Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕೋಡಿದೊಡ್ಡಿ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ

ಮದ್ದೂರು ತಾಲ್ಲೂಕು ಕೊಪ್ಪದಿಂದ ಮಾರಗೌಡನಹಳ್ಳಿ ಕೆರಗೊಡು ಮಾರ್ಗವಾಗಿ ಮಂಡ್ಯ ತೆರಳುವ ಬಸ್ ಅನ್ನು ಕೋಡಿದೊಡ್ಡಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ತಡೆದು ಇಂದು ಪ್ರತಿಭಟನೆ ನಡೆಸಿದರು.

ಕೊಡಿದೊಡ್ಡಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಕೊಪ್ಪದಿಂದ ಬೆಳಿಗ್ಗೆ 8:45 ಮಂಡ್ಯ ಗೆ ಹೊರಡುವ ಬಸ್ಸು ಮುಡಲುದೊಡ್ಡಿಯ ಮೇಲೆ ತೆರೆಳುತಿತ್ತು, ಇದರಿಂದ ಕೊಡಿದೊಡ್ಡಿಯ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಕೊಡಿದೊಡ್ಡಿ ಗ್ರಾಮಸ್ಥರು ಗ್ರಾಮದಲ್ಲಿ ಬಸ್ ತಡೆದು ಮುಷ್ಕರ ನಡೆಸಿದರು.

ನಂತರ ಈ ವಿಚಾರದ ಕುರಿತು ವಾಹನ ನಿಯಂತ್ರಕ ಮಂಡ್ಯ ಡಿಪೋ ಮ್ಯಾನೇಜರ್ ಗಮನಕ್ಕೆ ತಂದರು, ಮುಂದಿನ ಸೋಮವಾರದಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಪೋ ಮ್ಯಾನೇಜರ್ ಭರವಸೆ ನೀಡಿದ್ದಾರೆ.

ಸ್ಥಳದಲ್ಲಿ ಕೊಡಿದೊಡ್ಡಿ ಗ್ರಾಮಸ್ಥರಾದ ನಾಗರಾಜು, ವಿನಯ್, ಮರಿಯಪ್ಪ , ಸತೀಶ್ ಹಾಗೂ ವಿದ್ಯಾರ್ಥಿಗಳು,ವಾಹನ ಚಾಲಕ ಮತ್ತು ವಾಹನ ನಿಯಂತ್ರಕ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ