ನಾಯಿ ಕಡಿತದ ಚಿಕಿತ್ಸೆಗೆ ಅಸ್ಪತ್ರೆಗೆ ಬಂದ ಹೃತಿಕಾಗೆ ಜಿಲ್ಲಾಸ್ಪತ್ರೆಗೆ ಶಿಪಾರಸ್ಸು ಮಾಡಿದ ವೈದ್ಯರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡದೇ ನಿರ್ಲಕ್ಷ್ಯ ತೋರಿದ್ದು ವಿಷಾದನೀಯ ಎಂದು ತಹಸೀಲ್ದಾರ್ ಡಾ.ಸ್ಮಿತಾ ತಿಳಿಸಿದರು.
ಮದ್ದೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮದ್ದೂರು ಸರ್ಕಾರಿ ಆಸ್ಪತ್ರೆ ಎದುರು ಏರ್ಪಡಿಸಿದ್ದ ಪ್ರತಿಭಟನೆ ವೇಳೆ ಅವರು ಮಾತನಾಡಿದರು.
ಇಂತಹ ಘಟನೆ ಸಂಭವಿಸಬಾರದಿತ್ತು, ಇದಕ್ಕೆ ಸಂಬಂಧಿಸಿದ ಅದಿಕಾರಿಗಳಿಗೆಲ್ಲ ಮುಜುಗರ ತರಲಿದೆ. ಪ್ರತಿಭಟನೆ ಮೂಲಕ ವೈದ್ಯರ ನಿರ್ಲಕ್ಷ್ಯ ನನ್ನ ಗಮನಕ್ಕೆ ಬಂದಿರುವುದರಿಂದ ಅವರ ನಿರ್ಲಕ್ಷ್ಯ ಕುರಿತು ತನಿಖೆ ಕೈ ಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.
ನಾಯಿಗಳ ಸಂತಾನ ಹರಣ ಚಿಕಿತ್ಸೆ
ತಾ.ಪಂ.ಇ ಓ ರಾಮಲಿಂಗಯ್ಯ ಮಾತನಾಡಿ, ಮದ್ದೂರು ತಾಲ್ಲೂಕಿನ ನಲವತ್ತೆರಡು ಗ್ರಾ ಪಂ ಗಳ ಬಜೆಟ್ ಪರಿಷ್ಕರಿಸಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ ಕ್ರಮವಹಿಸುವುದಾಗಿ ತಿಳಿಸಿದರು. ತುರ್ತಾಗಿ ಪಿ ಡಿ ಓ ಗಳ ಗಮನ ಸೆಳೆಯುವುದಾಗಿ ತಿಳಿಸಿದರು.
ತಾಲ್ಲೂಕು ಆರೊಗ್ಯ ವೈಧ್ಯಾಧಿಕಾರಿ ರವೀಂದ್ರ ಬಿ.ಗೌಡ ಮಾತನಾಡಿ, ಎಲ್ಲಾ ಆಸ್ಪತ್ರೆ ಗಳಲ್ಲಿ ನಾಯಿ ಕಡಿತದ ಚುಚ್ಚುಮದ್ದು ಲಭ್ಯವಿದ್ದು, ಬಿ ಪಿ ಎಲ್, ಎ ಪಿ ಎಲ್ ತಾರತಮ್ಯ ಇಲ್ಲದೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಮದ್ದೂರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಅವರು ನಾಯಿ ಕಡಿತದ ಚುಚ್ಚುಮದ್ದು ಸಾಕಷ್ಠು ಪ್ರಮಾಣದ ದಾಸ್ತಾನು ಇದ್ದು, ಹೃತಿಕಾಳಿಗೂ ಕೂಡ ಪ್ರಥಮ ಚಿಕಿತ್ಸೆ ಜೊತೆಗೆ ನಾಯಿಕಡಿತಕ್ಕೆ ಕೂಡ ಚುಚ್ಚುಮದ್ದು ನೀಡಿದ್ದು, ತಲೆಗೆ ನಾಯಿ ಕಚ್ಚಿದ್ದರಿಂದ ಸೊಂಕು ಮೆದುಳಿಗೆ ತಲುಪದಿರಲೆಂದು ಹೆಚ್ಚುವರಿ ಚಿಕಿತ್ಸೆಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ಶಿಪಾರಸ್ಸು ಮಾಡಿದ್ದರು. ಆ ಸಮಯದಲ್ಲಿ ಆಂಬುಲೆನ್ಸ್ ಸೌಲಭ್ಯ ಪಡೆಯಿರಿ ಎಂದು ಹೇಳಿ ಆರ್ಥೈಸುವಲ್ಲಿ ನಮ್ಮ ವೈದ್ಯರು ವಿಫಲರಾಗಿದ್ದಾರೆ, ಆದರ ಹೊರತು ಉಳಿದಂತೆ ಯಾವುದೇ ಲೋಪವಾಗಿಲ್ಲ ಎಂದು ಸಮರ್ಥಿಸಿಕ್ಕೊಂಡರು
ಆಸ್ಪತ್ರೆಯ ವ್ಯವಸ್ಥೆ ಸುಧಾರಿಸುವ ಬಗ್ಗೆ ತುರ್ತಾಗಿ ಆಸ್ಪತ್ರೆಯಲ್ಲಿ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆಯುದಾಗಿ ಭರವಸೆ ನೀಡಿದರು
ತಾ ಪಂ ಇ ಓ ಅವರು ಬೀದಿ ನಾಯಿಗಳ ನಿಯಂತ್ರಣಕ್ಕೆ ಬಜೆಟ್ ಪರಿಷ್ಕರಿಸಿ ಹಣ ಮೀಸಲಿಡುವ ಬಗ್ಗೆ ಮತ್ತು ಸಂತಾನಹರಣ ಚಿಕಿತ್ಸೆಯ ಸಿದ್ದತೆ ಕುರಿತು ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳ ಸಭೆ ಕರೆಯುವ ಬಗ್ಗೆ ಭರವಸೆ ನೀಡಿದರು.
ನಾಯಿ ಕಚ್ಚಿದ ಚಿಕಿತ್ಸೆಗೆ ಬಂದಿದ್ದ ಹೃತಿಕಾಳ ಸಾವಿಗೆ ಮಂಡ್ಯದ ಸಂಚಾರಿ ಪೊಲೀಸರಷ್ಠೆ ಮದ್ದೂರಿನ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವು ಕಾರಣ ಎಂದು ಆರೊಪಿಸಿ ವೈದ್ಯರ ಮೇಲೆ ಶಿಸ್ತುಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ನಡೆಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ, ಪಶುಪಾಲನೆ ಇಲಾಖೆ ವೈದ್ಯಾಧಿಕಾರಿ ಡಾ.ಗೊವಿಂದ,ಗೊರವನಹಳ್ಳಿ ಪಿ ಡಿ ಓ ಪೂರ್ಣಿಮಾ, ತಾ ಪಂ ಎ ಡಿ ಮಂಜುನಾಥ್, ಪ್ರಗತಿಪರ ಸಂಘಟನೆಯ ನ .ಲಿ.ಕೃಷ್ಣ, ಉಮಾಶಂಕರ್ ಚನ್ನಸಂದ್ರ ಲಕ್ಷ್ಮಣ್, ಅವಿನಾಶ್, ಗೋಪಾಲ್, ಚನ್ನಪ್ಪ, ರಾಜೇಶ್, ರೈತ ಸಂಘಟನೆಯ ಶಂಕರೇಗೌಡ, ನಾಗರಾಜು, ವಿನೋದ್ ಬಾಬು, ಉಮೇಶ್, ಸಾಹಿತ್ಯ ಪರಿಷತ್ ಅಧ್ಯಕ್ಷ ಸುನೀಲ್, ದಲಿತ ಮುಖಂಡ ಆತಗೂರು ನಿಂಗಪ್ಪ, ಮರಳಿಗ ಶಿವರಾಜ್, ಹಾಗಲಹಳ್ಳಿ ಬಸವರಾಜ್, ಅಜ್ಜಹಳ್ಳಿ ಬಸವರಾಜ್, ಮಲವರಾಜ್, ಸುಮಾರ್ಗ ಪುಟ್ಟಲಿಂಗಯ್ಯ, ಹೊನ್ನಲಗೆರೆ ಅಪ್ಪಾಜಿ, ಬ್ಯಾಡರಹಳ್ಳಿ ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




