Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ರಮೇಶ್ ಮನದಾಳದ ಮಾತು….

‘ನಟನ’ ಅನ್ನುವ ಪುಟ್ಟ ಜಗತ್ತೊಂದು ನನ್ನ ತಲೆಯಲ್ಲಿ ಮೊಳೆಯಲು ನೀನಾಸಮ್ ಮತ್ತು ರಂಗಾಯಣಗಳೆರಡೂ ನನ್ನನ್ನ ಅಪಾರವಾಗಿ ಪ್ರಭಾವಿಸಿದ್ದೇ ನಿಜದ ಕಾರಣ ಅಂತ ನಂಬಿಕೊಂಡವ ನಾನು…ಇವತ್ತು ಸಂಜೆ ಧುತ್ತೆಂದು ಮಿತ್ರ ಮತ್ತು ಗುರು ಎರಡೂ ಆಗಿರುವ ಕೆ ವಿ ಅಕ್ಷರ, ಗೆಳತಿ ಮತ್ತು ತಿರುಗಾಟದಲ್ಲಿ ಸಹೋದ್ಯೋಗಿ ಆಗಿದ್ದ ವಿದ್ಯಾ ಹೆಗಡೆ ‘ನಟನ’ದ ಆವರಣಕ್ಕೆ ಬಂದು ಇಡೀ ನಟನ ನೋಡಿ,ಅದೆಷ್ಟು ಸಂತೋಷಪಟ್ಟರು ಅಂದರೇ ನಮಗೆಲ್ಲ ಅಪಾರ ಹೆಮ್ಮೆ ಅನಿಸಿತು.

ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ನಟನೆ, ರಂಗಭೂಮಿಯ ಅಗತ್ಯಗಳನ್ನು ವಿವೇಚನಾ ಪೂರ್ಣವಾಗಿ ಘನತೆಯಿಂದ ಮನಮುಟ್ಟುವಂತೆ ತಿಳಿಸಿಕೊಟ್ಟರು ಅಕ್ಷರ. 75 ವರ್ಷಗಳ ಸುದೀರ್ಘ ಸಾಂಸ್ಕೃತಿಕ ಇತಿಹಾಸ ಇರುವ ನೀನಾಸಂನ ಪ್ರತಿನಿಧಿಯಾಗಿ ಆತ ಮಾತನಾಡುತ್ತಿದ್ದರೇ ಅನುಭವದ ಗಣಿಯ ತರಂಗಗಳು ಮಾರ್ದನಿಸುತ್ತಿತ್ತು.

ವಿದ್ಯಾರ್ಥಿಗಳಂತೆ ನನಗೂ ಇದೊಂದು ಸುಂದರ ಸಂಜೆ. ರಂಗಭೂಮಿಯ ಬಗೆಗಿರುವ ಅವರ ದೂರದರ್ಶಿತ್ವದ ಚಿಂತನೆಗಳು ಮಹತ್ವದ್ದು ಅಂತ ಮತ್ತಷ್ಟು ಮನವರಿಕೆ ಆಯಿತು. ಅವರನ್ನು ಬೀಳ್ಕೊಟ್ಟ ಮೇಲೆ
ನೆನಪುಗಳು ಮತ್ತು ವಾಸ್ತವದ ನಿಜದ ಕಲಿಕೆಗಳಿಗೆ ಎಷ್ಟೊಂದು ಚೈತನ್ಯ ಇದೆ ಅನಿಸಿ ಮನಸು ಮತ್ತಷ್ಟು ಮುದಗೊಂಡಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ