ಕಳೆದ ಫೆ. 2ರಂದು ನೆಡೆದಿದ್ದ ಮನ್ ಮುಲ್ ಆಡಳಿತ ಮಂಡಳಿಯ ಕೆ.ಆರ್.ಪೇಟೆ ತಾಲೂಕು ನಿರ್ದೇಶಕರ ಚುನಾವಣೆ ಫಲಿತಾಂಶ ಕೋರ್ಟ್ ತಡೆ ನೀಡಿತ್ತು.
ಏ.4 ರಂದು ಕೋರ್ಟ್ ಚುನಾವಣೆ ಫಲಿತಾಂಶ ಪ್ರಕಟಿಸಿ ಎಂದು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಕೆ.ರವಿ( ಡಾಲು ರವಿ) ಹಾಗೂ ಎಂ.ಬಿ. ಹರೀಶ್ ಅವರಿಗೆ
ಚುನಾವಣಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಪ್ರಮಾಣ ಪತ್ರ ವಿತರಿಸಿದರು.
ನಂತರ ಮಾತನಾಡಿದ ಮನ್ ಮುಲ್ ನಿರ್ದೇಶಕ ಡಾಲು ರವಿ, ನಾವು ಜೆಡಿಎಸ್ ನಲ್ಲೆ ನಾವು ಸಕ್ರಿಯವಾಗಿದ್ದೇವೆ. ಜೆಡಿಎಸ್ ಪಕ್ಷ ಬಿಟ್ಟಿಲ್ಲ. ಮನ್ ಮುಲ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಶಾಸಕ ಹೆಚ್.ಟಿ.ಮಂಜು ಹಾಗೂ ನಮ್ಮ ನಡುವೆ ಸವಾಲು ಇತ್ತು. ಶಾಸಕರ ಎದುರು ಚುನಾವಣೆ ನಡೆಸುವುದು ಎಷ್ಟು ಕಷ್ಟ ಅಂತ ಗೊತ್ತಿದೆ. ಇದಕ್ಕೆ ಮತದಾರರು ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಶಾಸಕ ಹೆಚ್.ಟಿ.ಮಂಜುಗೆ ಭಾರಿ ಮುಖಭಂಗ ಮಾಡಿದ ಡಾಲು ರವಿ. ಕೈ ಬೆಂಬಲಿತರಾಗಿ ಡಾಲು ರವಿ ಮತ್ತು ಮಾಜಿ ಅಧ್ಯಕ್ಷ ಹರೀಶ್ ಗೆಲುವು ಸಾಧಿಸಿದ್ದಾರೆ.
74 ಮತಗಳನ್ನು ಪಡೆದು ಸೋತ ಶಾಸಕ
ಡಾಲು ರವಿ 137 , ಎಂ.ಬಿ.ಹರೀಶ್ 123 ಮತಗಳಿಂದ ಗೆಲುವು ಸಾಧಿಸಿದ್ದರೆ, ಶಾಸಕ ಹೆಚ್.ಟಿ.ಮಂಜು 74 ಮತಗಳನ್ನು ಪಡೆದು ಸೋಲುಂಡಿದ್ದಾರೆ.
ಉಸ್ತುವಾರಿ ಸಚಿವರು ಸಹಾಯ ಮಾಡಿದ್ದಾರೆ
ನಾವು ಜೆಡಿಎಸ್ ಪಕ್ಷದಲ್ಲೆ ಇದ್ದೇವೆ, ಪಕ್ಷ ಬಿಟ್ಟಿಲ್ಲ ಶಾಸಕರ ವಿರುದ್ದವಾಗಿ ಚುನಾವಣೆ ಮಾಡಿದ್ದೇವೆ ಅಷ್ಟೆ.
ಕೇಂದ್ರ ಸಚಿವ ಕುಮಾರಸ್ವಾಮಿ ತೊಂದರೆ ಕೊಟ್ಟಿಲ್ಲ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ ಸಹಾಯ ಮಾಡಿದ್ದಾರೆ ಅಷ್ಟೆ ಎಂದು ಡಾಲು ರವಿ ಅವರು, ಸಹಕಾರ ಸಂಘದಲ್ಲಿ ರಾಜಕೀಯ ಬೇಡ ಅಂತ ಹೇಳಿದ್ದು. ಬುದ್ದಿ ಹೇಳಿ ಕಳ್ಸಿದ್ರು. ಡೈರಿ ಉಳಿಸಿಕೊಳ್ಳಿ ಅಂತ ಹೇಳಿದ್ದಾರೆ ಎಂದು ತಿಳಿಸಿದರು ಎಂದರು.
ಶಾಸಕರು ಸ್ವಂತ ನಿರ್ಧಾರದಿಂದ ಚುನಾವಣೆಗೆ ಬಂದಿದ್ದರು. ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಿರ್ಧಾರ ಮಾಡಿಲ್ಲ, ಶಾಸಕರ ಮಾತಿಗೆ ಉತ್ತರ ಕೊಡಲ್ಲ. ಸಚಿವ ಚಲುವರಾಯ ಸ್ವಾಮಿ ಅವರ ಜೊತೆ ವಿಶ್ವಾಸದಲ್ಲಿದ್ದೆವೆ. ಡೈರಿ ಅಭಿವೃದ್ಧಿಗೆ ಸಹಕರಿಸುತ್ತೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ರೈತರಿಗೆ ನಾಲ್ಕು ರೂ.ಕೊಡ್ತಿದೆ, ರೈತರಿಗೆ ಒಳ್ಳೆಯದಾಗಬೇಕು ಅಷ್ಟೆ. ಸಹಕಾರ ಸಂಘದ ಅಭಿವೃದ್ಧಿ ನಾವು ಸಹ ಸಿದ್ದರಿರುತ್ತೇವೆ. ಕಾಂಗ್ರೆಸ್ ಗೆ ಬಾ ಅಂತ ಯಾರು ಕರೆದಿಲ್ಲ. ನಾವು ಜೆಡಿಎಸ್ ನಲ್ಲೆ ಸಕ್ರಿಯವಾಗಿ ಇರ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮನ್ ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಇದ್ದರು.




