ಜಗತ್ತಿನ ದೊಡ್ಡ ಸ್ವಯಂ ಸೇವಾ ಸಂಸ್ಥೆಯಾಗಿರುವ ಲಯನ್ಸ್ ಬಾಂಧವ್ಯ ವೃದ್ಧಿಗೆ ಸಂಕಲ್ಪ ಮಾಡಿದೆ. ಜನ ಸೇವೆಯಿಂದ ಸೌಹಾರ್ದ ಸಂಬಂಧ ಬೆಳೆಯುತ್ತದೆ. ಸರ್ವರ ಸೇವೆಗೆ ಲಯನ್ಸ್ ಬದ್ಧವಾಗಿದೆ ಎಂದು ಮಂಡ್ಯ ಜಿಲ್ಲಾ ಸಂಪುಟ ಸಲಹೆಗಾರ ಲಯನ್ ಕೆ.ದೇವೇಗೌಡ ಹೇಳಿದರು.
ಮಂಡ್ಯದ ಎ ಅಂಡ್ ಎ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಜಿ ಪ್ರಾಂತ್ಯ 8 ರ ಪ್ರಾಂತೀಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಖ್ಯಾತ ಅಂತರರಾಷ್ಟ್ರೀಯ ತರಬೇತುದಾರರು ಮತ್ತು ರಾಷ್ಟ್ರೀಯ ರವಿ ಪುರಸ್ಕೃತರು ಹಾಗೂ ಇಂದಿರಾ ಪ್ರಿಯದರ್ಶನಿ ಪ್ರಶಸ್ತಿ ಪುರಸ್ಕೃತರಾದ ಆರ್.ಎ.ಚೇತನ್ ರಾಮ್ ನಾನು ಯಾರು ಎಂಬ ಘೋಷವಾಕ್ಯದ ಕುರಿತು ಪ್ರಮುಖ ಭಾಷಣ ಮಾಡಿದರು.

ಪಿಡಿಜಿ ಮತ್ತು ಮಲ್ಟಿಪಲ್ ಕೌನ್ಸಿಲ್ ಛೇರ್ಮನ್ ಡಾ.ಎನ್.ಕೃಷ್ಣೇಗೌಡ ಮಾತನಾಡಿ , ಎಸ್.ಪಿ.ಆದರ್ಶ್ ಅವರು ಉತ್ತಮವಾದ ಪ್ರಾಂತೀಯ ಸಮ್ಮೇಳನವನ್ನು ಆಯೋಜನೆ ಮಾಡಿದ್ದಾರೆ, ಲಯನ್ಸ್ ಸಂಸ್ಥೆಯ ಆಡಳಿತ ವೈಖರಿ , ಲಯನ್ಸ್ ಸಂಸ್ಥೆಗಳಿಂದ ಮಾಡುತ್ತಿರುವ ಸೇವಾ ಕಾರ್ಯಗಳ ಅನಾವರಣ ಮಾಡುವುದ್ದಕ್ಕಾಗಿ ಪ್ರಾಂತೀಯ ಸಮ್ಮೇಳನ ಮಾಡಲಾಗುವುದು ಎಂದರು.
ಪ್ರಾಂತೀಯ ಅಧ್ಯಕ್ಷರಾದ ಲಯನ್ ಎಸ್.ಪಿ.ಆದರ್ಶ್ ಮಾತನಾಡಿ , ಯಾವುದೇ ಪ್ರತಿಲಾಪೇಕ್ಷೆಯಿಲ್ಲದೆ, ಸದಸ್ಯರ ದುಡಿಮೆಯ ಒಂದು ಭಾಗವನ್ನು ಸೇವಾ ಕಾರ್ಯಕ್ಕೆ ನೀಡುತ್ತಾ ಬರಲಾಗಿದೆ. ನಾವು ಇದ್ದಷ್ಟು ದಿನ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಮಾಜ ಸೇವೆ ವಾಡಿದರೆ ಮುಂದಿನ ಪೀಳಿಗೆ ನಮ್ಮನ್ನು ಸ್ಮರಿಸುತ್ತದೆ ಎಂದರು. ಸೇವೆಯಲ್ಲಿ ಧನ್ಯತೆ ಕಾಣುವ ಆಶಯದೊಂದಿಗೆ ಈ ಸಮ್ಮೇಳನ ನಡೆಯುತ್ತಿದೆ. ಸೇವೆಯ ಧನ್ಯತೆ ಎಲ್ಲರಿಗೂ ಸಿಗಲಿ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಹಲವು ಸೇವಾ ಚಟುವಟಿಕೆಗಳು ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲರಾದ ಲಯನ್ ಎನ್.ಸುಬ್ರಮಣ್ಯ, ಲಯನ್ ಮತಿದೇವಕುಮಾರ್ , ಲಯನ್ ಸಿ.ಡಿ.ಕೃಷ್ಣ , ಲಯನ್ ಡಾ.ಜಿ.ಎ.ರಮೇಶ್ , ಲಯನ್ ಕೆ.ಎಸ್.ಸುನಿಲ್ ಕುಮಾರ್ , ಲಯನ್ ದೇವರಸೇಗೌಡ , ಲಯನ್ ಚಂದ್ರಶೇಖರ್ , ಲಯನ್ ಸುರೇಶ , ಲಯನ್ ಜಗದೇಶ್, ಲಯನ್ ಕೆಂಪೇಗೌಡ , ಲಯನ್ ರೇವಣ್ಣ , ಲಯನ್ ನಿಂಗರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.




