ಹಿಂದುಳಿದ ಪ್ರದೇಶಗಳನ್ನು ಭೇಟಿ ಮಾಡಿ ಅಲ್ಲಿರುವ ಸಮಸ್ಯೆ ಗಳನ್ನು ಗುರುತಿಸಿ ಸರ್ಕಾರ ಕ್ಕೆ ವರದಿ ನೀಡುವುದಾಗಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೋ. ಎಂ ಗೋವಿಂದರಾವ್ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ತಮ್ಮಡಹಳ್ಳಿ ಗ್ರಾಮಕ್ಕೆ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷರ ತಂಡ ಭೇಟಿ ಪರಿಶೀಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಷ್ಠೇ ಅಸಮತೋಲನ ನಿವಾರಣಾ ಸಮಿತಿ ತಂಡ ರಚಿಸಿದ್ದು, ಎಲ್ಲಲ್ಲಿ ಅಸಮತೋಲನವಿದೆ ಎಂದು ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ನಿನ್ನೆಷ್ಠೆ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಂಡಿದ್ದು, ಇಂದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ತಮ್ಮಡಹಳ್ಳಿ ಸೇರಿದಂತೆ 10 ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡು ಸಮತೋಲನ ಕಾಪಾಡಿಕೊಂಡಿಕೊಳ್ಳಲು ಬಗ್ಗೆ ಯಾವ ರೀತಿ ಕ್ರಮ ಕೈ ಗೊಳ್ಳಬೇಕು ಎಂಬ ವರದಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.
ಇನ್ನೂ ಇದೇ ವೇಳೆ ಗ್ರಾ.ಪಂ ಸದಸ್ಯ ಶಿವಲಿಂಗಯ್ಯ ರವರು, ನಮ್ಮ ಗ್ರಾಮ ಪಟ್ಟಣಕ್ಕೆ ಒಂದು ಕಿ.ಮೀ ದೂರದಲ್ಲಿದ್ದು, ಈ ಗ್ರಾಮಕ್ಕೆ ಸರಿಯಾದ ಸೌಲಭ್ಯಗಳು ದೊರಕುತ್ತಿಲ್ಲ, ಗ್ರಾ.ಪಂ ಗೆ ಮನವಿ ಸಲ್ಲಿಸಿದ್ದರೂ ಅರ್ಜಿಗಳಿಗೆ ಬೆಲೆಯೇ ತುಕ್ಕು ಹಿಡಿಯುತ್ತಿದೆ ಸಮಸ್ಯೆಯನ್ನು ಬಗೆಹರಿಸಿ ಎಂದು ಸಮಿತಿ ಅಧ್ಯಕ್ಷ ಪ್ರೋ .ಗೋವಿಂದರಾವ್ ರವರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ನರೇಂದ್ರಸ್ವಾಮಿ. ಆರ್ಥಿಕ ಇಲಾಖೆ ಹಾಗೂ ಸದಸ್ಯ ಕಾರ್ಯದರ್ಶಿ ಡಾ.ವಿಶಾಲ್ , ಅಸಮತೋಲನ ಸಮಿತಿಯ ಸೂರ್ಯನಾರಾಯಣ, ಜಿಲ್ಲಾಧಿಕಾರಿ ಡಾ.ಕುಮಾರ, ಉಪವಿಭಾಗಾಧಿಕಾರಿ ಶಿವಮೂರ್ತಿ, ಸೇರಿದಂತೆ ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.




