ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ಯಾನವನದ ಸ್ವಚ್ಚತಾ ಕಾರ್ಯಕ್ರಮ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು.
ಶಾಸಕ ನರೇಂದ್ರಸ್ವಾಮಿ ಮಾರ್ಗದರ್ಶನದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಹಾಗೂ ಸಿ.ಪಿ ರಾಜು ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸ್ಪಚ್ಚತೆ ಕಾರ್ಯ ಮಾಡಿದರು.
ಬೆಳಿಗ್ಗೆ 9 ಗಂಟೆಯಿಂದ ದೊಡ್ಡಕೆರೆಗೆ ಹೊಂದಿಕೊಂಡಂತೆ ಇರುವ ಉದ್ಯಾನವನದ ವಾಕಿಂಗ್ ರಸ್ತೆಯಲ್ಲಿ ಗಿಡಗಳು ಸಾಕಷ್ಟು ಬೆಳೆದು ಸಾರ್ವಜನಿಕರು ವಾಕಿಂಗ್ ಮಾಡಲು ಆಗದೆ ಸಾರ್ವಜನಿಕ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದನ್ನು ಮನಗೊಂಡ ಶಾಸಕ ನರೇಂದ್ರಸ್ವಾಮಿಯವರು ಪಕ್ಷದ ತಾಲ್ಲೂಕು ಅಧ್ಯಕ್ಷ ರಾಜು ಹಾಗೂ ದೊಡ್ಡಯ್ಯ ಮತ್ತು ಕಾರ್ಯಕರ್ತರ ಜೊತೆ ಸಮಾಲೋಚನೆ ಮಾಡಿ ಕಾಂಗ್ರೆಸ್ ಪಕ್ಷದ ವತಿಯಿಂದ ಒಂದು ದಿನದ ಸ್ಪಚ್ಚತಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಿ, ಇಂದು ಸ್ವಚ್ಚತಾ ಕಾರ್ಯಕ್ರಮ ಸುಮಾರು 2 ಕಿಲೋ ಮೀಟರ್ ನಷ್ಟು ಸ್ಪಚ್ಚತೆ ಮಾಡಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿಪಿ ರಾಜು ಮತ್ತು ದೊಡ್ಡಯ್ಯ ಮಾತನಾಡಿ, ಕಳೆದ ಅವಧಿಯಲ್ಲಿ ನಮ್ಮ ಶಾಸಕರು ಕೆರೆಯನ್ನು ಸೌಂದರ್ಯೀಕರಣ ಮತ್ತು ಸಾರ್ವಜನಿಕರ ಹಿತಾಸಕ್ತಿಯಿಂದ ಪಟ್ಟಣದಲ್ಲಿ ಪ್ರಥಮ ಬಾರಿಗೆ ವಾಕಿಂಗ್ ಪಾರ್ಕನ್ನು ಮಾಡಿಸಿದರು. ನಂತರ ಬಂದಂತಹ ಜನಪ್ರತಿನಿಧಿಗಳು ಇಚ್ಛಾಶಕ್ತಿಯ ಕೊರತೆಯಿಂದ ಈ ವಾಕಿಂಗ್ ಪಾರ್ಕ್ ಅನೈತಿಕ ಚಟುವಟಿಕೆಗಳಿಗೆ ಅನುಕೂಲವಾಗಿತ್ತು. ಇದನ್ನು ಗಮನಿಸಿದ ನಮ್ಮ ಶಾಸಕರು ನಮ್ಮ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಶ್ರಮದಾನದ ಮೂಲಕ ಸ್ವಚ್ಛತೆ ಮಾಡಬೇಕೆಂದು ಮಾರ್ಗದರ್ಶನ ನೀಡಿದ ಹಿನ್ನೆಲೆಯಲ್ಲಿ ಇಂದು ನೂರಾರು ಕಾರ್ಯಕರ್ತರೊಡನೆ ಸ್ವಚ್ಛತೆ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ.
ಈ ವೇಳೆ ಮನ್ ಮುಲ್ ನಿರ್ದೇಶಕ ವಿಶ್ವಾಸ, ಯುವ ಕಾಂಗ್ರೆಸ್ ನ ಕೃಷ್ಣಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಶ್, ವೇದಮೂರ್ತಿ, ತಾ.ಪಂ.ಮಾಜಿ ಉಪಾಧ್ಯಕ್ಷ ಮಾರ್ಕಾಲು ಮಾಧು, ಗ್ಯಾರಂಟಿ ಯೋಜನೆ ಸದಸ್ಯರು, ಪುರಸಭೆ ಸದಸ್ಯರು, ಮಾಜಿ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಇದ್ದರು.




