Monday, November 23, 2026

ಪ್ರಾಯೋಗಿಕ ಆವೃತ್ತಿ

ಮೂಡಲಪಾಯ ಯಕ್ಷಗಾನ ಕಲಿಕಾ ತರಗತಿ ಆರಂಭ ; ಪ್ರೊ.ಜಯಪ್ರಕಾಶ್‌ಗೌಡ

ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತಿನ ಸಹಯೋಗದೊಂದಿಗೆ ಕರ್ನಾಟಕ ಸಂಘದಲ್ಲಿ ಒಂದು ವರ್ಷದ ಮೂಡಲಪಾಯ ಯಕ್ಷಗಾನ ಕಲಿಕಾ ತರಗತಿಗಳನ್ನು ಆರಂಭಿಸಲು ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಪ್ರದರ್ಶಕ ವಿಶ್ವವಿದ್ಯಾಲಯದಿಂದ ಅನುಮತಿ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ತಿಳಿಸಿದರು.

ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ತರಗತಿಗಳನ್ನು ಫೆಬ್ರವರಿ ಮಾಹೆಯಿಂದ ಪ್ರಾರಂಭಿಸಲಿದ್ದು, ಕಲಿಕಾ ಕೇಂದ್ರದ ಶೈಕ್ಷಣಿಕ ತರಬೇತಿ ಅವಧಿ ೧೦ ತಿಂಗಳುಗಳಾಗಿದ್ದು, ೧೮ರಿಂದ ೪೦ ವರ್ಷದ ಆಸಕ್ತರು ಅರ್ಜಿ ಸಲ್ಲಿಸಿ ನೊಂದಾಯಿಸಿಕೊಳ್ಳಬಹುದಾಗಿದೆ ಎಂದರು.

ತರಬೇತಿಗೆ ೧೫ರಿಂದ ೪೦ ಮಂದಿ ಪ್ರವೇಶಕ್ಕೆ ಅವಕಾಶವಿದ್ದು, ಕನಿಷ್ಠ ೧೦ನೇ ತರಗತಿಯ ವಿದ್ಯಾರ್ಹತೆ ಹೊಂದಿರಬೇಕು. ಪ್ರತಿ ಶನಿವಾರ ಮಧ್ಯಾಹ್ನ ೦೨ರಿಂದ ಭಾನುವಾರ ಮಧ್ಯಾಹ್ನ ೦೨ರವೆಗೆ ತರಗತಿಗಳು ನಡೆಯಲಿದ್ದು, ಕಾಲಿಕಾರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವ್ಯವಸ್ಥೆ ಸೌಲಭ್ಯ ನೀಡಲಾಗುವುದು. ಇದಕ್ಕೆ ವಾರ್ಷಿಕ ೨೦೦೦ ರೂ.ಗಳ ಶುಲ್ಕ ನಿಗದಿ ಪಡಿಸಿದ್ದು, ವಾರ್ಷಿಕ ಪರೀಕ್ಷೆ ನಂತರ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರ ನೀಡಲಾಗುವುದು ಎಂದು ವಿವರಿಸಿದರು.

ಅರ್ಜಿ ಸಲ್ಲಿಸುವವರು ಕರ್ನಾಟಕ ಸಂಘದ ಕಛೇರಿಯಿಂದ ನೇರವಾಗಿ ಅಥವಾ ಅಂಚೆಯ ಮೂಲಕ ಅರ್ಜಿ ಶುಲ್ಕ ೨೫ ರೂ ನೀಡಿ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಜನವರಿ ೨೫ ರೊಳಗೆ ಸಲ್ಲಿಸತಕ್ಕದ್ದ. ಫೆಬ್ರವರಿ ಮಾಹೆ ೦೮ರಂದು ಕಲಿಕಾ ಕೇಂದ್ರ ಉದ್ಘಾಟನೆಗೊಳ್ಳಲಿದ್ದು, ಫೆ.೦೯ರಿಂದ ತರಗತಿಗಳು ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕಲಿಕಾ ಕೇಂದ್ರದ ಪ್ರಾಂಶುಪಾಲ ಪ್ರಮೋದ್ ಶಿಗ್ಗಾಂವ್, ನಿರ್ವಹಕ ಶಶಿಧರ ಭಾರಿಘಾಟ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ