ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿಯಲ್ಲಿ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಪ್ರಥಮ ವರ್ಷದ ಬಿಇ ವಿದ್ಯಾರ್ಥಿಯೊಬ್ಬ ಮುಳುಗಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೈಸೂರು ಜಿಲ್ಲೆ ನಾಗನಹಳ್ಳಿ ಗ್ರಾಮದ ನಿವಾಸಿ ಎಸ್. ಶ್ರೇಯಸ್ ಎಂಬಾತನೇ ಸಾವನ್ನಪ್ಪಿದ ವಿದ್ಯಾರ್ಥಿ. ಶ್ರೇಯಸ್ ಪಾಲಹಳ್ಳಿ ಸಮೀಪದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿ.ಇ ಓದುತ್ತಿದ್ದ.ಇಂದು ಬೆಳಿಗ್ಗೆ
ಶ್ರೇಯಸ್ ತನ್ನ ಮೂವರು ಸ್ನೇಹಿತರೊಂದಿಗೆ ಬಲಮುರಿಗೆ ಈಜಲು ತೆರಳಿದ್ದ. ಈಜು ಬಾರದ ಸ್ನೇಹಿತರು ನದಿ ದಡದಲ್ಲಿಯೇ ಉಳಿದಿದ್ದು, ಈಜು ಬರುವ ಕಾರಣ ಶ್ರೇಯಸ್ ಏಕಾಂಗಿಯಾಗಿ ನದಿಗೆ ಇಳಿದಿದ್ದ. ಈ ವೇಳೆ ನದಿಯ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಶ್ರೇಯಸ್ ಸಾವಿಗೀಡಾಗಿದ್ದಾನೆ.
ಈ ಸಂಬಂಧ ಕೆಆರ್‌ಎಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಬಲಮುರಿಯಲ್ಲಿ ಸುಳಿಗಳಿದ್ದು, ಈಜ ಬಾರದೆಂದು ಎಚ್ಚರಿಕೆ ನೀಡಿದ್ದರೂ ನದಿಗೆ ಇಳಿದು ಸುಳಿಗೆ ಸಿಲುಕಿ ಹಲವರು ಸಾವಿಗೀಡಾಗಿರುವುದು ಆತಂಕ ಮೂಡಿಸಿದೆ.




