Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಸರ್ಕಾರಿ ಕಾನೂನು ಕಾಲೇಜು, ಇಂಜಿನಿಯರಿಂಗ್ ಕಾಲೇಜು ತೆರೆಯಿರಿ : ಸಿಎಂಗೆ ಪ್ರಗತಿಪರ ಸಂಘಟನೆಗಳ ಒತ್ತಾಯ

ಮಂಡ್ಯದ ಸರ್ವತೋಮುಖ ಬೆಳವಣಿಗೆಗೆ ಮಂಡ್ಯದಲ್ಲಿ ಸರ್ಕಾರಿ ಕಾನೂನು ಕಾಲೇಜು ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ತೆರೆಯಲು ಸೂಕ್ತ ಕಾರ್ಯ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಬೇಕೆಂದು ಮಂಡ್ಯ ಜಿಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ಗುರುವಾರ ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಮಂಡ್ಯದಲ್ಲಿ ಅತಿ ಹೆಚ್ಚು ರೈತಾಪಿ ಕುಟುಂಬದ ಮತ್ತು ಕೂಲಿ ಕಾರ್ಮಿಕರ ಹಾಗೂ ಶ್ರಮಿಕ ವರ್ಗದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಕಾನೂನಿನ ಕಾಲೇಜುಗಳು ಮತ್ತು ಐಟಿಐ ನಂತಹ ಪದವಿಗಳನ್ನು ಪಡೆಯಲು ಖಾಸಗಿ ಕಾಲೇಜಿಗೆ ಹೋಗಬೇಕಿದೆ. ಇದರಿಂದ ಬಡವರ ಮಕ್ಕಳಿಗೆ ವಿಪರೀತ ಶುಲ್ಕವನ್ನು ಕಟ್ಟಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಮಹತ್ವವನ್ನು ನೀಡಬೇಕಿದೆ.

ಮಂಡ್ಯ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಘಟಕ ಮುಚ್ಚುವ ಸ್ಥಿತಿಯಲ್ಲಿದೆ. ಗರ್ಭಿಣಿಯರ ಹೆರಿಗೆ ವಾರ್ಡ್ ಮತ್ತು ಬಾಣಂತಿಯರ ವಾರ್ಡ್‌ಗಳ ವ್ಯವಸ್ಥೆ ಹದಗೆಟ್ಟು ನೈರ್ಮಲ್ಯದ ಕೊರತೆ ಕಾಡುತಿದೆ. ಕಡ್ನಿ ಸಮಸ್ಯೆಗೆ ಚಿಕಿತ್ಸೆ ನೀಡಲು ಕೂಡಾ ಸರಿಯಾದ ವ್ಯವಸ್ಥೆ ಇಲ್ಲವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಿಗಬೇಕಾದ ಸೌಲಭ್ಯಗಳ ಕೊರತೆ ಬಹಳ ಹೆಚ್ಚಾಗಿದೆ. ಸಿಬ್ಬಂದಿಗಳ ಕೊರತೆ ಸರಿಯಾದ ಸಮಯಕ್ಕೆ ವ್ಯದ್ಯರು ಸಿಗದಿರುವುದು, ತಳ್ಳುಗಾಡಿಗಳ ಕೊರೆತೆ ಮುಂತಾದವು ಇನ್ನೂ ವ್ಯವಸ್ಥಿತ ವಾಗಬೇಕಿದೆ ಎಂದು ಒತ್ತಾಯಿಸಿದರು.

ಹಕ್ಕೊತ್ತಾಯಗಳೇನು ?

ಮಂಡ್ಯದಲ್ಲಿ ಮುಚ್ಚುವ ಹಂತದಲ್ಲಿ ಇರುವ ಕ್ಯಾನ್ಸರ್ ಆಸ್ಪತ್ರೆಯನ್ನು ಸುಸ್ಸಜಿತ ಗೊಳಿಸಿ, ಜಿಲ್ಲೆಯ ಜನರ ಚಿಕಿತ್ಸೆಗೆ ನೆರವಾಗಬೇಕು.

ಕಿಡ್ನಿ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತ್ಯೇಕ ಘಟಕ ನಿರ್ಮಾಣ ಮಾಡಿ, ಬಡ ಜನರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು.

ಗರ್ಭಿಣಿಯರ ಹೆರಿಗೆ ವಾರ್ಡ್‌ಗಳು ಮತ್ತು ಬಾಣಂತಿಯರ ಆರೈಕೆ ವಾರ್ಡ್‌ಗಳನ್ನು ಮತ್ತಷ್ಟು ಸುಸ್ಸಜಿತಗೊಳಸಬೇಕು. ಸುಚಿತ್ವ ಮತ್ತು ಸೌಲಭ್ಯದೊರೆಯುಂವತಾಗಬೇಕು.

ಸರ್ಕಾರಿ ಆಸ್ಪತ್ರೆ ವಿಚಾರಕ್ಕೆ ಸಂಭಂದಿಸಿದಂತೆ ಮೇಲೆ ತಿಳಿಸಿದ ಎಲ್ಲ ಲೋಪ ದೋಷಗಳ ಬಗ್ಗೆ ಗಮನ ಹರಿಸಿ ಆರೋಗ್ಯ ಸಚಿವರಿಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ಹೊರಡಿಸಬೇಕು.

ಸರ್ವೋಚ್ಚ ನ್ಯಾಯಾಲಯದ ಉದ್ದೇಶಿತ ದಕ್ಷಿಣದ ನ್ಯಾಯ ಪೀಠವನ್ನು ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯದಲ್ಲಿ ಸ್ಥಾಪಿಸಲು ಬಲವಾದ ಹಕ್ಕೊತ್ತಾಯವನ್ನು ಕೇಂದ್ರದ ಮುಂದಿಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವಕೀಲರ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ವಕೀಲ ಬಿ.ಟಿ. ವಿಶ್ವನಾಥ್, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ವಕೀಲರಾದ  ಪಲ್ಲವಿ, ಕಿಶೋರ್, ಸಂತೋಷ್ ಹಾಗೂ ಚೇತನ್ ಆತಗೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ