ಮಳವಳ್ಳಿ ತಾಲ್ಲೂಕಿನ ಪಂಡಿತಹಳ್ಳಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಮಾದೇಶ್ ಉಪಾಧ್ಯಕ್ಷರಾಗಿ ಅನಿತಾ ಅವಿರೋಧ ಆಯ್ಕೆಯಾದರು.
ಇಂದು ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಮಾದೇಶ್, ಉಪಾಧ್ಯಕ್ಷರ ಸ್ಥಾನಕ್ಕೆ ಅನಿತಾ ನಾಮಪತ್ರ ಸಲ್ಲಿಕೆಯಾಗಿದ್ದು, ಬೇರೆ ಯಾವುದೇ ನಾಮ ಪತ್ರ ಸಲ್ಲಿಕೆ ಆಗದ ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ರಾಮಕೃಷ್ಣ ಘೋಷಿಸಿದರು. ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡ ಪುಟ್ಟಸ್ವಾಮಿ ನಮ್ಮ ನೆಚ್ಚಿನ ಶಾಸಕರಾದ ಪಿಎಂ ನರೇಂದ್ರಸ್ವಾಮಿ ಅವರ ಮಾರ್ಗದರ್ಶನದಂತೆ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ಸಂಘದ ಏಳಿಗೆಗಾಗಿ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಹಕಾರ ಅಗತ್ಯ, ಸಂಘವನ್ನು ಮಾದರಿ ಸಂಘವಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆಯಲ್ಲಿ ನಿರ್ದೇಶಕರಾದ ತಿಮ್ಮೇಗೌಡ, ಪ್ರಮೋದ್ ಕುಮಾರ್, ನಿರಂಜನ್, ನಂಜುಂಡ ಸ್ವಾಮಿ, ಪ್ರತಿಮಾ, ಸಿದ್ದರಾಜು, ಸತೀಶ್, ರಘು, ನಂಜುಂಡ ಸ್ವಾಮಿ, ಮುಖಂಡರಾದ ವೆಂಕಟರಾಜು, ಸುರೇಶ್ ಕುಮಾರ್ ಸೇರಿದಂತೆ ಇತರರು ಇದ್ದರು.




