Thursday, November 19, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ | ರಾತ್ರಿ ವೇಳೆ 3 ಕಡೆ ಕಳ್ಳತನಕ್ಕೆ ವಿಫಲ ಯತ್ನ

ಪಾಂಡವಪುರ ಪಟ್ಟಣದ ಹಾರೋಹಳ್ಳಿ ಗ್ರಾಮದಲ್ಲಿ ಕಳ್ಳರ ಗುಂಪೊಂದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಘಟನೆ ಭಾನುವಾರ ಮಧ್ಯರಾತ್ರಿ  ನಡೆದಿದೆ.

ಗ್ರಾಮದ ಆಲೆಮನೆ ಬೀದಿಯಲ್ಲಿರುವ ಚಿಕ್ಕಬೋಯಿ ಅವರ ಪುತ್ರ ರಾಮಕೃಷ್ಣ ಅವರಿಗೆ ಸೇರಿದ ಹೆಂಚಿನ ಮನೆಯ ಮೇಲೆ ಓಡಾಡಿರುವ ಕಳ್ಳರು ಹೆಂಚು ತೆಗೆದು ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ನಾಯಿಗಳು ಬೊಗಳಲು ಶುರು ಮಾಡಿದ್ದರಿಂದ ಎಚ್ಚೆತ್ತ ಅಕ್ಕ ಪಕ್ಕ ನಿವಾಸಿಗಳು ಹೊರಬಂದು ನೋಡಲಾಗಿ ಕಳ್ಳರ ಗುಂಪು ನಾಯಿಗಳ ಮೇಲೆ ಕಲ್ಲು ತೂರಿ ಅಲ್ಲಿಂದ ಪರಾರಿಯಾಗಿದ್ದಾರೆ.

ಇದೇ ರೀತಿ ನಿನ್ನೆ ಹಾಗೂ ಮೊನ್ನೆ ದಿನವೂ ಗ್ರಾಮದ ಅಲೆಮನೆ ಪಕ್ಕದ ಬೀದಿಯ ನಿವಾಸಿ ಪಾರ್ವತಿ ಹಾಗೂ ನಿವೃತ್ತ ಪೊಲೀಸ್ ಆಧಿಕಾರಿ ರಾಮೇಗೌಡರ ಖಾಲಿ ಮನೆಯ ಬೀಗ ಹೊಡೆದಿರುವ ಕಳ್ಳರು ಅಲ್ಲಿ ಯಾವುದೇ ಹಣ, ಒಡವೆ ಏನೂ ಸಿಗದ ಕಾರಣ ಅಲ್ಲಿಂದಲೂ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ‌.

ಗ್ರಾಮಸ್ಥರಲ್ಲಿ ಭೀತಿ

ಕಳ್ಳರ ಗುಂಪು ಗ್ರಾಮದ ಮೂರು ಕಡೆಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಹೀಗಾಗಿ ಪೊಲೀಸರು ರಾತ್ರಿ ಗಸ್ತು ತಿರುಗುವ ಮೂಲಕ ಕಳ್ಳರ ಗುಂಪನ್ನು ಪತ್ತೆ ಮಾಡಿ ಗ್ರಾಮಸ್ಥರ ಆತಂಕವನ್ನು ದೂರ ಮಾಡಬೇಕಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ