Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯದ ಟರ್ನಿಂಗ್ ಬ್ರೈಟ್ ಟ್ರೈನಿಂಗ್ ಸೆಂಟರ್‌ಗೆ AIITE ಪ್ರಶಸ್ತಿ

ಅಖಿಲ ಭಾರತ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (All India Institute of Technology Education and Training) ನೀಡುವ ಉತ್ತಮ ಶಿಕ್ಷಕರ ತರಬೇತಿ ಸಂಸ್ಥೆ ಪ್ರಶಸ್ತಿಯು ಈ ಬಾರಿ ಮಂಡ್ಯದ ನೆಹರುನಗರದ ಟರ್ನಿಂಗ್ ಬ್ರೈಟ್ ಟ್ರೈನಿಂಗ್ ಸೆಂಟರ್‌ಗೆ ಲಭಿಸಿದೆ. ರಾಜ್ಯದ 52 ಶಿಕ್ಷಕರ ತರಬೇತಿ ಸಂಸ್ಥೆಗಳ ಪೈಕಿ ಎಐಐಟಿಇ ವತಿಯಿಂದ ಉತ್ತಮ ಶಿಕ್ಷಕರ ತರಬೇತಿ ಸಂಸ್ಥೆ ಪ್ರಶಸ್ತಿ ಪಡೆದಿರುವ ಏಕೈಕ ಸಂಸ್ಥೆ ಇದಾಗಿದೆ.

ಹೊಸದಿಲ್ಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಫೆ.17ರಂದು ನಡೆದ ಸಮಾರಂಭದಲ್ಲಿ ಟರ್ನಿಂಗ್ ಬ್ರೈಟ್ ಟ್ರೈನಿಂಗ್ ಸೆಂಟರ್‌ನ ಸಂಸ್ಥಾಪಕ ಟಿ.ಎನ್.ರಕ್ಷಿತ್‌ರಾಜ್ ಅವರಿಗೆ ಎಐಐಟಿಇ ಸಂಸ್ಥೆ ಅಧ್ಯಕ್ಷ ದಿಲೀಪ್‌ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಕೌಶಲ್ಯಾಧಾರಿತ ಮಾಂಟೆಸ್ಸರಿ ಶಿಕ್ಷಕಿಯರ ತರಬೇತಿ, ತರಬೇತಿ ಪಡೆದ ಶಿಕ್ಷಕರಿಗೆ ಉದ್ಯೋಗ ಕೊಡಿಸುವಿಕೆ, ಗುಣಮಟ್ಟದ ಶಿಕ್ಷಣ ಬೋಧಕ ಹಾಗೂ ಚಟುವಟಿಕೆ ಆಧಾರಿತ ಕಲಿಕೆ ಮತ್ತಿತರ ಸಂಗತಿಗಳ ಆಧಾರದ ಮೇಲೆ ಬ್ರೈಟ್ ಟ್ರೈನಿಂಗ್ ಸೆಂಟರ್‌ಗೆ ಎಐಐಟಿಇ ಪ್ರಶಸ್ತಿ ಲಭಿಸಿದೆ. ಕಳೆದ ಆರು ವರ್ಷಗಳಲ್ಲಿ ಈ ಸಂಸ್ಥೆಯು 362 ಮಂದಿ ಶಿಕ್ಷಕಿಯರಿಗೆ ತರಬೇತಿ ನೀಡಿದ ಹೆಗ್ಗಳಿಕೆ ಹೊಂದಿದೆ.

ಪ್ರಶಸ್ತಿ ಪಡೆದಿರುವ  ಟರ್ನಿಂಗ್ ಬ್ರೈಟ್ ಟ್ರೈನಿಂಗ್ ಸಂಸ್ಥಾಪಕ ಟಿ.ಎನ್.ರಕ್ಷಿತ್‌ರಾಜ್ ಅವರಿಗೆ ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ಮಂಗಲ, ಪದಾಧಿಕಾರಿಗಳಾದ ಸುಬ್ರಮಣ್ಯ, ಕುಮಾರ್‌ಗೌಡ, ಪ್ರತಾಪ್, ಲೋಕೇಶ್, ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ವಿ.ಡಿ.ಸುವರ್ಣ, ಅಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ