Monday, November 23, 2026

ಪ್ರಾಯೋಗಿಕ ಆವೃತ್ತಿ

ಹೊಸ ಚಿಂತನೆ ಆವಿಷ್ಕಾರಗಳಿಂದ ಅಭಿವೃದ್ಧಿ ಸಾಧ್ಯ : ಪ್ರೊ. ಶಿವಚಿತ್ತಪ್ಪ

ಹೊಸ ಚಿಂತನೆ ಹಾಗೂ ಆವಿಷ್ಕಾರಗಳು ರೂಪಿಸಿ ಅನುಷ್ಠಾನಗೊಳಿಸುವ ಸ್ಥಳದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಂಡ್ಯ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಶಿವಚಿತ್ತಪ್ಪ ಹೇಳಿದರು.

ಆಂತರಿಕ ಗುಣಮಟ್ಟ ಭರವಸಾ ಕೋಶ ರೂಸಾ 2.0 ಅಡಿಯಲ್ಲಿ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರವನ್ನು ಮಹಿಳಾ ಸರ್ಕಾರಿ ಕಾಲೇಜಿನ ಮೌಲ್ಯಮಾಪನ ಸಭಾಂಗಣದಲ್ಲಿ “ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಹೆಚ್ಚಳ ಮತ್ತು ಸುಸ್ಥಿರತೆಗಾಗಿ ವಿನೂತನ ಕ್ರಮಗಳು ” ಎಂಬ ವಿಷಯದ ಮೇಲೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ,ನಿಮ್ಮ ಸಂಶೋಧನೆಯಲ್ಲಿ ಮತ್ತು ಅಧ್ಯಾಪನದಲ್ಲಿ ಹೊಸತನ್ನು ಅಳವಡಿಸಿಕೊಂಡು ಅದನ್ನು ಕಾರ್ಯ ರೂಪಕ್ಕೆ ತರುವುದು ಅತಿಮುಖ್ಯ ಎಂದರು.

ಖಾಸಗಿ ವಿಶ್ವವಿದ್ಯಾನಿಲಯಗಳಿಂದ ಸರ್ಕಾರಿ ವಿಶ್ವವಿದ್ಯಾನಿಲಯದ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಮಾತು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತಿದೆ ಅದನ್ನು ಹೋಗಲಾಡಿಸಲು ಸರ್ಕಾರಿ ಸಂಸ್ಥೆಗಳು ರಾಜ್ಯ,ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸೆಮಿನಾರ್, ಕಾರ್ಯಗಾರ ತರಬೇತಿಗಳನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಮಾಡಬೇಕು. ಆಗ ಮಾತ್ರ ಸರ್ಕಾರಿ ಸಂಸ್ಥೆಗಳು ಉತ್ಕೃಷ್ಟ ಗೊಳ್ಳುತ್ತವೆ. ಕಾರ್ಯದಕ್ಷತೆಯನ್ನು ಹೆಚ್ಚಿಸಲು ಆವಿಷ್ಕಾರಗಳು ಸಾಹಯ ಮಾಡುತ್ತವೆ, ನಾವು ಖಾಸಗಿ ಸಂಸ್ಥೆಗಳೊಂದಿಗೆ ಪೈಪೋಟಿ ಮಾಡಬೇಕಾಗಿರುವ ಅನಿವಾರ್ಯ ಸೃಷ್ಟಿಯಾಗಿದೆ ಆಗಾಗಿ ಅಧ್ಯಾಪಕರುಗಳು ಹೊಸ ಶೈಲಿಯ ಅಧ್ಯಾಪನ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ಹೇಳಿದರು.

ಕನ್ನಡದ ಜೊತೆಗೆ ಇಂಗ್ಲಿಷ್ ಶಿಕ್ಷಣವೂ ಸಹ ಪ್ರಮುಖವಾದದ್ದು, ಮಾತೃಭಾಷೆಯ ಬಗ್ಗೆ ಇರುವ ಗೌರವದ ಜೊತೆಗೆ ಜಾಗತಿಕ ಭಾಷೆಯನ್ನು ಮಕ್ಕಳಿಗೆ ಕಲಿಸುವ ಪ್ರಯತ್ನ ಅಧ್ಯಾಪಕರು ಮಾಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವಿದ್ದೇವೆ ಇಂತಹ ಸಂದರ್ಭದಲ್ಲಿ ಸಂವಾಹನ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ತಿಳಿಸಿದರು.

ಪ್ರಾಧ್ಯಾಪಕರು ತಮ್ಮ ನಿರ್ಧಿಷ್ಟ ವಿಷಯದಲ್ಲಿ ಪರಿಪೂರ್ಣ ಜ್ಞಾನ ಹೊಂದಿರಬೇಕು ಆಗ ಮಾತ್ರ ವಿದ್ಯಾರ್ಥಿಗಳಿಗೆ ವಿಷಯದ ಕುರಿತು ಪರಿಣಾಮಕಾರಿಯಾಗಿ ತಿಳಿಸಲು ಸಾಧ್ಯ, ಅಧ್ಯಾಪಕರುಗಳು ಹೊಸ ಹೊಸ ಚಿಂತನೆ ಆವಿಷ್ಕಾರಗಳು ಅಧ್ಯಯನ ನಡೆಸಬೇಕು, ಹೆಚ್ಚು ಹೆಚ್ಚು ವಿಷಯಗಳ ಕುರಿತು ನಿರಂತರವಾಗಿ ಅಧ್ಯಾಯನಶೀಲರಾಗಬೇಕು ಎಂದು ಹೇಳಿದರು.

ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ್ ಪ್ರಭು ಮಾತನಾಡಿ, ಶಿಕ್ಷಣ ವೃತ್ತಿ ಇತರೆ ವೃತ್ತಿ ಗಿಂತ ತುಂಬಾ ಶ್ರೇಷ್ಠವಾದದ್ದು. ಸಮಾಜದ ಬದಲಾವಣೆಯಲ್ಲಿ ಮಹತ್ತರವಾದ ಕೊಡುಗೆ ನೀಡುವ ಕೆಲಸವಾಗಿದೆ, ಶಿಕ್ಷಣ ನೀಡುವವರಿಗೆ ವಿದ್ಯಾರ್ಥಿಗಳಿಗೆ ಹೇಗೆ ಶಿಕ್ಷಣ ತಲುಪಿಸಬೇಕೆಂಬ ಅರಿವು ಇದ್ದರೆ ‘ಉನ್ನತ ಶಿಕ್ಷಣ’ ಎಂಬ ಪದಕ್ಕೆ ಅರ್ಥ ನೀಡಿದಂತಾಗುತ್ತದೆ, ನಾವುಗಳು ಅಧ್ಯಾಯನಶೀಲತೆ ಬೆಳೆಸಿಕೊಂಡದ್ದೆ ಆದರೆ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತಿವೆ ಎಂದರು.

ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೆ ಆದರೆ ಶಿಕ್ಷಣ ಗುಣಮಟ್ಟದ ತಾನಾಗಿಯೇ ಹೆಚ್ಚಾಗುತ್ತದೆ, ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಉಪನ್ಯಾಸ ನೀಡುತ್ತಾ ಹೋದರೆ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು, ಅಧ್ಯಾಪಕರಾದವರು ಪಠ್ಯ ಮತ್ತು ಪಠ್ಯತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಸಂಸ್ಥೆಯ ಬೆಳವಣಿಗೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಿದರೆ ಆ ಸಂಸ್ಥೆ ಸರ್ವತೋಮುಖ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಎಸ್ ಶ್ರೀನಿವಾಸ್, ಮೈಸೂರು ಜೆಎಸ್ಎಸ್ ಅಕಾಡೆಮಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಕೆ ರವೀಶ, ಐ ಕ್ಯೂ ಎ ಸಿ ಸಂಚಾಲಕಿ, ಪ್ರೊ.ಜಯಲಕ್ಷ್ಮಿ ಬಿ, ಐ ಕ್ಯೂ ಎ ಸಿ ಸಹಸಂಚಾಲಿಕೆಯರಾದ ಶಿರಾನ್ ತಾಜ್, ರೂಸಾ ಸಂಯೋಜಕರಾದ ಡಾ. ಮಂಗಳಮ್ಮ ಕೆ ಎಂ. ಪತ್ರಾಂಕಿತ ವ್ಯವಸ್ಥಾಪಕರಾದ ರವಿಕಿರಣ್ ಕೆ ಪಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ