Friday, November 20, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಪಾಲಗ್ರಹಾರ ಸೊಸೈಟಿ ಕಾಂಗ್ರೆಸ್ ಬೆಂಬಲಿತರ ಪಾಲು

ನಾಗಮಂಗಲ ತಾಲ್ಲೂಕಿನ ಪಾಲಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಐದು ವರ್ಷ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ 11 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ. ಈ ಮೂಲಕ ಕೃಷಿ ಸಚಿವ ಏನ್ ಚಲುವರಾಯಸ್ವಾಮಿ ಅವರ  ಕೈ ಬಲಪಡಿಸಿದ್ದಾರೆ.

ಇಂದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಉಪ್ಪಾರಹಳ್ಳಿ ಗ್ರಾಮದ ಕೃಷ್ಣೇಗೌಡ ಉರುಫ್ ಕಿಟ್ಟಿ ಮತ್ತು ಉಪಾಧ್ಯಕ್ಷರಾಗಿ ಬ್ಯಾಡರಹಳ್ಳಿ ಗ್ರಾಮದ ಜಯಮ್ಮ ಅವಿರೋಧವಾಗಿ ಆಯ್ಕೆಯಾದರು.

ಇದೇ ಸಂದರ್ಭದಲ್ಲಿ ನೂತನವಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಸದಸ್ಯರಿಗೆ ನಿರ್ದೇಶಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ಅಭಿನಂದಿಸಿದರು.

ನೂತನ ಅಧ್ಯಕ್ಷ ಕೃಷ್ಣೇಗೌಡ ಕಿಟ್ಟಿ ಮಾತನಾಡಿ, ಇಂದು ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಎಲ್ಲಾ ನಿರ್ದೇಶಕರುಗಳಿಗೆ ಧನ್ಯವಾದಗಳನ್ನು ಅರ್ಪಿಸುವೆ, ಪಾಲಅಗ್ರಹಾರ ಸೊಸೈಟಿ ವ್ಯಾಪ್ತಿಗೆ ಬರುವ ಎಲ್ಲಾ ಸದಸ್ಯರು ಮತ್ತು ರೈತರಿಗೆ ಸರ್ಕಾರದಿಂದ ಬರುವಂತಹ ಮೂಲಭೂತ ಸೌಕರ್ಯವನ್ನು ಪಕ್ಷಾತೀತವಾಗಿ ತಲುಪಿಸುವ ಕೆಲಸವನ್ನು ನಮ್ಮ ತಂಡವು ಮಾಡುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಾಗೂ ಸಂಘದ ನೂತನ ನಿರ್ದೇಶಕರಾದ ಎಚ್.ಎನ್ ಗಿರೀಶ್, ಪಿಆರ್.ರಮೇಶ್, ಎನ್ ಮಂಜುನಾಥ್, ಜಯಮ್ಮ, ಪಿ.ಜೆ.ಉಮೇಶ, ಪುಟ್ಟ ಬೋರಯ್ಯ, ಪ್ರೇಮ, ಯಶೋದಮ್ಮ ಮತ್ತು ಸೊಸೈಟಿ ಆಡಳಿತ ಮಂಡಳಿಯ ನೌಕರರು ಮತ್ತು ಕಾರ್ಯದರ್ಶಿ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ