ಜನವರಿ 29 ಮತ್ತು 30ರಂದು ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಂಜೆ 5 ಗಂಟೆಗೆ ಮಕ್ಕಳ ನಾಟಕೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ರಂಗಬಂಡಿ ಟ್ರಸ್ಟ್ ಅಧ್ಯಕ್ಷ ಮಧು ತಿಳಿಸಿದರು.
ಮಳವಳ್ಳಿ ಪಟ್ಟಣದ ವಿಶ್ವ ಮಾನವ ವಿಚಾರ ವೇದಿಕೆ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ನಾಟಕ ಅಕಾಡಮಿ ಸಹಯೋಗದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ರಂಗಬಂಡಿ ಮಕ್ಕಳ ನಾಟಕೋತ್ಸವ – 2025 ಜರುಗಲಿದೆ ಮಕ್ಕಳಲ್ಲಿ,ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸುವುದ್ದಕಾಗಿ ಮತ್ತು ಗ್ರಹಿಕೆ ಬದ್ದತೆ ಓದಿನ ಕ್ರಮ, ಅಭಿನಯ ಎಲ್ಲವನ್ನು ತಲೆಯಲ್ಲಿ ಇಟ್ಟುಗೊಂಡು ಮಕ್ಕಳಿಗೆ ಅಭಿನಯದ ಮೂಲಕ ಸಮಾಜವನ್ನು ನೋಡುವ ಕ್ರಮವನ್ನು ತಿಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸಾಹಿತಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ‘ಅಳಿಲು ರಾಮಾಯಣ’ ನಾಟಕವನ್ನು ಅಮೃತೇಶ್ವರನಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳು ಪ್ರಸ್ತುತಪಡಿಸುತ್ತಾರೆ ಹಾಗೂ ಮಾದಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳು ಕೋಟಿಗನಹಳ್ಳಿ ರಾಮಯ್ಯನವರ ‘ಕಿಚ್ಚ್ ಕಿಚ್ ಇಲಿ’ ಮತ್ತು ‘ವ್ಯಾನಿಟಿ ಬ್ಯಾಗ್’ ನಾಟಕವನ್ನು ಅಭಿನಯಿಸಿಲಿದ್ದಾರೆ ಎಂದರು.
ಖ್ಯಾತ ರಂಗಕರ್ಮಿ ಶಶಿಧರ ಭಾರಿಘಾಟ್ ನಾಟಕೋತ್ಸವ ನೆರವೇರಿಸಿಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ ನಾಗರಾಜ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ಪುಟ್ಟಸ್ವಾಮಿ, ಶ್ರೀನಿವಾಸ್ ರಾಮಕೃಷ್ಣ, ಪ್ರಕಾಶ್, ಗುರುಪ್ರಸಾದ್, ಎಸ್ ಕೆ ಶಿವಕುಮಾರ್, ಉಮಾ, ಪುಟ್ಟರಾಜು, ಮರಿಸ್ವಾಮಿ, ಜಯಮ್ಮ, ಭಾಗ್ಯಮ್ಮ, ಸ್ವಾಮಿ, ಪುಷ್ಪಲತಾ, ಮಹಾದೇವು
ಇತರರು ಭಾಗವಹಿಸಲಿದ್ದಾರೆ.
ಗೋಷ್ಠಿಯಲ್ಲಿ ವಿಶ್ವ ಮಾನವ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್ ಎಲ್ ಭರತ್ ರಾಜ್, ಮುಖ್ಯ ಶಿಕ್ಷಕಿ ಮಮತ, ಶಂಕರೇಗೌಡ, ರವಿ, ಮಹಾದೇವಪ್ಪ ಉಪಸ್ಥಿತರಿದ್ದರು.




