Friday, November 20, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಅವೈಜ್ಞಾನಿಕ ಟೋಲ್ ವಸೂಲಿ ನಿಲ್ಲಿಸಲು ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ

ಸಾರ್ವಜನಿಕರಿಗೆ ಮೂಲ ಭೂತ ಸೌಕರ್ಯಗಳನ್ನು ನೀಡದೇ ಅವೈಜ್ಞಾನಿಕವಾಗಿ ಟೋಲ್ ಪ್ರಾರಂಭಿಸಿ ಸುಂಕ ವಸೂಲಾತಿ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಸಾರ್ವಜನಿಕರು ತಾಲ್ಲೂಕಿನ ಮಳವಳ್ಳಿ ಕೊಳ್ಳೇಗಾಲದ ಮುಖ್ಯ ರಸ್ತೆಯ ಸುಂಕ ವಸೂಲಾತಿ ಕೇಂದ್ರ ಮುಂದೆ ಪ್ರತಿಭಟನೆ ನಡೆಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಂಕ ವಸೂಲಾತಿ ಕೇಂದ್ರ ಮುಂದೆ ಜಮಾಯಿಸಿ ಪ್ರಾಧಿಕಾರ ವಿರುದ್ಧ ಸುಂಕ ವಸೂಲಾತಿಯನ್ನು ನಿಲ್ಲಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ ಮಾಡಿ ಘೋಷಣೆ ಕೂಗಿದರು.

ನಂತರ ದೊಡ್ಡಯ್ಯ ಮಾತನಾಡಿ, ಈ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿದೆ. ರಸ್ತೆಗಳನ್ನು ಮೊದಲು ಸರಿಪಡಿಸಿ ಜೋಡಿರಸ್ತೆ ಮಾಡಿ ಬಳಿಕ ಸುಂಕ ಮಸೂಲಿ ಮಾಡಲಿ, ಅಲ್ಲಿಯವರೆಗೂ ಸುಂಕ ವಸೂಲಾತಿ ನಿಲ್ಲಿಸಬೇಕು ಒತ್ತಾಯಿಸಿದರು.

ಮನ್ ಮುಲ್ ನಿರ್ದೇಶಕ ವಿಶ್ವಾಸ್ ಮಾತನಾಡಿ, ಮಳವಳ್ಳಿ ಟೌನ್ ನ ಟೂಲ್ ಗೇಟ್ ನಿಂದ ಪ್ರವಾಸಿ ಮಂದಿರದವರೆಗೂ ರಸ್ತೆ, ಸೇತುವೆ ಮತ್ತು ವೃತ್ತಗಳನ್ನು ನಿರ್ಮಿಸಬೇಕು ನಂತರ ಸುಂಕ ವಸೂಲಾತಿ ಮಾಡಲಿ,  ಜೊತೆಗೆ ಟೋಲ್ ಸೆಂಟರ್ ನಿರ್ಮಾಣ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಸತ್ತೇಗಾಲ ಫ್ಲಾಜಾ ಎಂದು ನಾಮಫಲಕ ಹಾಕಿದ್ದು ಇದು ಚಾಮರಾಜನಗರ ಜಿಲ್ಲೆಯ ಗ್ರಾಮದ ಹೆಸರು ಆಗಿದೆ. ಮಂಡ್ಯ ಜಿಲ್ಲೆಯ ಹೊಸಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಹೊಸಹಳ್ಳಿ ಫ್ಲಾಜಾ ಎಂದು ಹಾಕಬೇಕಾಗಿತ್ತು. ಇದಲ್ಲದೆ ಉದ್ಘಾಟನೆ ವೇಳೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ತಾಲ್ಲೂಕು ಆಡಳಿತ ಅಧಿಕಾರಿಗಳನ್ನು ಆಹ್ವಾನಿಸದೆ ಉದ್ಘಾಟಿಸಿರುವುದು ಖಂಡನೀಯ, ಕೂಡಲೇ ಸುಂಕ ವಸೂಲಾತಿ ನಿಲ್ಲಿಸಿ, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಸಿಡಿಸಿ ಅಧ್ಯಕ್ಷ ರವೀಂದ್ರಕುಮಾರ್, ತಾಲೂಕು ಯುವ ಘಟಕದ ಅಧ್ಯಕ್ಷ ಶ್ರೀಕಾಂತ್, ಮುಟ್ಟನಹಳ್ಳಿ ಅಂಬರೀಶ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಕುಮಾರ, ಬಂಕ್ ಮಹಾದೇವ. ಶಿವ ಸ್ವಾಮಿ ಜಯರಾಜು ಮಾಜಿ ಅಧ್ಯಕ್ಷ ನಾಗರಾಜು ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಘು, ರಹಿಂ, ತಿಮ್ಮೇಗೌಡ ಸೇರಿದಂತೆ ಹಲವರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ