Friday, November 20, 2026

ಪ್ರಾಯೋಗಿಕ ಆವೃತ್ತಿ

ಮನ್ಮುಲ್ ಕಾಂಗ್ರೆಸ್ ತೆಕ್ಕೆಗೆ ; 3 ತಾಲ್ಲೂಕುಗಳ ಫಲಿತಾಂಶಕ್ಕೆ ತಡೆ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ ಮುಲ್)ದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಮತದಾನದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಜಯಗಳಿಸಿ ಬಹುಮತ ಸಾಧಿಸಿದ್ದು, ಅಂತಿಮವಾಗಿ ಮನ್ಮುಲ್ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಸೇರಿದೆ. ಕಾಂಗ್ರೆಸ್ ಪರ ಫಲಿತಾಂಶದ ಹಿನ್ನೆಲೆಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಮಂಡ್ಯ ಶಾಸಕ ರವಿಕುಮಾರ್ ಹಾಗೂ ವಿಜೇತ ಅಭ್ಯರ್ಥಿ ಯು.ಸಿ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಭಿನಂದಿಸಿ ವಿಜಯೋತ್ಸವ ಆಚರಿಸಿದರು.

ಮಂಡ್ಯನಗರದ ಮೈಷುಗರ್ ಶಾಲೆಯಲ್ಲಿ ಭಾನುವಾರ ಚುನಾವಣೆ ನಡೆಯಿತು, ನಂತರ ಮತ ಏಣಿಕೆ ಮಾಡಲಾಯಿತು. ಆದರೆ ಫಲಿತಾಂಶದ ಬಗ್ಗೆ ಕೆಲವು ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಕೆ.ಆರ್.ಪೇಟೆ, ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕುಗಳ ಫಲಿತಾಂಶವನ್ನು ಚುನಾವಣಾಧಿಕಾರಿಗಳು ತಡೆ ಹಿಡಿದಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿದವರು

ಮಂಡ್ಯ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಜೆಡಿಎಸ್ ಬೆಂಬಲಿತರಾದ ಬಿ.ಆರ್. ರಾಮಚಂದ್ರ – 149 ಮತಗಳು,

ಎಂ. ಎಸ್.ರಘುನಂದನ್ – 143 ಹಾಗೂ ಕಾಂಗ್ರೆಸ್ ಬೆಂಬಲಿತರಾದ ಯು.ಸಿ.ಶಿವಕುಮಾರ್ –136 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರು. ಕೆ. ರಾಜು (ಕೆಬ್ಬಹಳ್ಳಿ) – 61, ವಿಜಯಕುಮಾರ್- 65 ಮತಗಳನ್ನು ಪಡೆದು ಪರಾಭವಗೊಂಡರು.

ಶ್ರೀರಂಗಪಟ್ಟಣ ತಾಲ್ಲೂಕಿನಿಂದ ಕಾಂಗ್ರೆಸ್ ಬೆಂಬಲಿತ ಬಿ.ಬೋರೇಗೌಡ – 61 ಮತಗಳನ್ನು ಪಡೆದು ಜಯಗಳಿಸಿದರೆ, ಎಂ ಕಿಶೋರ್(ಕಿರಣ್)-1, ಪುಟ್ಟಸ್ವಾಮಿಗೌಡ- 5 ಮತಗಳನ್ನು ಪಡೆದು ಪರಾಭವಗೊಂಡರು.

ಪಾಂಡವಪುರ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಶಿವಕುಮಾರ್ – 98 ಮತಗಳನ್ನು ಪಡೆದು ಜಯಗಳಿಸಿದೆ, ಕಾಡೇನಹಳ್ಳಿ ರಾಮಚಂದ್ರ –25 ಮತಗಳನ್ನು ಪಡೆದು ಸೋಲುಂಡರು.

ನಾಗಮಂಗಲ ತಾಲೂಕಿನಿಂದ ಕಾಂಗ್ರೆಸ್ ಬೆಂಬಲಿತರಾದ ಅಪ್ಪಾಜಿಗೌಡ –170 ಮತಗಳು, ಲಕ್ಷ್ಮಿನಾರಾಯಣ – 133 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ದೇವೇಗೌಡ – 73, ಹಾಗೂ ನೆಲ್ಲಿಗೆರೆ ಬಾಲು- 76 ಮತಗಳನ್ನು ಪಡೆದು ಪರಾಭವಗೊಂಡರು.

ಕೆ.ಆರ್.ಪೇಟೆ ತಾಲೂಕಿನಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಡಾಲು ರವಿ, ಮದ್ದೂರು ತಾಲೂಕಿನಿಂದ ಸ್ಪರ್ಧೆ ಮಾಡಿದ್ದ ಎಸ್.ಪಿ.ಸ್ವಾಮಿ, ಎಂ.ಕೆ.ಹರೀಶ್ ಬಾಬು ಹಾಗೂ ಮಳವಳ್ಳಿ ತಾಲೂಕಿನಿಂದ ಸ್ಪರ್ಧಿಸಿದ್ದ ಡಿ. ಕೃಷ್ಣೇಗೌಡ ಅವರನ್ನು ಅಭಿಮಾನಿಗಳು ಎತ್ತಿಕೊಂಡು ಕುಣಿದು ಸಂಭ್ರಮಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ