ಮಂಡ್ಯನಗರದ ಹೃದಯ ಭಾಗವಾದ ಪೇಟೆ ಬೀದಿ, ಹೊಳಲು ವೃತ್ತವನ್ನು 4.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ಮಂಡ್ಯನಗರ ಹೊಳಲು ವೃತ್ತದಲ್ಲಿ ಸೋಮವಾರ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ವಿಶೇಷ ಅನುದಾನ-2 ರ ಅಡಿಯಲ್ಲಿ ಹೊಳಲು ವೃತ್ತಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುವುದು, ಕಾಬೂಲ್ ಸ್ಟೋನ್ ಬಳಸಿ ಶಾಶ್ವತವಾಗಿ ಉಳಿಯುವಂತಹ ಕೆಲಸ ನಿರ್ವಹಿಸಲಾಗುವುದು ಎಂದರು.
ಹೊಳಲು ವೃತ್ತದಿಂದ ಕಾಮನ ಸರ್ಕಲ್ ವರೆಗೆ ರಸ್ತೆ ಅಭಿವೃದ್ದಿ ಮಾಡಲಾಗುವುದು, ಈ ವಾರ್ಡಿನ ರಸ್ತೆ, ಚರಂಡಿ ಹಾಗೂ ಪಾರ್ಕ್ ಗಳನ್ನು ಅಭಿವೃದ್ದಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ್ ಎಂ.ವಿ, ಉಪಾಧ್ಯಕ್ಷ ಅರುಣ್ ಕುಮಾರ್, ಮುಡಾ ಅಧ್ಯಕ್ಷ ನಯೀಮ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್.ಮಂಜು,ಆಯುಕ್ತೆ ಪಂಪಾಶ್ರೀ,ಸದಸ್ಯೆ ಪೂರ್ಣಿಮಾ, ಕಾಂಗ್ರೆಸ್ ಮುಖಂಡರಾದ ಆದರ್ಶ್,ಕೃಷ್ಣ, ಅಭಿಷೇಕ್, ಟೆಕ್ನಿಕ್ ಮಂಜು, ಪ್ರಸನ್ನ ಸೇರಿದಂತೆ ಇತರರು ಹಾಜರಿದ್ದರು.




