ಷ ಎಸ್.ಶ್ರೀನಿವಾಸ್, ಹಿರಿಯ ಉಪಾಧ್ಯಕ್ಷರಾದ ಎಂ.ವಿ.ರಮ್ಯಶ್ರೀ, ಡಿ.ಪಿ.ಕುಮಾರ್, ಉಪಾಧ್ಯಕ್ಷರಾದ ಸಂಜೀವ್ ರಾಥೋಡ್, ಸಿ.ನಂದಕುಮಾರ್, ಸಿ.ಲೋಕೇಶ್, ಸಹ ಕಾರ್ಯದರ್ಶಿಗಳಾದ ಎಚ್.ಪಿ.ಮಂಜುನಾಥ್, ಎಚ್.ಗಿರೀಶ್ ಸೇರಿದಂತೆ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ