ನಾಡಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮಹಿಳೆಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿ ರುವ ದುರ್ಘಟನೆ ಜರುಗಿದೆ.
ಕನಕಪುರ ತಾಲೂಕಿನ ಗಾಣಾಳು ಗ್ರಾಮದ 23 ವರ್ಷದ ಶೋಭಾ ಹಾಗೂ 19 ವರ್ಷದ ನದಿಯ ಎಂಬುವರೇ ಮೃತಪಟ್ಟರು. ಶನಿವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಈ ದುರಂತ ಸಂಭವಿಸಿದೆ.
ದೇವರ ಕಾರ್ಯಕ್ಕೆಂದು ಕನಕಪುರ ತಾಲೂಕಿನ ಗಾಣಾಳು ಗ್ರಾಮದ ಸುಮಾರು 50 ಕ್ಕೂ ಹೆಚ್ಚು ಮಂದಿ ಮುತ್ತತ್ತಿಗೆ ಬಂದಿದ್ದು ದೇವರ ದರ್ಶನಕ್ಕೂ ಮುನ್ನ ಸ್ನಾನ ಮಾಡಲೆಂದು ಕೆಲವರು ನದಿಗೆ ಇಳಿದಿದ್ದಾರೆ.ಈ ವೇಳೆ ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿ ಶೋಭಾ ಹಾಗೂ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿ ಯಾಗಿದೆ.
ಮೃತರ ಶವಗಳು ಹಲಗೂರು ಆಸ್ಪತ್ರೆಗೆ ತಂದು ಪರೀಕ್ಷೆ ನಡೆಸಿ ನಂತರ ವೈದ್ಯಕೀಯ ಪರೀಕ್ಷೆಗಾಗಿ ಮಳವಳ್ಳಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಮೃತರ ಕಡೆಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




