Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಂಕ ವಸೂಲಿ ವಿರೋಧಿಸಿ ಪ್ರತಿಭಟನೆ

ಮಳವಳ್ಳಿ ತಾಲೂಕು ಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಗೆ ಶುಂಕ ವಸೂಲಿ ಮಾಡಲು ಹೊರಟಿರುವ ಕ್ರಮವನ್ನ ಕರ್ನಾಟಕ ಪ್ರಾಂತ ರೈತ ಸಂಘ ವಿರೋಧಿಸಿ ಇಂದು ಪ್ರತಿಭಟನೆ ನಡೆಯಿತು.

ರಾಷ್ಟ್ರೀಯ ಹೆದ್ದಾರಿ 948, ಬೆಂಗಳೂರು-ಮಳವಳ್ಳಿ-ಕೊಳ್ಳೇಗಾಲ- ಚಾಮರಾಜನಗರ- ದಿಂಡಿಗಲ್ ಹೋಗುವ ಈ ರಾಷ್ಟ್ರೀಯ ಹೆದ್ದಾರಿಯು ಒಂದು ರಾಷ್ಟ್ರೀಯ ಹೆದ್ದಾರಿಗೆ ಇರಬೇಕಾದಂತಹ ಯಾವುದೇ ಗುಣಮಟ್ಟ ಹೊಂದಿಲ್ಲ. ಅಲ್ಲದೇ ರಸ್ತೆಯ ಪಕ್ಕದಲ್ಲಿ ಬರುವ ಕೆರೆಕಟ್ಟೆ ಇತರ ಹಳ್ಳಗಳಿಗೆ ತಡೆಗೋಡೆಗಳನ್ನು ನಿರ್ಮಿಸಿರುವುದಿಲ್ಲ, ರಸ್ತೆಯು ಈಗಾಗಲೇ ಕಿತ್ತು ಹೋಗಿದ್ದು ಪ್ಯಾಚ್ಗಳನ್ನು ಸಹ ಹಾಕಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಭರತ್ ರಾಜ್ ಕಿಡಿಕಾರಿದ್ದಾರೆ.

ಅಲ್ಲದೆ ಇದು ಸತ್ಯಗಾಲ ಟೋಲ್ ಎಂಬುದಾಗಿ ನಮೂದಾಗಿದೆ. ಆದರೆ ಸತ್ಯಗಾಲ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕು ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಆದರೆ ಇ ಟೋಲ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಇದರ ಹಿಂದೆ ಒಂದು ಭ್ರಷ್ಟಾಚಾರ ಮತ್ತು ಜನರನ್ನ ಸುಲಿಗೆ ಮಾಡತಕ್ಕಂತಹ ಒಂದು ಕಳ್ಳ ನೀತಿ ಅಡಗಿದೆ. ಹಾಗಾಗಿ ನಾವು ಕರ್ನಾಟಕ ಪ್ರಾಂತ ರೈತ ಸಂಘ ಈ ಸಂದರ್ಭದಲ್ಲಿ ಮಳವಳ್ಳಿ ಗಡಿಯಿಂದ ಹೊರಗೆ ಟೋಲ್ ಇರಬೇಕು ಅವರೇ ಹೆಸರಿಸಿರುವಂತೆ ಸತ್ಯಗಾಲದ ವ್ಯಾಪ್ತಿಯಲ್ಲಿ ಇರಬೇಕು, ಕೊಳ್ಳೇಗಾಲ ತಾಲೂಕು ಮತ್ತು ಮಂಡ್ಯ ಜಿಲ್ಲೆಯ ಗಡಿಯಲ್ಲಿ ಇರುವುದರಿಂದ ಮಳವಳ್ಳಿ ತಾಲೂಕಿನ ಎಲ್ಲರಿಗೂ ಉಚಿತವಾಗಿ ಕಾರು ಇತರೆ ವಾಹನಗಳಿಗೆ ಅವಕಾಶವನ್ನು ಉಚಿತವಾದ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಈ ಟೋಲ್ ಓಪನ್ ಮಾಡುವ ಮುನ್ನ ಒಂದು ಪ್ರಕಟಣೆಯನ್ನು ಹೊರಡಿಸಬೇಕಾಗಿತ್ತು. ಯಾವುದೇ ರೀತಿಯ ಪ್ರಕಟಣೆಯನ್ನು ಹೊರಡಿಸದೇ ಸಾರ್ವಜನಿಕರ ಅಭಿಪ್ರಾಯ ಕೇಳದೆ ಮಾಡಿರುವುದು ಆಕ್ಷಮ್ಯ ಅಪರಾಧ ವಾಗಿದೆ.  ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಅಭಿಪ್ರಾಯಗಳನ್ನು ಕೇಳದೆ ಏಕ ಏಕಿ ವಸೂಲಿಗೆ ನಿಂತಿರುವ ಕ್ರಮ ಇದೊಂದು ನಾಗರಿಕ ವಿರೋಧಿಯಾದಂತಹ ಕ್ರಮವಾಗಿದೆ ಎಂದು ಖಂಡಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಬಿ ಜಿ.ಪುರ ಹೋಬಳಿ ಅಧ್ಯಕ್ಷ ಗುರುಸ್ವಾಮಿ, ನಂಜುಂಡಸ್ವಾಮಿ, ಪ್ರಮೋದ್, ಸಂದೀಪ್, ಸಿದ್ದರಾಜ್, ಪ್ರದೀಪ್, ಆಶೋಕ್ ಹಾಗೂ ಮಲ್ಲಿಕಾರ್ಜುನಸ್ವಾಮಿ ಭಾಗವಹಿಸಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ