ಸಂಜು ಆಲಕೆರೆ
ಸಂಚು : ಏನಪ್ಪ ಇವತ್ತು ‘ರೂ’ ರೂ ಅಂತ ರಾಗ ಎತ್ತುತ್ತಿದ್ದೀರಿ…
ಪಂಚು : ಏನಿಲ್ಲ ಸ್ಟಾಲೀನ್ ಸರ್ಕಾರದವರು ಬಜೆಟ್ ಲಾಂಛನದಲ್ಲಿ ‘ ₹ ‘ ಬದಲು ಅವರ ಪ್ರಾದೇಶಿಕ ಭಾಷೆಯಲ್ಲಿ ರೂ ಬಳಸಿದ್ದಾರೆ..

ಸಂಚು : ಅದಿಕ್ಕೆ ನೀವು ಕೂಡಾ ನಮ್ಮ ಪ್ರಾದೇಶಿಕ ಭಾಷೆಯಲ್ಲಿ ಬಳಸಲು ಸರ್ಕಾರಕ್ಕೆ ಒತ್ತಡ ಹಾಕಲು ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದೀರಿ,
ಪಂಚು : ಹೌದು…
ಸಂಚು : ಬಜೆಟ್ ಆಗೋಗಿದ್ಯಲ್ಲೋ
ಪಂಚು : ಇನ್ಮುಂದೆ ಎಲ್ಲ ಕಡೆ ‘₹’ ಬದಲು ನಮ್ಮ ಪ್ರಾದೇಶಿಕ ಭಾಷೆ ಕನ್ನಡದ ‘ರೂ’ ಬಳಸಲಿ..
ಸಂಚು : ನಿಮ್ಮ ಈ ಧ್ವನಿಗೆ ನಮ್ಮ ರಾಜ್ಯ ಸರ್ಕಾರಗಳು ಮನ್ನಣೆ ನೀಡಲ್ಲ ಅಂತ ಗೊತ್ತಿಲ್ವ ನಿಮ್ಗೆ..
ಪಂಚು : ನಾವೇ ಈಗಾಗಲೇ ಬಳಸುತ್ತಿದ್ದೇವೆ, ಹೆಚ್ಚಾಗಿ ಬಳಸೋಕೆ ಎಲ್ಲರಿಗೂ ವಿಚಾರ ಮುಟ್ಟಿಸ್ತೀವಿ..
ಸಂಚು : ಒಳ್ಳೆಕೆಲಸ.. ಆದ್ರೆ ಬೇರೆ ರಾಜ್ಯದವರು ಅವರ ಭಾಷಾಭಿಮಾನದಿಂದ ಆಗ್ ಮಾಡ್ತಿದ್ದಾರೆ, ಈಗ್ ಮಾಡ್ತಿದ್ದಾರೆ ಅಂತ ನಾವು ಕೂಡಾ ಅವರನ್ನು ಅನುಸರಿಸೋದು ಎಷ್ಟು ಸರಿ..
ಪಂಚು : ಬೇರೆ ರಾಜ್ಯದವರು ತಮ್ಮ ಪ್ರಾದೇಶಿಕ ಭಾಷೆಯ ಬಗ್ಗೆ ಎಂತಾ ನಿರ್ಣಯ ತೆಗೆದು ಕೊಳ್ಳೋಕು ಸಿದ್ದರಿದ್ದಾರೆ, ನೀವು ಈ ರೀತಿ ಮಾಡಿ ಅಂದ್ರೆ ನಮ್ಮ ನಾಯಕರು ಯೋಚ್ನೆ ಮಾಡಬಹುದೇನೋ ಅಂತ…
ಸಂಚು : ನೀವೇ ಹೊಸದಾದ ಯಾವ್ದಾದ್ರು ಆಲೋಚನೆ ಹುಡ್ಕಿ ಹೇಳಿ…
ಪಂಚು : ಅಯ್ಯೋ ಹಾಗೇನಾದ್ರೂ ಹೇಳುದ್ರೆ, ಅದಾಗಲ್ಲ ಇದಾಗಲ್ಲ, ಪ್ರಯತ್ನ ಮಾಡ್ತೀವಿ, ಉತ್ತರದಿಂದ (ಕೇಂದ್ರದಿಂದ) ಅಪ್ರೋವಲ್ ಬರ್ಬೇಕು ಅಂತಾರೆ..
ಸಂಚು : ಇವ್ರು ಕೇಂದ್ರದವರ ಓಟಿನಿಂದ ಗೆದ್ದು ಗದ್ದಿಗೆ ಏರಿದ್ದಾರಾ,
ಪಂಚು : ಏನೋ ಹಾಗೆ ನಡ್ಕೋತಾರೆ..
ಸಂಚು : ಹಿಂಗೇ ಆದ್ರೆ ಕನ್ನಡ ನಾಡು, ಹಿಂದಿ ನಾಡು ಆಗುತ್ತೆ…
ಪಂಚು : ಸತ್ಯವಾದ ಮಾತು




