2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫರೀಕ್ಷೆಯ ಫಲಿತಾಂಶವು ನಾಳೆ (ಮೇ 2) ರಂದು ಮಧ್ಯಾಹ್ನ 11.30ಕ್ಕೆ ಪ್ರಕಟವಾಗಲಿದೆ.
ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ, ಫಲಿತಾಂಶ ಪ್ರಕಟಿಸಲಿದ್ದಾರೆ.
ಫಲಿತಾಂಶವನ್ನು https://karresults .nic.in ಜಾಲತಾಣದಲ್ಲಿ ಮೇ 2 ರ ಮಧ್ಯಾಹ್ನ 12-30 ಗಂಟೆಯ ನಂತರ ವೀಕ್ಷಿಸಬಹುದಾಗಿದೆ. ಕಳೆದ ಮಾ.21ರಿಂದ ಏ. 04 ರವರೆಗೆ ರಾಜ್ಯದಾದ್ಯಂತ ಎಸೆಸ್ಸೆಲ್ಸಿ ಪರೀಕ್ಷೆಗಳು ನಡೆದಿದ್ದವು. ಸುಮಾರು 8.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.




