Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಸಹಕಾರ ಕ್ಷೇತ್ರದಲ್ಲೂ ನಿಲ್ಲದ ರಾಜಕೀಯ : 2 ನೇ ಬಾರಿಗೆ ಸೂಸೈಟಿ ಚುನಾವಣೆ ಮುಂದೂಡಿಕೆ

ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಅಕ್ಷರಶಃ ರಾಜಕೀಯವಾಗಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಆ ಮೂಲಕ ‘ಎಲ್ಲರಿಗಾಗಿ ನಾನು ; ನನಗಾಗಿ ಎಲ್ಲರೂ’ ಎಂಬ ಸಹಕಾರ ಮನೋಭಾವ ಈಗ ಸಹಕಾರ ಕ್ಷೇತ್ರದಿಂದ ದೂರಾಗಿ, ರಾಜಕೀಯವೇ ಮುನ್ನೆಲೆಗೆ ಬಂದಿದೆ.

ಅಧ್ಯಕ್ಷ ಸ್ಥಾನದ ಅಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದ ಪ್ರತಿಮಾ ಶಂಕರ್ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಹಳೇ ಬೂದನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ನಡೆಯಬೇಕಾದ ಚುನಾವಣೆ ಮಂಗಳವಾರ 2ನೇ ಬಾರಿ ಚುನಾವಣೆ ಮುಂದೂಡಲಾಗಿದೆ.

ಕಳೆದ ಶುಕ್ರವಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆಯೋಜನೆಯಾಗಿತ್ತು. 10 ಸದಸ್ಯ ಬಲದ ಸಂಘದ ಆಡಳಿತ ಮಂಡಳಿಯಲ್ಲಿ ಇಬ್ಬರು ನಿರ್ದೇಶಕರು ಮಾತ್ರ ಚುನಾವಣಾ ಸಭೆಗೆ ಹಾಜರಾಗಿದ್ದರು. 8 ನಿರ್ದೇಶಕರು ಗೈರಾದ ಹಿನ್ನೆಲೆಯಲ್ಲಿ ಇಂದು ಚುನಾವಣೆ ಮುಂದೂಡಿಕೆಯಾಗಿತ್ತು‌.

ಚುನಾವಣಾಧಿಕಾರಿಯಾದ ಸಹಕಾರ ಅಭಿವೃದ್ಧಿ ಅಧಿಕಾರಿ ರವಿ ಹಾಗೂ ಸಂಘದ ಕಾರ್ಯದರ್ಶಿ ಡಿ.ಸುರೇಶ್ ನೇತೃತ್ವದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 8 ನಿರ್ದೇಶಕರು ಹಾಜರಾದರು. ಆದರೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿ.ಸಿ.ಪ್ರತಿಮಾಶಂಕರ್ ನಾಮಪತ್ರ ಹಿಂಪಡೆದು ಕಣದಿಂದಲೇ ನಿವೃತ್ತಿಯಾಗಿದ್ದು, ಅಚ್ಚರಿಯ ಬೆಳವಣಿಗೆಯಾಗಿತ್ತು. ಬಳಿಕ ಚುನಾವಣಾ ಪ್ರಕ್ರಿಯೆ ಹೊಸದಾಗಿ ಮಾಡುವುದಾಗಿ ಘೋಷಿಸಿ ಚುನಾವಣಾಧಿಕಾರಿ ಸಭೆ ಮುಂದೂಡಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಹೋರಾಟಗಾರ ಸತೀಶ್ ಬೂಸ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಗೆದ್ದು ಬಂದಿರುವ ಸಂಘದ ನಿರ್ದೇಶಕರು ಅಧ್ಯಕ್ಷ ಗಾದಿಗಾಗಿ ಕಿತ್ತಾಟದಲ್ಲಿ ತೊಡಗಿ ಸಂಘದ ಅಭಿವೃದ್ಧಿ ಕುಂಠಿತವಾಗಿದೆ. ಇಂತಹ ನಿರ್ದೇಶಕರನ್ನು ಆಯ್ಕೆ ಮಾಡಿದ ಷೇರುದಾರರಿಗೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ