ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಆ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ನಾಗಮಂಗಲ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಅಂಗವಿಕಲರಿಗೆ 2024 -25 ನೇ ಸಾಲಿನ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ ತ್ರಿಚಕ್ರ ವಾಹನ ವಿತರಿಸಿ ಅವರು ಮಾತನಾಡಿದರು.
ಸುಮಾರು 25 ಫಲಾನುಭವಿಗಳಿಗೆ ವಾಹನ ವಿತರಣೆ ಮಾಡಿದರು. ಅಂಗವಿಕಲರು ದಿನನಿತ್ಯದ ತಮ್ಮ ವ್ಯವಹಾರಿಕ ಕಾರ್ಯನಿಮಿತ್ತ ಕೆಲಸಗಳಿಗೆ ತ್ರಿಚಕ್ರ ವಾಹನ ಬಳಸುವ ಮುಖಾಂತರ ಸರ್ಕಾರದ ಇಂತಹ ಸವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಇತರೆ ಚಟುವಟಿಕೆಗಳಲ್ಲಿ ಈ ವಾಹನಗಳನ್ನು ಬಳಸದಂತೆ ತಮ್ಮ ಸ್ವಂತ ವಾಹನಗಳಾಗಿ ಬಳಸಿಕೊಳ್ಳುವ ಮುಖಾಂತರ ಸರ್ಕಾರದ ಯೋಜನೆಗಳನ್ನು ಪಡೆದು ಅನುಕೂಲ ಮಾಡಿಕೊಳ್ಳುವಂತೆ ಈ ಸಂದರ್ಭದಲ್ಲಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಕೃಷಿ ವಿವಿ ಆಡಳಿತ ಮಂಡಳಿ ನಿರ್ದೇಶಕ ದಿನೇಶ್, ಎಚ್ ಟಿ ಕೃಷ್ಣೆ ಗೌಡ, ಪುರಸಭಾ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು




