19ನೇ ಶತಮಾನದಲ್ಲಿ ಶಿಕ್ಷಣದ ಮೂಲಕ ಅಕ್ಷರ ಕ್ರಾಂತಿ ಮಾಡಿದ ದೇಶದ ಮೊದಲ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಂ ನವೀನ್ ಕುಮಾರ್ ಬಣ್ಣಿಸಿದರು.
ಮಂಡ್ಯ ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿರುವ ಗುಡ್ ಷಫರ್ಡ್ ಶಾಲೆಯಲ್ಲಿ ಗುಡ್ ಷಫರ್ಡ್ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ 194ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಅಕ್ಷರ ಬರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ, ಅಂದಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ನಿಷೇಧವಿತ್ತು, ಬ್ರಿಟೀಷರ ಆಡಳಿತ ಕಾಲದಲ್ಲಿ ಸಾರ್ವತ್ರಿಕ ಶಿಕ್ಷಣ ಜಾರಿ ಇದ್ದರೂ ಮಹಿಳೆರು-ಹೆಣ್ಣು ಮಕ್ಕಳು ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲ್ಲಿಲ್ಲ, ಅಂತಹ ದಿನಮಾನಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು ಎಂದು ನುಡಿದರು.

ಪತಿ ಜ್ಯೋತಿಬಾಫುಲೆಯಿಂದ ಶಿಕ್ಷಣ ಕಲಿತ ಸಾವಿತ್ರಿಬಾಯಿಫುಲೆ ಅವರು, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ 18 ಶಾಲೆಗಳನ್ನು ತೆರೆದರು, ಭಾರತದೇಶದ ಆಧುನಿಕ ಶಿಕ್ಷಣ ಶಿಲ್ಪಿಗಳಲ್ಲಿ ಜ್ಯೋತಿಬಾಫುಲೆ ಮತ್ತು ಸಾವಿತ್ರಿಬಾಯಿಫುಲೆ ಅವರ ಮೊದಲಿಗರಾಗುತ್ತಾರೆ, ಇವರ ತ್ಯಾಗ ಮತ್ತು ಕೊಡುಗೆ ಅಪಾರ ಎಂದರು.
ಮಹಿಳೆಯರಿಗೆ ಶಿಕ್ಷಣ ನಿಷೇಧವಿದ್ದ ಕಾಲಘಟ್ಟದಲ್ಲಿ ಇವರು ಮಾಡಿದ ಶಿಕ್ಷಣ ಕ್ರಾಂತಿಯಿಂದ ಈಗ ಮನೆ ಮನೆಯಲ್ಲೂ ವಿದ್ಯಾವಂತ ಮಹಿಳೆರು, ಉದ್ಯೋಗ-ಉದ್ಯಮ ಮಾಡುವ ಸಾಧನಕ ಮಹಿಳೆಯರ ಕಾಣಬುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಡೇ ದೇವಾಲಯ ಸಭಾಪಾಲಕ ರೆ. ಆ್ಯಂಡ್ರೂಜಾನ್, ಶಾಲೆಯ ಅಧ್ಯಕ್ಷ ಜಾರ್ಜ್ ಮೋಹನ್ ಕುಮಾರ್, ವಿಶ್ವಜ್ಞಾನಿ ಸೇವಾ ಟ್ರಸ್ಟ್ ನಿರ್ದೇಶಕ ತಾಳಶಾಸನ ಮೋಹನ್, ಶಾಲೆಯ ಕಾರ್ಯದರ್ಶಿ ಎ.ಮೋರಿಸ್ ಜೈಕುಮಾರಿ, ಸಂಸ್ಥಾಪಕ ಅಧ್ಯಕ್ಷ ವೈ. ಥಾಮಸ್ ಬೆಂಜಮಿನ್, ಶಿಕ್ಷಕವೃಂದ ಹಾಜರಿದ್ದರು.




