Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜಿಲ್ಲಾಸ್ಪತ್ರೆ ಅವ್ಯವಸ್ಥೆ ಖಂಡಿಸಿ ಕರವೇ ಪ್ರತಿಭಟನೆ

ಮಂಡ್ಯ ನಗರ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಇಂದು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಮಂಡ್ಯ ಸರ್ಕಾರಿ ಆಸ್ಪತ್ರೆಯು ಅವ್ಯವಸ್ಥೆಗಳಿಂದ ಕೂಡಿದ್ದು ಚಿಕಿತ್ಸೆಗೆಂದು ಮಂಡ್ಯ ಆಸ್ಪತ್ರೆಗೆ ಬರುವ ರೋಗಿಗಳಿಗೆ ತುರ್ತಾಗಿ ಚಿಕಿತ್ಸೆ ದೊರೆಯುತ್ತಿಲ್ಲ, ಬದಲಿಗೆ ಹೊರ ರೋಗಿಗಳು ಓ.ಪಿ.ಡಿ ಚೀಟಿ ಪಡೆಯಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಚೀಟಿ ಪಡೆಯುವವರೆಗೂ ಯಾವುದೇ ರೋಗಿ ಸಾಯುವ ಸ್ಥಿತಿಯಲ್ಲಿದ್ದರು ವೈದ್ಯರು ಪರೀಕ್ಷಿಸುವುದಿಲ್ಲ ಎಂದು ದೂರಿದರು.

ಕಳೆದ ಹಲವು ವರ್ಷಗಳಿಂದ ಆಸ್ಪತ್ರೆಯ ಯಾವುದೇ ಟೆಂಡರ್ ಪ್ರಕ್ರಿಯೆ ಸರಿಯಾಗಿ ಮಾಡದೆ ಹಳೆಯ ಟೆಂಡರ್‌ದಾರರೇ ಮುಂದುವರಿಯುತ್ತಿದ್ದಾರೆ ಮತ್ತು ಕೆಲವು ಬಲಿಷ್ಠರ ಕೈಮುಷ್ಟಿಯಲ್ಲಿದ್ದಾರೆ ಆಸ್ಪತ್ರೆಯ ಅಧಿಕಾರಿಗಳು, ಸೂಪವೈಸರ್ ಗಳು ಸರ್ವಾಧಿಕಾರಿಗಳ ರೀತಿಯಲ್ಲಿ ಬಂದ ರೋಗಿಗಳೊಂದಿಗೆ ವರ್ತಿಸುತ್ತಾರೆ. ಆಸ್ಪತ್ರೆಯಲ್ಲಿ ಮಾತ್ರೆ ಔಷಧಿಗಳು ಸ್ಪಾಕ್ ಇದ್ದರೂ ಹೊರಗಡೆ ಮೆಡಿಕಕ್ ವೈದ್ಯರು ಚೀಟಿ ಬರೆಯುತ್ತಾರೆ. ಇವೆಲ್ಲವನ್ನು ತಪ್ಪಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಅಶೋಕ್, ಎಂ.ಪಿ.ಸ್ವಾಮಿ, ಯೋಗೇಶ್, ಗದ್ದಿಗೌಡ, ಸಾವಿತ್ರಮ್ಮ, ಗೀತಾ, ಸವಿತಾ ಸೇರಿದಂತೆ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ