Sunday, November 22, 2026

ಪ್ರಾಯೋಗಿಕ ಆವೃತ್ತಿ

ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ | ಕಡ್ಡಾಯವಾಗಿ ಮೂಲ ಉಪಜಾತಿ ನಮೂದಿಸಲು ಗುರುಪ್ರಸಾದ್ ಕೆರಗೋಡು ಮನವಿ

ಮೇ 5 ರಿಂದ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಗಳ ಜಾತಿ ಜನಗಣತಿಯ ಸಮೀಕ್ಷೆ ಪ್ರಾರಂಭವಾಗಿದೆ. ಈ ಸಮೀಕ್ಷೆಯು 3 ಹಂತಗಳಲ್ಲಿ ನಡೆಯಲ್ಲಿದ್ದು ಮೊದಲನೆಯದಾಗಿ ಮೇ 5ರಿಂದ 17ವರೆಗೆ ಸಮೀಕ್ಷೆದಾರರಿಂದ ಮನೆ-ಮನೆ ಭೇಟಿ ಸಮೀಕ್ಷೆ ನಡೆಯುತ್ತಿದೆ.

ಎರಡನೆಯದಾಗಿ ಮೇ 19ರಿಂದ 21ರವರೆಗೆ ತಮ್ಮ ತಮ್ಮ ಏರಿಯಾದ ಬೂತ್ ಮಟ್ಟದ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ನಡೆಯುತ್ತದೆ. ಮೂರನೆಯದಾಗಿ ಮೇ 19ರಿಂದ 23ರವರೆಗೆ ತಮ್ಮ ತಮ್ಮ ಮೊಬೈಲ್ ನಿಂದ ಆನ್ ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಂಡು ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾದ ಅವಕಾಶವಿರುತ್ತದೆ. ಹಾಗಾಗಿ ಪರಿಶಿಷ್ಟ ಜಾತಿ [SC] ಪಟ್ಟಿಯಲ್ಲಿರುವ ಹೊಲಯ, ಮಾದಿಗ, ಕೊರಮ, ಕೊರಚ, ಭೋವಿ, ಲಂಬಾಣಿ, ಅರುಂದತಿಯಾರ್….. ಮುಂತಾದ ಪರಿಶಿಷ್ಟ ಜಾತಿ-ಸಮುದಾಯಗಳ ಜನರು ತಮ್ಮ ತಮ್ಮ ಮೂಲ ಉಪಜಾತಿಗಳ ಹೆಸರನ್ನು ಕಡ್ಡಾಯವಾಗಿ ಯಾವುದೇ ಅಳುಕು ಹಿಜರಿಕೆ ಪಡದೆ ಸಮೀಕ್ಷೆದಾರರಿಗೆ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮನವಿ ಮಾಡಿದ್ದಾರೆ.

ಮುಖ್ಯವಾಗಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಜಾತಿ ಸರ್ಟಿಫಿಕೇಟ್ ಪಡೆದಿರುವವರೂ ಕೂಡ ಕಡ್ಡಾಯವಾಗಿ ತಮ್ಮ ತಮ್ಮ ಮೂಲ ಉಪಜಾತಿಗಳ ಹೆಸರನ್ನು ನಮೂದಿಸಲೇಬೇಕು. ಏಕೆಂದರೆ ಪರಿಶಿಷ್ಟ ಜಾತಿಯಲ್ಲಿರುವ ಎಲ್ಲಾ ಉಪಜಾತಿಗಳಿಗೂ ಅವರವರ ಜಾತಿ ಜನಸಂಖ್ಯೆಗನುಗುಣವಾಗಿ ಮೀಸಲಾತಿಯಲ್ಲಿ ಅವರವರ ಪಾಲು ಅವರಿಗೆ ಸಿಗಲೇಬೇಕು. ಹಾಗಾಗಬೇಕಾದರೆ ಈ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಜನರು ಪಾಲ್ಗೊಳ್ಳಲೇಬೇಕು ಎಂದು ಮನವಿ ಮಾಡಿದ್ದಾರೆ.

ಹಾಗಾಗಿ SC ಸಮುದಾಯಗಳ ಕಾಲೇಜು ವಿದ್ಯಾರ್ಥಿಗಳು, ವಿದ್ಯಾವಂತ ಯುವಜನರು, ನೌಕರರು – ನಿವೃತ್ತ ನೌಕರರು ತಮ್ಮ ತಮ್ಮ ಊರು – ಕೇರಿಗಳು, ವಾರ್ಡ ಮತ್ತು ಬ್ಲಾಕ್ ಗಳಲ್ಲಿರುವ ನಿಮ್ಮ ಸ್ನೇಹಿತರಿಗೆ, ಬಂಧು – ಬಳಗ ನೆಂಟರಿಷ್ಟರುಗಳಿಗೆಲ್ಲಾ ಈ ಸಮೀಕ್ಷೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವ ಮೂಲಕ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದು ವಿನಂತಿ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ