ಸಂಘ ಪರಿವಾರದ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಗೌಡ ಮಾತನಾಡಿದ್ದಾರೆ ಎನ್ನಲಾದ ಸ್ಪೋಟಕ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಟ್ವೀಟ್ ಮಾಡಿದ್ದು, ಬಿಜೆಪಿ ಶಾಸಕ ಸುರೇಶ ಗೌಡರು ಆರ್ ಎಸ್ ಎಸ್ ನ ಗುಪ್ತಸೂಚಿಗಳ ಬಗ್ಗೆ ಬಾಯ್ತಪ್ಪಿ ಆಡಿದ ಮಾತುಗಳಲ್ಲ, ಬಾಯ್ತೆರೆದು ಮಾತಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಶಾಸಕ ಸುರೇಶ ಗೌಡರು ಆರ್ ಎಸ್ ಎಸ್ ನ ಗುಪ್ತಸೂಚಿಗಳ ಬಗ್ಗೆ ಬಾಯ್ತಪ್ಪಿ ಆಡಿದ ಮಾತುಗಳಲ್ಲ, ಬಾಯ್ತೆರೆದು ಮಾತಾಡಿದ್ದಾರೆ.
ಸಂಘ ಪರಿವಾರದ ಕರ್ಮಕಾಂಡದ ಯಶೋಗಾಥೆಯ ಬಗ್ಗೆ ಬಿಜೆಪಿ ಶಾಸಕ ಸುರೇಶ ಗೌಡ ಒಂದೊಂದು ಆಣಿಮುತ್ತುಗಳನ್ನು ಉದುರಿಸಿದ್ದಾರೆ.
ಶೂದ್ರರು,ಹಿಂದುಳಿದವರು,ಶೋಷಿತ ಸಮುದಾಯದ ಬಿಜೆಪಿ ಪಕ್ಷದ್ದೇ ರಾಜಕೀಯ ನಾಯಕರನ್ನು… pic.twitter.com/TjSVngMmw4
— Hariprasad.B.K. (@HariprasadBK2) April 2, 2025
“>
ಸಂಘ ಪರಿವಾರದ ಕರ್ಮಕಾಂಡದ ಯಶೋಗಾಥೆಯ ಬಗ್ಗೆ ಬಿಜೆಪಿ ಶಾಸಕ ಸುರೇಶ ಗೌಡ ಒಂದೊಂದು ಆಣಿಮುತ್ತುಗಳನ್ನು ಉದುರಿಸಿದ್ದಾರೆ. ಶೂದ್ರರು,ಹಿಂದುಳಿದವರು,ಶೋಷಿತ ಸಮುದಾಯದ ಬಿಜೆಪಿ ಪಕ್ಷದ್ದೇ ರಾಜಕೀಯ ನಾಯಕರನ್ನು ಬುಡಮೇಲು ಮಾಡಿದ ಕುತಂತ್ರಗಾರಿಕೆಯ ಪರಂಪರೆಯನ್ನು ಹಾಡಿ ಹೊಗಳಿದ್ದಾರೆ ಎಂದು ತಿಳಿಸಿದ್ದಾರೆ.
ಇಡೀ ಜಗತ್ತಿನಲ್ಲೇ ಶ್ರೀಮಂತ ಸಂಘವಾಗಲು ಆರ್ ಎಸ್ ಎಸ್ ತಾನು ಮಾಡುವ ಭ್ರಷ್ಟಾಚಾರಗಳಿಗೆ ಎಲ್ಲೇ ಇಲ್ಲ. ಬಿಜೆಪಿ ಪಕ್ಷದ ನಾಯಕರೇ ಸಂಘ ಪರಿವಾರದ ಅಸಲಿ ಮುಖವಾಡಗಳನ್ನು ಬಿಚ್ಚಿಡಬೇಕು. ಸತ್ಯ ಕಹಿ ಆಗಿರುತ್ತೆ, ಸ್ವಲ್ಪ ಅರಗಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದೇ ವಿಡಿಯೋವನ್ನು ಕಾಂಗ್ರೆಸ್ ಪಕ್ಷವು ತನ್ನ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದೆ.




