ಸುವರ್ಣ ಕರ್ನಾಟಕ ಕೇರಳ ಸಮಾಜಂ ಮಂಡ್ಯ ವಲಯದ ವತಿಯಿಂದ1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿ ಹಾಗೂ ಸಮವಸ್ತ್ರಗಳ ವಿತರಣಾ ಕಾರ್ಯಕ್ರಮ , ಮಂಡ್ಯ ನಗರದ ಸ್ವರ್ಣಸಂದ್ರದಲ್ಲಿರುವ ಸೆಂಟ್ ಮೇರಿಸ್ ಇ ಎಂ ಶಾಲಾ ಆವರಣದಲ್ಲಿ ಜರುಗಿತು.
ನೆರೆದಿದ್ದ ಗಣ್ಯರು ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್, ಸಮವಸ್ತ್ರ ,ಶೂ ,ಬ್ಯಾಗ್ ಹಾಗೂ ಇನ್ನಿತರ ಕಲಿಕಾ ಸಾಮಗ್ರಿಗಳನ್ನೂ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುವರ್ಣ ಕರ್ನಾಟಕ ಕೇರಳ ಸಮಾಜಂ ಮಂಡ್ಯ ವಲಯದ ಕಾರ್ಯದರ್ಶಿ ಮೇರಿ ಜೆನೆಟ್, ಪ್ರತಿ ವರ್ಷವೂ ನಮ್ಮ ಸುವರ್ಣ ಕರ್ನಾಟಕ ಕೇರಳ ಸಮಾಜಂ ವತಿಯಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಸಮವಸ್ತ್ರಗಳನ್ನೂ ನೀಡುತ್ತಾ ಬಂದಿದ್ದೇವೆ. ಈ ಬಾರಿ 31 ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ನೀಡಿದ್ದೇವೆ. ನಮ್ಮ ಸಮಾಜವು ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತ ಬಂದಿದ್ದು ಮುಂದಿನ ದಿನಗಳನ್ನು ಇನ್ನು ಹೆಚ್ಚು ಸೇವೆ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ಕೇರಳ ಸಮಾಜಂ ಮಂಡ್ಯ ವಲಯದ ಉಪಾಧ್ಯಕ್ಷ ಟಿ ಜೆ ಆಂಟೋನಿ , ಖಜಾಂಜಿ ಐ ಪಿ ರಾಮದಾಸ್, ಬೋರ್ಡ್ ಮೆಂಬರ್ ಎ ವಿಲಿಯಂ , ಸಂಚಾಲಕಿ ಪುಷ್ಪಜ, ಸದಸ್ಯರಾದ ಟಿ ಎಂ ಸಿಬಿಚ್ಚನ್, ವಿ ಕೆ ಮನಿಕಂದನ್ ಹಾಗೂ ಶಿವು ಹಾಜರಿದ್ದರು.




