Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಯುವ ಪ್ರೇಮಿಗಳಿಗೆ ಕಂಕಣಭಾಗ್ಯ ನೀಡಿದ ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಶನ್ !

ಮಂಡ್ಯ ತಾಲೂಕಿನ ಮುದ್ದನಘಟ್ಟ ಗ್ರಾಮದ ಸುರೇಶ್ ಗೌಡ ಮತ್ತು ಬೆಂಗಳೂರಿನ ಐಶ್ವರ್ಯ ಎಂಬ ಯುವ ಪ್ರೇಮಿಗಳ ಸರಳ ವಿವಾಹವು ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಶನ್ ವತಿಯಿಂದ ಯಶಸ್ವಿಯಾಗಿ ನಡೆಯಿತು.

ಮಂಡ್ಯ ನಗರದಲ್ಲಿರುವ ಕಲ್ಲಹಳ್ಳಿಯ ಶ್ರೀವೀರಾಂಜನೇಯ ದೇವಾಲಯ ಆವರಣದಲ್ಲಿ ಮುದ್ದನಘಟ್ಟ ಗ್ರಾಮದ ಕಾಳಬೋರೇಗೌಡ ಮತ್ತು ಜಯಲಕ್ಷ್ಮಿ ದಂಪತಿಗಳ ಪುತ್ರ ಸುರೇಶ್ ಮತ್ತು ಬೆಂಗಳೂರಿನ ಐಶ್ವರ್ಯ ಇವರು ದಾಂಪತ್ಯ ಪೂಜೆ ಸಲ್ಲಿಸುವ ಮೂಲಕ ದಾಂಪತ್ಯಕ್ಕೆ ಕಾಲಿರಿಸಿದರು.

ಬಳಿಕ ಮಾತನಾಡಿದ ವಧು-ವರರಾದ ಸುರೇಶ್ ಮತ್ತು ಐಶ್ವರ್ಯ ಅವರು, ನಾವು ಬಡವರಾಗಿದ್ದು ಕೆಲವು ವರ್ಷಗಳ ಹಿಂದೆ ಪ್ರೀತಿಸುತಿದ್ದೆವು, ಮದುವೆಯಾಗಲು ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಶನ್ ಅಧ್ಯಕ್ಷ ಮಹಾಲಿಂಗೇಗೌಡ ಅವರನ್ನು ಭೇಟಿ ಮಾಡಿ, ನಮ್ಮ ಮನವಿಯನ್ನು ಹೇಳಿದವು ಆಗ ಅವರು ಮಂಡ್ಯದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿಯನ್ನು ನೆರವೇರಿಸಿದರು ಎಂದು ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಮದುವೆಯಾಗುವ ವರರಿಗೆ ವಧುಗಳೆ ಸಿಗುತ್ತಿಲ್ಲ, ಇಂತಹ ಸಂದರ್ಭದಲ್ಲಿ ಸರಳ ವಿವಾಹ ಆಗುವುದರ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಶನ್ ನಮ್ಮ ಮನವಿಗೆ ಸ್ಪಂದಿಸಿ ಆಸರೆಯಾಗಿ ಪ್ರೋತ್ಸಾಹ ನೀಡಿತು ಎಂದು ತಿಳಿಸಿದರು. ಇವರ ಆಸೆಯಂತೆ ನಮ್ಮ ದಾಂಪತ್ಯ ಜೀವನವನ್ನು ಸುಖಕರವಾಗಿ ಮತ್ತು ಗೌರವ ಪೂರ್ವಕವಾಗಿ ಜೀವನ ನಡೆಸುತ್ತೇವೆ. ಮುದ್ದನಘಟ್ಟ ಮಹಾಲಿಂಗೇಗೌಡ ಅವರು ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವರನ ತಾಯಿ ಜಯಮ್ಮ ಹಾಗೂ ಮಹಾಲಿಂಗೇಗೌಡ ಮುದ್ದನನಘಟ್ಟ ಫೌಂಡೇಶನ್ ಗೌರವಾಧ್ಯಕ್ಷ ರವಿಗೌಡ, ಖಜಾಂಚಿ ಬಿ ಎಂ ಶಶಿಕುಮಾರ್, ಟ್ರಸ್ಟಿ ವಿಶ್ವ ಮತ್ತಿತರರು ಹಾಜರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ