Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಶ್ರೀಗಂಧ ಕಳ್ಳರ ಬಂಧನ ; 20 ಕೆ.ಜಿ ಶ್ರೀಗಂಧದ ತುಂಡುಗಳ ವಶ

ಮಂಡ್ಯ ಜಿಲ್ಲೆಯ ಹುಲಿಕೆರೆ ಮೀಸಲು ಅರಣ್ಯ ಪ್ರದೇಶ ಕನಗನಮರಡಿ ಗ್ರಾಮದ ಸರ್ವೆ ನಂ.86ರಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ, ಶ್ರೀಗಂಧ ಮರವನ್ನು ಬೇರು ಸಮೇತ ಕಿತ್ತು ತುಂಡುಗಳಾಗಿ ಪರಿವರ್ತಿಸುತ್ತಿದ್ದಾದ್ದ ತಮಿಳುನಾಡು ಮೂಲದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಕಳೆದ ಜ.11ರಂದು ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಶ್ರೀಗಂಧ ಮರವನ್ನು ಬೇರು ಸಮೇತ ಕಿತ್ತು ತುಂಡುಗಳಾಗಿ ಪರಿವರ್ತಿಸುತ್ತಿದ್ದಾಗ ವಲಯ ಅರಣ್ಯ ಅಧಿಕಾರಿಗಳಾದ ಶೈಲಜಾ.ಎಲ್ ಹಾಗೂ ಸಿಬ್ಬಂದಿ ವರ್ಗದವರು ಆರೋಪಿಗಳನ್ನು ಬಂಧಿಸಿ ಅರಣ್ಯ ಮೊಕದ್ದಮೆ ಹೂಡಿ, ಅವರಿಂದ ಅಂದಾಜು 20 ಕೆಜಿ ತೂಕದ ಶ್ರೀಗಂಧದ ಮರವನ್ನು ವಶ ಪಡೆದಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ನಾಗರಾಜು, ಗಸ್ತು ಅರಣ್ಯ ಪಾಲಕ ಲೋಕೇಶ್, ಸಿಬ್ಬಂದಿಗಳಾದ ಬಿ.ಎಂ.ಉಲ್ಲಾ, ರಾಜೇಶ್, ಚಂದ್ರ ಹಾಗೂ ಭರತ್ ಪಾಲ್ಗೊಂಡಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ