ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ದೊಡ್ಡರಸಿನಕೆರೆ ಶ್ರೀಸಣ್ಣಕ್ಕಿರಾಯಸ್ವಾಮಿ ದೇವಾಲಯದಲ್ಲಿ 12 ನೇ ವರ್ಷದ ವಾರ್ಷಿಕೋತ್ಸವ, ಕುಂಭಾಭಿಷೇಕ ಜಾತ್ರಾ ಮಹೋತ್ಸವ ಮೇ.12 ರ ಸೋಮವಾರ ವಿಜೃಂಭಣೆಯಿಂದ ಜರುಗಲಿದೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ನಿದರ್ೇಶಕ ಹೊನ್ನೇಗೌಡ ತಿಳಿಸಿದರು.
ಭಾರತೀನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಶ್ರೀಸಣ್ಣಕ್ಕಿರಾಯ ಸ್ವಾಮಿ ಅಭಿವೃದ್ದಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ 12 ನೇ ವರ್ಷದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಶಾಖಾ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥಸ್ವಾಮೀಜಿ, ಹೊಸದುರ್ಗ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಶಾಖಾ ಮಠದ ಈಶ್ವರಾನಂದಪುರಿ ಮಹಾಸ್ವಾಮಿ, ಗುಲ್ಬರ್ಗ ವಿಭಾಗದ ಕಾಗಿನೆಲೆ ಮಹಾಸಂಸ್ಥಾನ ಮಠದ ಸಿದ್ದರಾಮನಂದ ಮಹಾಸ್ವಾಮಿ, ರಾಮೋಹಳ್ಳಿ ಶ್ರೀನಾಗದುರ್ಗದ ಪೀಠ ಮಹಾಸಂಸ್ಥಾನ ಮಠದ ಶ್ರೀಶಕ್ತಿಬಾಲ ಅಮ್ಮ, ಬೆಂಗಳೂರು ರಾಮೋಹಳ್ಳಿ ರಾಮಕೃಷ್ಣ ಯೋಗಾಶ್ರಮದ ಅಧ್ಯಕ್ಷ ಯೋಗೇಶ್ವರನಂದಸ್ವಾಮಿಗಳು ಭಾಗವಹಿಸಲ್ಲಿದ್ದಾರೆ ಎಂದರು.
ದೇವಾಲಯದ ಅಭಿವೃದ್ದಿ ಸೇವಾಸಮಿತಿ ಟ್ರಸ್ಟ್ ಅಧ್ಯಕ್ಷ ಜೈಪ್ರಕಾಶ್ ಗೌಡ ಮಾತನಾಡಿ, ಕಾರ್ಯಕ್ರಮಕ್ಕೂ ಮುನ್ನ ದೇವರಹಳ್ಳಿ ಗ್ರಾಮದ ಪ್ರಮುಖ ರಸ್ತೆಯಿಂದ ಸ್ವಾಮೀಜಿಗಳನ್ನು ಪೂರ್ಣಕುಂಭದೊಂದಿಗೆ ಮೆರವಣಿಗೆ ನಡೆಸಿ ವೇದಿಕೆಗೆ ಕರೆತರಲಾಗುವುದು. ಸೋಮವಾರ ಸಂಜೆ ದೊಡ್ಡರಸಿನಕೆರೆಯಲ್ಲಿ ಕಾಲಭೈರವೇಶ್ವರ ಬಸವಪ್ಪ, ಸಣ್ಣಕ್ಕಿರಾಯಸ್ವಾಮಿ ಬಸವಪ್ಪ, ಏಳೂರಮ್ಮ, ಕಾಳಮ್ಮ, ಸಣ್ಣಕ್ಕಿರಾಯಸ್ವಾಮಿ ದೇವರುಗಳ ಮೆರವಣಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ, ಆನೆಕಲ್ಲು, ಚನ್ನಪಟ್ಟಣ, ಕೊಳ್ಳೆಗಾಲ, ಬೆಂಗಳೂರು, ರಾಮನಗರ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತಾಧಿಗಳು ಆಗಮಿಸಲ್ಲಿದ್ದು 5 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.
ಇದೇ ವೇಳೆ ದೇವಾಲಯದ ಮುಖಂಡರಾದ ದೇವರಹಳ್ಳಿ ಡಿ.ದೊಡ್ಡೇಗೌಡ, ವಕೀಲ ಡಿ.ಎನ್.ನವೀನ್, ದೊಡ್ಡರಸಿನಕೆರೆ ರವಿ ಇದ್ದರು.




