Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ವಡ್ಡರಹಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ರೋಹಿತ್ ಗೌಡ ಆಯ್ಕೆ

ಮಳವಳ್ಳಿ ತಾಲೂಕಿನ ವಡ್ಡರಹಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರೋಹಿತ್ ಗೌಡ ಉಪಾಧ್ಯಕ್ಷರಾಗಿ ಕೆಂಪೇಗೌಡ ಅವಿರೋ ಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿ ಆವರಣದಲ್ಲಿ ನಡೆದ ಅಧ್ಯಕ್ಷ. ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಿಗಧಿಯಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ರೋಹಿತ್ ಗೌಡ ಮತ್ತು ಕೆಂಪೇಗೌಡ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಇವರು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಚುನಾವಣಾಧಿಕಾರಿ ರಾಮಕೃಷ್ಣ ಘೋಷಿಸಿದರು. ಮೇಲ್ವಿಚಾರಕ ರಾದ ಬಸವರಾಜು.ಉಮೇಶ್ ಹಾಜರಿದ್ದರು.

ಪಲಿತಾಂಶ ಘೋಷಣೆ ಯಾಗು ತ್ತಿದ್ದಂತೆ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸಿಹಿ ತಿನ್ನಿಸಿ ಅಭಿ ನಂದಿಸಿದರು ಜೊತೆಗೆ ಹಲವಾರು ಕಾಂಗ್ರೆಸ್ ಮುಖಂಡರು ನೂತನ ಅಧ್ಯಕ್ಷ. ಉಪಾಧ್ಯಕ್ಷರನ್ನು ಅಭಿನಂದಿ ಸಿದರು.

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ರೋಹಿತ್ ಗೌಡ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಲು ಕಾರಣರಾದ ಶಾಸಕ ರಾದ ಪಿ ಎಂ ನರೇಂದ್ರಸ್ವಾಮಿ ಅವರಿಗೆ ತಮ್ಮ ಧನ್ಯವಾದಗಳನ್ನು ತಿಳಿಸಿ ತಮ್ಮ ಅವಿರೋಧ ಆಯ್ಕೆಗೆ ನೆರವಾದ ಎಲ್ಲಾ ‌ನಿರ್ಧೇಶಕರು ಕಾಂಗ್ರೆಸ್ ಮುಖಂಡರಿಗೆ ‌ಧನ್ಯವಾದಗಳನ್ನು ತಿಳಿಸಿದರು. ಸಂಘದ ರೈತರಿಗೆ ಸರ್ಕಾರದಿಂದ ಬರುವ ಸೌಲತ್ತುಗಳನ್ನು ಅವರಿಗೆ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಎಲ್ಲಾ ನಿರ್ದೇಶಕರ ಜೊತೆಗೂಡಿ ಸಂಘದ ಉತ್ತುಂಗಕ್ಕೆ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಇದೇ ವೇಳೆಯಲ್ಲಿ
ನಿರ್ದೇಶಕರಾದ ಶಿವಮಲ್ಲು. ನಂದಿಶ್. ಜವರಯ್ಯ.ಶಿವಣ್ಣ. ಮಹಾದೇವಮ್ಮ. ರುದ್ರಮ್ಮ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿಪಿ ರಾಜು. ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್ .ಮುಖಂಡರಾದ
ಬಂಕ್ ಮಹಾದೇವ. ರಾಜು. ಪುಟ್ಟಸ್ವಾಮಿ. ಜಗದೀಶ್.ಸುಷ್ಮ ರಾಜು. ಕಾರ್ಯದರ್ಶಿ ರಶ್ಮಿ ಸೇರಿದಂತೆ ಇತರರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ