ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿರುವ ಡಿ.ಕೆ.ಶಿವಕುಮಾರ್ ಅವರ ವಿರುದ್ದ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಷ್ಟ್ರಕ್ಕೆ ಉತ್ಕೃಷ್ಟ ಮತ್ತು ಸುಭದ್ರ ಸಂವಿಧಾನವನ್ನು ಕೊಟ್ಟ ವಿಶ್ವರತ್ನ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನೂ ಅವರ ಸಂವಿಧಾನವನ್ನೂ ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿರುವುದು ಕಾಂಗ್ರೇಸ್ಸಿಗರು, ಇತ್ತೀಚಿನ ಸಂದರ್ಶನವೊಂದರಲ್ಲಿ ಸಂದರ್ಶನಕಾರರು ಡಿ.ಕೆ.ಶಿವಕುಮಾರ್ ರವರನ್ನು ಕುರಿತು “ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿ ಅಲ್ಲವೆ?” ಎಂಬ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ರವರು “ಒಳ್ಳೆಯ ದಿನಗಳಿಗಾಗಿ ಕಾಯೋಣ, ಒಳ್ಳೆಯ ಸಮಯ ಬರಲಿದೆ, ಸಾಕಷ್ಟು ಬದಲಾವಣೆಗಳಾಗುತ್ತವೆ. ಸಂವಿಧಾನ ಬದಲಾಗುತ್ತದೆ” ಎಂದು ಹೇಳಿರುವುದು ಖಂಡನೀಯ ಎಂದರು.
ಡಿ.ಕೆ.ಶಿವಕುಮಾರ್ ಅವರು ಮಂಡ್ಯದ ಸ್ವಾಭಿಮಾನಿ ಜನತೆಯನ್ನು ಛತ್ರಿಗಳು ಎಂದು ಅವಮಾನಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ, ಡಿ.ಕೆ.ಶಿವಕುಮಾರ್ ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಎಸ್ಟಿ ಎಸ್ಸಿ ಘಟಕದ ಅಧ್ಯಕ್ಷ ಎಸ್.ಡಿ. ಜಯರಾಮ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್(ನಾಗೇಶ್), ಜೆಡಿಎಸ್ ಮುಖಂಡಾರಾದ ಬಿ.ಆರ್.ಸುರೇಶ್, ವೇಣುಗೋಪಾಲ್ ಮತ್ತಿತರರಿದ್ದರು.




