ಇತ್ತೀಚಿನ ವರ್ಷಗಳಲ್ಲಿ ಪೋಷಕರು ಹಾಗೂ ಶಾಲಾ ಶಿಕ್ಷಕರು ಫಲಿತಾಂಶಕ್ಕಾಗಿ ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕಿತ್ತಿರುವುದು ಮಕ್ಕಳ ಬೌದ್ಧಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಅದಕ್ಕಾಗಿ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಬೇಸಿಗೆ ಶಿಬಿರ ಸಹಕಾರಿಯಾಗಲಿದೆ ಎಂದು ಅರುವಿ ಟ್ರಸ್ಟಿನ ಹಾಗೂ ವೀನಸ್ ಅಕಾಡೆಮಿಯ ಸಂಸ್ಥಾಪಕ ಅರುಣ ಈಶ್ವರ್ ತಿಳಿಸಿದರು.
ಅರುವಿ ಟ್ರಸ್ಟಿನ ವೀನಸ್ ಅಕಾಡೆಮಿಯು 4 ರಿಂದ 14 ವರ್ಷದ ಮಕ್ಕಳಿಗೆ ಬೆಳಿಗ್ಗೆ 9.30 ರಿಂದ ಸಂಜೆ 4 30ರ ವರೆಗೆ 50 ದಿನಗಳ ಕಾಲ ಆಯೋಜಿಸಿದ್ದ ವೀನಸ್ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಂತರಾಷ್ಟ್ರೀಯ ನೃತ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ನಾವು ನಮ್ಮ ಮಕ್ಕಳ ಪಾಲನೆ ಪೋಷಣೆ ಮಾಡಲು ತುಂಬಾ ಕಷ್ಟಪಡುತ್ತಿದ್ದೇವೆ, ಮನೆ ಕೆಲಸ ಕಛೇರಿ ಕೆಲಸದ ಜೊತೆಗೆ ಮಕ್ಕಳ ನೋಡಿಕೊಳ್ಳಲು ಅದರಲ್ಲೂ ಬೇಸಿಗೆ ರಜೆ ಬಂತೆಂದರೆ ಅದು ಪೋಷಕರಿಗೆ ದೊಡ್ಡ ಸವಾಲೇ ಸರಿ, ಇಂತಹ ಪೋಷಕರಿಗೆ ಸ್ವಲ್ಪಮಟ್ಟಿಗೆ ಅನುಕೂಲವಾಗಲೆಂದು ನಮ್ಮ ವೀನಸ್ ಅಕಾಡೆಮಿಯೂ ಕಳೆದ ಎಂಟು ವರ್ಷಗಳಿಂದ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬರುತ್ತಿದ್ದೇವೆ ಎಂದು ತಿಳಿಸಿದರು,
ವಿಶೇಷವಾಗಿ ನಮ್ಮ ಶಿಬಿರದಲ್ಲಿ ಮುಖ್ಯ ಚಟುವಟಿಕೆಗಳಾಗಿ ಚೆಸ್ ವೇದ ಗಣಿತ, ಸ್ಪೋಕನ್ ಇಂಗ್ಲೀಷ್, ಹ್ಯಾಂಡ್ ರೈಟಿಂಗ್ ಕ್ರಾಫ್ಟ್ ಮತ್ತು ಕ್ಲೇ ಆರ್ಟ್, ಹಾಡುಗಾರಿಕೆ ಮತ್ತು ಚಿತ್ರಕಲೆ , ಕ್ವಿಜ್ ಮತ್ತು ಮನರಂಜನೆ ಆಟಗಳು , ಆರೋಗ್ಯ ತಪಾಸಣೆ, ಪವಾಡ ರಹಸ್ಯ ಬಯಲು ಕಾರ್ಯಕ್ರಮ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪ್ರಾತ್ಯಕ್ಷಿಕೆ, ಧ್ಯಾನ, ಕರಾಟೆ, ಪ್ಯಾಷನ್ ಶೋ, ಜಾಗೃತಿ ನಾಟಕದ ಜೊತೆಗೆ ಒಂದು ದಿನದ ಪ್ರವಾಸವನ್ನು ಹಮ್ಮಿಕೊಂಡು ಮಕ್ಕಳು ಮೊಬೈಲ್ ಮತ್ತು ಟಿವಿ ನೋಡುವ ಚಟಗಳಿಂದ ಮುಕ್ತಗೊಳಿಸುವ ಕೆಲಸ ಬೇಸಿಗೆ ಶಿಬಿರದಿಂದ ಆಗುತ್ತಿದೆ ಎಂಬುದನ್ನು ನಾವು ಮರೆಯಬಾರದು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಸತತವಾಗಿ ಮೂರು ವರ್ಷಗಳಿಂದ ನಿರಂತರವಾಗಿ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಕಳುಹಿಸುತ್ತಿದ್ದ ಪೋಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು, ಬೇಸಿಗೆ ಶಿಬಿರದಿಂದ ಮಕ್ಕಳಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆಗಳು ಆಗಿವೆ ಇದರಿಂದ ನಮಗೂ ತುಂಬಾ ಸಂತೋಷವಾಗಿದೆ ಎಂದು ಕೆಲವು ಪೋಷಕರು ಅಬಿಪ್ರಾಯ ಹಂಚಿಕೊಂಡರು, ಶಿಬಿರದಲ್ಲಿ ಭಾಗವಹಿಸಿದ 120 ಮಕ್ಕಳಿಗೂ ಪ್ರಮಾಣ ಪತ್ರ ಹಾಗೂ ಪದಕಗಳನ್ನು ವಿತರಿಸಲಾಯಿತು.
ಶಿಬಿರದಲ್ಲಿ ತರಬೇತಿ ನೀಡಲಾದ ಪ್ಯಾಷನ್ ಶೋ, ನೃತ್ಯಗಳು, ಹಾಡುಗಳು, ಕರಾಟೆ ಮತ್ತು ಯೋಗ ಪ್ರದರ್ಶನ, ಹೆಣ್ಣು ಬ್ರೂಣ ಹತ್ಯೆ ಕುರಿತಾದ ಜಾಗೃತಿ ನಾಟಕವನ್ನು ಮಕ್ಕಳು ಸೊಗಸಾಗಿ ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾದ ಯಶೋಧ, ದೀಪಶ್ರೀ, ಕುಬ್ರಾ, ಮಂಜು ಮಾಸ್ಟರ್ , ಚಂದನ್ ಭಾಗವಹಿಸಿದ್ದರು, ಅಂದಾನಿಯವರು ನಿರೂಪಿಸಿ ಸ್ವಾಗತಿಸಿದರು, ವಿಶ್ವಾಸ್ ಪ್ರಾರ್ಥಿಸಿ ಶಿಬಿರ ವರದಿ ನೀಡಿದರು.




