Saturday, November 21, 2026

ಪ್ರಾಯೋಗಿಕ ಆವೃತ್ತಿ

ಕೊರೋನಾ ಸಂದರ್ಭದಲ್ಲಿ ವೈದ್ಯರ ಸೇವೆ ಶ್ಲಾಘನೀಯ – ಡಾ.ನರಸಿಂಹಸ್ವಾಮಿ

ವರದಿ: ಪ್ರಭ ವಿ ಎಸ್

ಕೊರೋನಾ ಸಂದರ್ಭದಲ್ಲಿ ವೈದ್ಯರು ತಮ್ಮ ಪ್ರಾಣದ ಹಂಗು ತೊರೆದು ರೋಗಿಗಳಿಗೆ ಸಕಾಲದಲ್ಲಿ ಸಮರ್ಪಕ ಚಿಕಿತ್ಸೆ ನೀಡುವ ಮೂಲಕ ಅಪಾರ ಸಂಖ್ಯೆಯ ವ್ಯಕ್ತಿಗಳ ಜೀವ ಉಳಿಸಿದ್ದಾರೆಂದು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ನರಸಿಂಹಸ್ವಾಮಿ ತಿಳಿಸಿದರು.

ಮದ್ದೂರು ಪಟ್ಟಣದ ಶಂಕರ್ ಪಾರ್ಟಿ ಹಾಲ್‌ನಲ್ಲಿ ಸಂಗಾತಿ ಸಂಸ್ಮರಣೆ-4 ಬಿ.ಆರ್.ಗುಣಶ್ರೀರವರ ಸಂಸ್ಮರಣೆ ಹಾಗೂ ವೈದ್ಯರಿಗೆ ತವರಿನ ಸನ್ಮಾನ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮದ ವೇಳೆ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿರು.

ಕೋವಿಡ್‌ನಂತಹ ಸಂದರ್ಭದಲ್ಲೂ ವೈದ್ಯರು ತಮ್ಮ ಕುಟುಂಬ ಹಾಗೂ ಆರೋಗ್ಯವನ್ನು ಲೆಕ್ಕಿಸದೆ ಲಕ್ಷಾಂತರ ಕೋವಿಡ್ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡುವ ಮೂಲಕ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿರುವ ಮತ್ತು ಹಲವು ವ್ಯಕ್ತಿಗಳ ಜೀವ ಉಳಿಸಿರುವುದನ್ನು ಯರೊಬ್ಬರೂ ಮರೆಯುವಂತಿಲ್ಲವೆಂದರು.

ಇತ್ತೀಚಿನ ದಿನಗಳ ಜಂಜಾಟದ ಬದುಕಿನಲ್ಲೂ ಹಾಗೂ ಬದಲಾದ ಜೀವನ ಶೈಲಿಯಿಂದ ಅತಿ ಚಿಕ್ಕ ವಯಸ್ಸಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವಾರು ರೋಗಗಳು ಕಂಡು ಬರುತ್ತಿದ್ದು, ಈ ಸಂಬಂಧ ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸುವ ಜತೆಗೆ ಒತ್ತಡದ ಬದುಕಿನಿಂದ ಹೊರಬಂದು ತಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡಾಗ ರೋಗ ರುಜಿನಗಳಿಂದ ದೂರವಿರಬಹುದೆಂದರು.

ಪ್ರತಿಯೊಬ್ಬರೂ ಪ್ರತಿನಿತ್ಯ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಜತೆಗೆ ಯೋಗ, ಧ್ಯಾನದ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಾಗ ಉತ್ತಮ ಬದುಕನ್ನು ರೂಪಿಸಿಕೊಂಡು ಸನ್ಮಾರ್ಗದತ್ತ ಹೆಜ್ಜೆಯಿಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.

ಸಮಾಜ ಸೇವಕ ಟಿ.ಪಿ. ತಿಪ್ಪೂರು ಮನು ಮಾತನಾಡಿ ತಮ್ಮ ಸಂಗಾತಿ ಬಿ.ಆರ್.ಗುಣಶ್ರೀ ಅವರ ಹೆಸರಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ತಮಗೆ ಸಂತಸವನ್ನುಂಟು ಮಾಡಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ನನ್ನ ಬಾಳ ಸಂಗಾತಿ ಬಿ.ಆರ್.ಗುಣಶ್ರೀ ಗಭೀಣಿಯಾಗಿದ್ದು ಸೋಂಕಿಗೆ ಒಳಗಾಗಿ ಆ ಸಂದರ್ಭದಲ್ಲಿ ವೈದ್ಯರು ದೇವರ ರೂಪದಲ್ಲಿ ಬಂದು ಸೂಕ್ತ ಚಿಕಿತ್ಸೆ ನೀಡಿದ್ದರೂ ಕೂಡ ಅವರು ಬದುಕಿ ಉಳಿಯಲಿಲ್ಲ, ಅದರೆ ನನ್ನ ಕರುಳ ಬಳ್ಳಿಯನ್ನು ನನ್ನ ಮಗಳನ್ನು ಸಾಕಷ್ಟು ಕಷ್ಟಪಟ್ಟು ಉಳಿಸಿಕೊಟ್ಟಿರುವ ವೈದ್ಯರ ಸೇವೆಯನ್ನು ಸ್ಮರಿಸಿದರು.

ಪ್ರತಿವರ್ಷ ನನ್ನ ಬಾಳ ಸಂಗಾತಿ ಹೆಸರಿನಲ್ಲಿ ವೈದ್ಯರಿಗೆ ಸನ್ಮಾನ ಜತೆಗೆ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದಾಗಿ ಹೇಳಿದರು.

ಅಭಿನಂದನೆ

ಡಾ.ಮನೋಹರ (ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ), ಡಾ.ಜಿ.ಎಂ.ಮಂಜುನಾಥ್(ಮಕ್ಕಳ ತಜ್ಞ), ಡಾ. ಜಿ.ವಿ.ಅನಿಕೇತನ (ಜನರಲ್ ಮೆಡಿಸನ್), ಡಾ.ನರಸಿಂಹಸ್ವಾಮಿ(ಜನರಲ್ ಸರ್ಜರಿ, ಯೂರಾಲಜಿ), ಡಾ| ಶಿವಕುಮಾರ್ (ಮೂತ್ರ ಕೋಶ ತಜ್ಞ, ಅರವಳಿಕೆ ತಜ್ಞ), ಡಾ.ದೇವಿಕಾ (ರೇಡಿಯೋಲಾಜಿಸ್ಟ್), ಡಾ| ಶಿವಪ್ರಸಾದ್ (ಕೀಲು ಮತ್ತು ಮೂಳೆ ತಜ್ಞ), ಡಾ| ಸುನಿಲ್‌ಕುಮಾರ್(ವೈದ್ಯಾಧಿಕಾರಿ) ರವರನ್ನು ಅಭಿನಂದಿಸಿ ಗೌರವಿಸಲಾಯಿತು.

ಪ್ರಗತಿಪರ ಚಿಂತಕ ನ.ಲಿ.ಕೃಷ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾರ್ಯಕ್ರಮದ ವೇಳೆ ಮನ್ ಮುಲ್ ನಿರ್ದೇಶಕ ಹರೀಶ್‌ಬಾಬು, ರಾಣಿ ಐಶ್ವರ್ಯ ಬಿಲ್ಡರ್ಸ್ ವ್ಯವಸ್ಥಾಪಕ ಎಚ್.ಎಲ್.ಸತೀಶ್, ನಿವೃತ್ತ ಕಾರ್ಯಪಾಲಕ ಅಭಿಯಂತರ ಜಿ.ವಿ.ಶಂಕರೆಗೌಡ, ವಿಮೋಚನಾ ಸಂಸ್ಥೆ ಹೂತಗೆರೆ ಜನಾರ್ಧನ್, ಕು.ಪುನರ್ವಿಕ.ಎಂ.ಗೌಡ ಹಾಗೂ ಇತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ