ಡಾ.ಮಂಜುನಾಥ್ ಅದ್ದೆ ಬರೆದಿರುವ ವಿಮೋಚನ ಮಹಿಳಾ ಸಂಘಟನೆ ವತಿಯಿಂದ ಮುದ್ರಿಸಿ ಪ್ರಕಟಿಸಿರುವ ದ್ವೀತಿಯ ಮುದ್ರಣ ‘ಒಡಲ ತುಡಿತಕ್ಕೆ ಕೇಡು’ ಹೆಣ್ಣು ಭ್ರೂಣಹತ್ಯೆ ಒಂದು ಅಧ್ಯಯನ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವು ಬುಧವಾರ ಮಂಡ್ಯನಗರದ ಜೆ.ಎಲ್.ಜವರೇಗೌಡ ಸಭಾಂಗಣ ಜರುಗಿತು.
1979 ರಿಂದಲೂ ಹಣ್ಣಿನ ಬದುಕುವ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ವಿಮೋಚನ ಮಹಿಳಾ ಸಂಘಟನೆಯು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹೆಣ್ಣು – ಗಂಡಿನ ಲಿಂಗಾನುಪಾತದಲ್ಲಿ ಗಣನೀಯವಾಗಿ ಇಳಿಮುಖವಾಗಿ ವ್ಯತ್ಯಾಸ ಇರುವುದನ್ನು ಕುರಿತು ಅಧ್ಯಯನ ಮಾಡುವ ಸಂದರ್ಭದಲ್ಲಿ 2001 ರ ಜನಗಣತಿ ಪ್ರಕಾರ ಮಂಡ್ಯ ಜಿಲ್ಲೆಯು ಮಂಚೂಣಿಯಲ್ಲಿರುವುದನ್ನು ಗಮನಿಸಿ 2003 ರಲ್ಲಿ ಆಂದೋಲನವನ್ನು ಪ್ರಾರಂಭಿಸಿತ್ತು.
ಪುತ್ರವ್ಯಾಮೋಹ
ಮಂಡ್ಯ ಜಿಲ್ಲೆಯಲ್ಲಿ ಪುತ್ರವ್ಯಾಮೋಹ, ವಂಶೋದ್ದಾರಕ ಬೇಕು ಎಂದೂ ಗಂಡು ಮಗುವಿಗಾಗಿ ಹಂಬಲಿಸಿ ,ವರದಕ್ಷಿಣೆ ,ಮದುವೆ ಖರ್ಚಿಗೆ ಹೆದರಿ ಹೆಣ್ಣುಭ್ರೂಣ ಹತ್ಯೆ ಯಲ್ಲಿ ತೊಡಗಿರುವುದು ಕಂಡು ಬಂತು. ನಿರಂತವಾಗಿ 22 ವರ್ಷಗಳಿಂದ ಹೆಣ್ಣುಮಕ್ಕಳು ಹುಟ್ಟುವ ಹಕ್ಕಿಗಾಗಿ ಆಂದೋಲನದ ಮೂಲಕ ಹೆಣ್ಣು ಭ್ರೂಣಹತ್ಯೆ ತಡೆಗಟ್ಟಲು ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಸಮರ್ಪಕವಾಗಿ ಜಾರಿ ಅನುಷ್ಠಾನಗೊಳಿಸಲು ಹತ್ತು ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳು ,ಹೋರಾಟ ,ಅಧ್ಯಯನ , ಚುಟುಕು ಕಾರ್ಯಚರಣೆ ನಡೆಸಿ ಕಾನೂನು ಹೋರಾಟ ನಡೆಸಿಕೊಂಡು ಬರುತ್ತಿರುವುದು ಸರಿಯಷ್ಟೇ
ಹೆಣ್ಣಿನ ಬದುಕುವ ಹಕ್ಕನ್ನು ಭ್ರೂಣ ಹಂತದಲ್ಲೆ ಹೊಸಕಿ ಹಾಕುವ ಸಾಮಾಜಿಕ ಪಿಡುಗಿನ ಬಗ್ಗೆ ವಿಮೋಚನ ಮಹಿಳಾ ಸಂಘಟನೆ ವತಿಯಿಂದ ಮಂಡ್ಯ ತಂಡ ಹಾಗೂ ಡಾ ಮಂಜುನಾಥ್ ಅದ್ದೆ ಲೇಖಕರು ಇವರ ಅಧ್ಯಯನ ನಡೆಸಿ, 2008ರಲ್ಲಿ ಒಡಲ ತುಡಿತಕ್ಕೆ ಕೇಡು ಹೆಣ್ಣು ಭ್ರೂಣಹತ್ಯೆ ಒಂದು ಅಧ್ಯಯನ ಪುಸ್ತಕ ವನ್ನು ವಿಮೋಚನ ಮಹಿಳಾ ಸಂಘಟನೆ ಮೂಲಕ ಮುದ್ರಿಸಿ ಪ್ರಕಟಿಸಲಾಗಿತ್ತು.
ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ನಿರಂತವಾಗಿ ನಡೆಯುತ್ತಿರುವ ಹೆಣ್ಣು ಭ್ರೂಣಹತ್ಯೆ ಗಳಿಗೆ ಸಂಬಂಧಪಟ್ಟಂತೆ ಆಗುತ್ತಿರುವ ಹೊಸ ಹೊಸ ಬೆಳವಣಿಗೆ ಅಂಕಿ ಅಂಗಳಗಳನ್ನೂ ಹಾಗೂ ಹೊಸ ಮಜಲುಗಳನ್ನು ಅಧ್ಯಯನ ಮಾಡಿ ಅವುಗಳೆಲ್ಲವನ್ನೂ ಕ್ರೂಢೀಕರಿಸಿ ಕಾರ್ಗಲ್ ಭೋಗರಾಜ್ ಮಂಡ್ಯ ವಿಮೋಚನ ಮಹಿಳಾ ಸಂಘಟನೆ ಜನಾರ್ಧನ ಹೂತಗೆರೆ, ಇಂಪನ ಇವರ ಮೇಲ್ವಿಚಾರಣೆಯಲ್ಲಿ ‘ಒಡಲ ತುಡಿತಕ್ಕೆ ಕೇಡು’ ಹೆಣ್ಣುಭ್ರೂಣ ಹತ್ಯೆ ಒಂದು ಅಧ್ಯಯನ ದ್ವಿತೀಯ ಮುದ್ರಣವನ್ನು ವಿಮೋಚನ ಮಹಿಳಾ ಸಂಘಟನೆ ಮೂಲಕ ಮುದ್ರಿಸಿ ಪ್ರಕಟಿಸಲಾಗುತ್ತಿದೆ.
ಒಡಲ ತುಡಿತಕ್ಕೆ ಕೇಡು ಕೃತಿಗೆ 2008 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಒಡಲ ತುಡಿತಕ್ಕೆ ಕೇಡು ಕೃತಿಯಲ್ಲಿನ ಹೆಣ್ಣುಭ್ರೂಣ ಹತ್ಯೆ ಕುರಿತ ಸಂಶೋಧನಾ ಲೇಖನವು ದ್ವಿತೀಯ ಪಿಯುಸಿ ಸಮಾಜಶಾಸ್ತ್ರ ಪಠ್ಯ ಪುಸ್ತಕದಲ್ಲಿ ಆಳವಡಿಸಲಾಗಿದೆ.
ಕಾರ್ಯಕ್ರಮ ದ ಉದ್ಘಾಟನೆಯನ್ನು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ನೆರವೇರಿಸಿದರು. ರೈತ ಹೋರಾಟಗಾರರಾದ ಸುಂದರ ಜಯರಾಂ ಪುಸ್ತಕ ಬಿಡುಗಡೆ ಮಾಡಿದರು. ಪುಸ್ತಕ ಕುರಿತು ಪ್ರಾಧ್ಯಾಪಕರಾದ ಹೇಮಲತಾ ತಿಳಿಸಿಕೊಟ್ಟರು. ಡಿಹೆಚ್ಓ ಡಾ.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ವಿಮೋಚನಾ ಕಾರ್ಯದರ್ಶಿ ಸೆಲಿನ ಸುಗುಣ, Fwo. DIMC ಅಧ್ಯಕ್ಷ ಬೆಟ್ಟಸ್ವಾಮಿ, MOB ನಿರ್ದೇಶಕ ಅಸುಂತ , ಸಿಐಟಿಯ ಪ್ರಧಾನ ಕಾರ್ಯದರ್ಶಿ ಕುಮಾರಿ, ಜನಾರ್ಧನ್ ವಿಮೋಚನಾ, ಇಂಪನ ವಿಮೋಚನಾ, ಮಂಜುಳಾ ಆಲದಹಳ್ಳಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




