ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಾಂಡವಪುರ ಬ್ಲಾಕ್ ಯುವ ಅಧ್ಯಕ್ಷರಾಗಿ ಹಾರೋಹಳ್ಳಿ ಭರತ್ ಪಟೇಲ್ ಹಾಗೂ ಮೇಲುಕೋಟೆ ಬ್ಲಾಕ್ ಯುವ ಅಧ್ಯಕ್ಷರಾಗಿ ಸುಂಕಾತೊಣ್ಣೂರು ಚಂದ್ರಶೇಖರ್ ಚುನಾಯಿತರಾದರು.
ನೂತನವಾಗಿ ಚುನಾಯಿತರಾದ ಪಾಂಡವಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹಾರೋಹಳ್ಳಿ ಭರತ್ ಪಟೇಲ್ ಹಾಗೂ ಮೇಲುಕೋಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುಂಕಾತೊಣ್ಣೂರು ಚಂದ್ರಶೇಖರ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಸನ್ಮಾನಿಸಿ ಅಭಿನಂದಿಸಿದರು. ನಂತರ ಮಾತನಾಡಿದ ಎಚ್.ತ್ಯಾಗರಾಜು ಅವರು, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಲು ಕಾರಣರಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಂಘಟನಾತ್ಮಕವಾಗಿ ದುಡಿಯಬೇಕು
ನೂತನ ಅಧ್ಯಕ್ಷರು ಮುಖಂಡರನ್ನು ಒಗ್ಗೂಡಿಸಿಕೊಂಡು ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಯುತವಾಗಿ ಸಂಘಟಿಸಬೇಕು. ಜತೆಗೆ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಂಘಟನಾತ್ಮಕವಾಗಿ ದುಡಿಯಬೇಕು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ ಮಾತನಾಡಿ, ನೂತನ ಅಧ್ಯಕ್ಷರಿಬ್ಬರಿಗೂ ಅಭಿನಂದನೆಗಳು. ಪಕ್ಷ ಸಂಘಟನೆ ಮೂಲಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಅವರ ಕೈ ಬಲಪಡಿಸಬೇಕು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಭರತ್ ಪಟೇಲ್ ಹಾಗೂ ಸುಂಕಾತೊಣ್ಣೂರು ಚಂದ್ರಶೇಖರ್, ಗೆಲುವಿಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರು ಮತ್ತು ಮುಖಂಡರಿಗೆ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನಗಾನಹಳ್ಳಿ ಕಿಟ್ಟಿ (ಎಚ್.ಕೃಷ್ಣೇಗೌಡ), ಟಿಎಪಿಸಿಎಂಎಸ್ ಸಿ.ಎಂ.ಶ್ರೀಕಾಂತ್, ತಾ.ಪಂ ಮಾಜಿ ಸದಸ್ಯ ಎನ್.ಬಿ.ರಾಮೇಗೌಡ, ಪುರಸಭೆ ಸದಸ್ಯರಾದ ಕೆ.ಉಮಾಶಂಕರ್, ಪಾಪು, ಪಟೇಲ್ ರಮೇಶ್, ಮುಖಂಡರಾದ ಎಂ.ಆರ್.ಚಂದ್ರಶೇಖರ್, ನಟರಾಜು, ಚಿಕ್ಕಾಡೆ ಕೃಷ್ಣೇಗೌಡ, ಮೋಹನ್, ಶ್ರೀನಿವಾಸ್, ತಾಲೂಕು ಯುವ ಉಪಾಧ್ಯಕ್ಷ ಹೇಮಾದ್ರಿ ಇತರರಿದ್ದರು.




