Monday, November 23, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಸ್ಫೂರ್ತಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಶಿವರಾಮು ಆಯ್ಕೆ

ಮದ್ದೂರು ತಾಲ್ಲೂಕು ಭಾರತೀನಗರದ ಸ್ಫೂರ್ತಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆ.ಎಲ್.ಶಿವರಾಮು, ಉಪಾಧ್ಯಕ್ಷರಾಗಿ ಎಸ್.ಬಿ.ಸಿದ್ದರಾಮೇಗೌಡ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಕೆ.ಎಲ್.ಶಿವರಾಮು ಮಾತನಾಡಿ, ಈ ಸಹಕಾರ ಸಂಘವನ್ನು 1999ರಲ್ಲಿ ಸ್ಥಾಪನೆಗೊಳಿಸಿ ಸಿ.ಎ.ಕೆರೆ ಹೋಬಳಿಗೆ ಮಾತ್ರ ಸೀಮಿತವಾಗಿದ್ದ ಸಂಘವನ್ನು ನಂತರ ದಿನಗಳಲ್ಲಿ ಮದ್ದೂರು-ಮಳವಳ್ಳಿ ತಾಲ್ಲೂಕುಗಳಿಗೂ ವಿಸ್ತರಿಸಿರುವುದರಿಂದ ಹೆಚ್ಚು ಸದಸ್ಯರನ್ನು ಹೊಂದಿ ವ್ಯವಹರಿಕವಾಗಿ ಈಗ ಬಲವರ್ಧನೆಗೊಂಡಿದೆ ಎಂದರು.

ಇಲ್ಲಿನ ಸದಸ್ಯರು ಮತ್ತು ನಿರ್ದೇಶಕರು ನನ್ನನ್ನು 6 ನೇ ಭಾರಿ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಿದ್ದಾರೆ. ನನ್ನ ಅವಧಿಯಲ್ಲಿ ಸಂಘಕ್ಕೆ ಹಲಗೂರು ರಸ್ತೆಯಲ್ಲಿ ನಿವೇಶನ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಈ ಸಂಘದಿಂದ ಇದುವರೆವಿಗೂ ಸಾವಿರಾರು ಜನರು ಮೂರುವರೆ ಕೋಟಿ ರೂಗಳನ್ನು ಸಾಲವಾಗಿ ಪಡೆದು ಸಾಲವನ್ನು ಮರುಪಾವತಿಸಿ ಸಂಘವನ್ನು ಅಭಿವೃದ್ದಿಗೊಳಿಸಲು ಕೈಜೋಡಿಸಿದ್ದಾರೆ. ಇವರೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಂಘದ ಸದಸ್ಯರು ನಿಧನಗೊಂಡಲ್ಲಿ 5 ಸಾವಿರ ಮರಣ ನಿಧಿ, ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದು ಸದಸ್ಯರ 20 ಕ್ಕೂ ಹೆಚ್ಚು ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತಿದೆ. ಇನ್ನೂ ಮತ್ತಷ್ಟು ಅಭಿವೃದ್ದಿ ಕೆಲಸ ಮಾಡಲು ಮುಂದಾಗಿದ್ದೇನೆ ಎಂದರು.

ಈ ಸಂಘವು 2025 ರ ಜೂ.9 ಕ್ಕೆ 25 ವರ್ಷ ಪೂರ್ಣಗೊಳ್ಳಲ್ಲಿದೆ. ಇದರ ಅಂಗವಾಗಿ ಬೆಳ್ಳಿ ಹಬ್ಬದ ಸಂಭ್ರಮವನ್ನು ಆಚರಣೆ ಮಾಡಲಾಗುವುದು. ಇದರ ಸವಿನೆನಪಿಗಾಗಿ ಸಂಘದ ಕಟ್ಟಡದ ಮೇಲೆ ಸಭೆಯ ಸಭಾಂಗಣವನ್ನು ಕಟ್ಟಲು ಶಂಕುಸ್ಥಾಪನೆ ನೆರವೇರಿಸಲಾಗುವುದು. ಜೊತೆಗೆ ಸಂಘದ ಸದಸ್ಯರಿಗೆ 5 ಸಾವಿರ ಗಿಡಗಳನ್ನು ವಿತರಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಇದೇ ವೇಳೆ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಂಘದ ಸದಸ್ಯರು ಮತ್ತು ಮುಖಂಡರು ಬುಧವಾರ ಸಂಜೆ 4 ಗಂಟೆಯಲ್ಲಿ ಅಭಿನಂದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್.ಬಿ.ಸಿದ್ದರಾಮೇಗೌಡ, ನಿರ್ದೇಶಕರಾದ ಬಿ.ಎನ್.ರಘು, ಎಸ್.ಶಿವಕುಮಾರ್, ಎ.ಬಿ.ರವೀಂದ್ರ, ಎ.ಎಸ್.ವಿನಯ್, ಟಿ.ಪಿ.ಮನೋಹಗೌಡ, ಎಸ್.ಎಚ್.ಶಿವರಾಜು, ಸಿ.ಕೆಂಪರಾಜು, ಬಿ.ಕೆ.ಮಮತ, ಎಂ.ಎಸ್.ಸುರೇಶ್, ಎಂ.ಆರ್.ರೇಖಾ, ಎಚ್.ಸಿ.ಆತ್ಮಾನಂದ, ವಿಜೇಂದ್ರ, ಗುರುಸಿದ್ದಯ್ಯ, ಎ.ಎಚ್.ರಮೇಶ್, ಮುಖಂಡರಾದ ಸಬ್ಬನಹಳ್ಳಿ ಹೊನ್ನೇಗೌಡ, ಸಿಇಓ ಕೆ.ಎಸ್.ಅಜಯ್ ಕುಮಾರ್, ಕುಮಾರ್ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ