ರಾಜ್ಯ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ. ಈಗ ಮತ್ತೇ ಬಡವರ ಹಸಿವು ನೀಗಿಸಲು 10 ಅಕ್ಕಿ ವಿತರಣೆ ಚಾಲನೆ ನೀಡಲಾಗಿದೆ ಎಂದು ಮಂಡ್ಯ ಶಾಸಕ ಪಿ. ರವಿಕುಮಾರ್ ಗಣಿಗ ತಿಳಿಸಿದರು.
ಮಂಡ್ಯನಗರದ ಗುತ್ತಲು ಬಡಾವಣೆಯಲ್ಲಿ 10 ಕೆ.ಜಿ. ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈವರೆಗೆ ಐದು ಕೆಜಿ ಅಕ್ಕಿ ಕೊಟ್ಟು, ಉಳಿದ ಐದು ಕೆಜಿಗೆ ಹಣ ಕೊಡುತ್ತಿದ್ದೆವು. ಇನ್ನು ಮುಂದೆ ಹತ್ತು ಕೆಜಿ ಅಕ್ಕಿ ವಿತರಿಸಲಾಗುವುದು. ಯಾರೂ ಕೂಡ ಹಸಿವಿಲ್ಲದೆ ಇರೋದಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ ಎಂದರು.
ಏಳು ಕೋಟಿ ಜನರೂ ಹಸಿದು ಮಲಗಬಾರದೆಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. ಎಷ್ಟೇ ಆರ್ಥಿಕ ಹೊರೆಯಾದ್ರೂ ಕೂಡ ಐದೂ ಗ್ಯಾರಂಟಿಗಳನ್ನೂ ಪೂರೈಸುತ್ತಿದ್ದೇವೆ. ನಮ್ಮ ಸರ್ಕಾರ ಬಡವರ ಪರ ಇದೆ. ಅಭಿವೃದ್ದಿಯೇ ನಮ್ಮ ಗುರಿಯಾಗಿದೆ. ಮಂಡ್ಯ ನಗರದ 70% ರಸ್ತೆಗಳನ್ನ 13 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಮಹಾರಾಷ್ಟ್ರ ಸರ್ಕಾರ 2500 ರೂ. ಕೊಡ್ತೇವೆ ಅಂತೇಳಿ ಈಗ 1500 ರೂ. ಕೊಡ್ತಿದೆ. ನಮ್ಮ ಸರ್ಕಾರ ಕೊಟ್ಟ ಮಾತನ್ನು ತಪ್ಪದೆ ನುಡಿದಂತೆ ನಡೆದಿದೆ ಎಂದರು.

4.5 ಕೋಟಿ ರೂ. ವೆಚ್ಚದಲ್ಲಿ ಅಬಿವೃದ್ದಿ
ಮಹಾವೀರ ವೃತ್ತದಿಂದ ಹೊಸಹಳ್ಳಿ ವೃತ್ತದವರೆಗೆ 4.5 ಕೋಟಿ ರೂ. ವೆಚ್ಚದಲ್ಲಿ ಅಬಿವೃದ್ದಿಗೆ ಮುಂದಾಗಿದ್ದೇವೆ.
ಎಲ್ಲರ ಆಶೀರ್ವಾದದಿಂದ ಮಂಡ್ಯ ನಗರಕ್ಕೆ ಹೊಸ ರೂಪ ಕಲ್ಪಿಸಲಾಗುವುದು. ಅನುಷ್ಠಾನ ಸಮಿತಿ ಸದಸ್ಯರು ಪ್ರತೀ ಮನೆ ಮನೆಗೂ ತೆರಳಿ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯಾ ಎಂಧು ಸರ್ವೆ ಮಾಡಬೇಕು. ಕಾರಣ ನೂರರಲ್ಲಿ ಇಬ್ಬರಿಗೆ ತಲುಪಿಲ್ಲಾ ಅಂದರೂ ಸರ್ಕಾರದ ವೈಪಲ್ಯವಾಗುತ್ತದೆ. ಸಮಿತಿ ಸದಸ್ಯರು ಎಚ್ಚರಿಕೆಯಿದ ಕೆಲಸ ನಿರ್ವಹಿಸಬೇಕು ಎಂದರು.
ಇಂದು 1.55 ಕೋಟಿ ರೂ. ವೆಚ್ಚದಲ್ಲಿ ಭೂಮಿ ಪೂಜೆ ಮಾಡಲಾಗಿದೆ. ಹೊನಗಾನಹಳ್ಳಿ ಗ್ರಾಮದ ಬಸ್ ಸ್ಟ್ಯಾಂಡ್ ಗೆ ಐದು ಲಕ್ಷ, ಮಾರಗೌಡನಹಳ್ಳಿಗೆ ಒಂದು ಕೋಟಿ, ಕೆರಗೋಡು ಗ್ರಾಮಗಳ ಅಭಿವೃದ್ದಿಗೆ 50 ಲಕ್ಷ ಅನುದಾನ ನೀಡಲಾಗಿದೆ. ಮಂಡ್ಯ 25 ವರ್ಷಗಳ ಹಿಂದಕ್ಕೆ ಹೋಗಿತ್ತು. ನಾನು ಶಾಸಕನಾದ ಮೇಲೆ ವೇಗವಾಗಿ ಅಭಿವೃದ್ದಿ ಮಾಡಲಾಗುತ್ತಿದೆ. SCP ಯೋಜನೆಯಡಿ ಒಂದೂವರೆ ಕೋಟಿ ರೂ. ಕಾಮಗಾರಿ ನಡೀತಿದೆ.
ಕಾವೇರಿ ನೀರಾವರಿ ಯೋಜನೆಗೆ 93 ಕೋಟಿ ರೂ. ಹಾಗೂ ಹೇಮಾವತಿ ಯೋಜನೆ ಕಾಮಗಾರಿಗೆ 7 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದರು.
ಸಿಎಂ ಹಾಗೂ ಡಿಸಿಎಂ ಗೆ ನಾನು ಅಭಾರಿಯಾಗಿದ್ದೇನೆ. 150 ಕೋಟಿ ರೂ. ವೆಚ್ಚದಲ್ಲಿ ನಾಲೆಗಳ ಅಭಿವೃದ್ಧಿ ಪಡಿಸಲಾಗುವುದು. ಕಳೆದ ಒಂದೂವರೆ ವರ್ಷದಲ್ಲಿ ಕಾವೇರಿ ನೀರಾವರಿ ನಿಗಮದಿಂದ 250 ಕೋಟಿ ರೂ. ಅನುದಾನ ತರಲಾಗಿದೆ. ಪಂಚಲಿಂಗೋತ್ಸವದಲ್ಲಿ ಐವತ್ತು ಮಂದಿಗೆ ಹಕ್ಕು ಪತ್ರ ನೀಡಲಾಗಿದೆ.
ನಿವೇಶನ ಹಂಚಿಕೆಗಾಗಿ 25 ಕಡೆ ಜಾಗ ಗುರುತಿಸಲಾಗುತ್ತಿದೆ. ಇನ್ನೊಂದು ವರ್ಷದೊಳಗೆ ಸೂರಿಲ್ಲದವರಿಗೆ ಸೂರು ನೀಡಲಾಗುವುದು.




