Friday, November 20, 2026

ಪ್ರಾಯೋಗಿಕ ಆವೃತ್ತಿ

ಶಾಲಾ, ಕಾಲೇಜುಗಳು ಈಡಿಸ್ ಸೊಳ್ಳೆ ಲಾರ್ವಾ ಉತ್ಪತ್ತಿ ರಹಿತ ಆವರಣವಾಗಲಿ : ಡಾ.ಮಾರುತಿ 

ಶ್ರೀರಂಗಪಟ್ಟಣ ತಾಲೂಕಿನ ಪ್ರತಿಯೊಂದು ಶಾಲಾ,ಕಾಲೇಜುಗಳು ಈಡಿಸ್ ಸೊಳ್ಳೆ ಲಾರ್ವಾ ಉತ್ಪತ್ತಿ ರಹಿತ ಆವರಣ ಆಗಬೇಕೆಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ ಮಾರುತಿ ಕರೆ ನೀಡಿದರು.

ಶ್ರೀರಂಗಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ “ಡೆಂಗಿ ಜ್ವರ ನಿಯಂತ್ರಣ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಶಾಲಾ ಆವರಣವನ್ನು ಈಡಿಸ್ ಸೊಳ್ಳೆ ಲಾರ್ವಾ ಉತ್ಪತ್ತಿ ರಹಿತ ಆವರಣ” ಮಾಡುವ ಕುರಿತು ಏರ್ಪಡಿಸಿದ ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಳೆದ ವರ್ಷ ಒಟ್ಟಾರೆ ಡೆಂಗಿ ಪ್ರಕರಣಗಳಲ್ಲಿ ಶೇ 30 ರಿಂದ 40 ರಷ್ಟು 18 ವರ್ಷದ ಒಳಗಿನ ಮಕ್ಕಳಲ್ಲಿ ಜ್ವರ ಪ್ರಕರಣಗಳು ಕಂಡು ಬಂದಿದ್ದು ಹಾಗಾಗಿ ಈಡಿಸ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಶಾಲಾ ಮಕ್ಕಳು ವಾರದಲ್ಲಿ ಆರು ದಿನ ಶಾಲೆಯಲ್ಲಿ ಇರುವ ಕಾರಣ ಶಾಲಾ ಆವರಣದಲ್ಲಿ ಅಥವಾ ಕೋಣೆಯಲ್ಲಿ ಸೊಳ್ಳೆ ಕಚ್ಚುವುದರಿಂದ ಜ್ವರ ಪ್ರಕರಣಗಳು ಕಂಡು ಬರಬಹುದಾಗಿದ್ದು ಕಾರಣ ಶಾಲಾ,ಕಾಲೇಜು ಆವರಣದಲ್ಲಿ, ಮೇಲ್ಚಾವಣಿಯಲ್ಲಿ ಮಳೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ ಶೌಚಗ್ರಹದ ನೀರಿನ ತೊಟ್ಟಿ,ಬಿಸಿ ಊಟ ಕೋಣೆಯಲ್ಲಿಯ ನೀರಿನ ತೊಟ್ಟಿಯನ್ನು ಗಮನಿಸಿ ವಾರಕ್ಕೊಮ್ಮೆ ಸ್ವಚ್ಛಗೊಳಿಸಲು ಶಿಕ್ಷಕರು ಕ್ರಮ ಕೈಗೊಳ್ಳಬೇಕೆಂದರು.

ಒಟ್ಟಾರೆ ಶಾಲಾ ಸುತ್ತ ಮುತ್ತ ಈಡಿಸ ಸೊಳ್ಳೆ ಲಾರ್ವಾ ಉತ್ಪತ್ತಿ ಆಗದಂತೆ ಎಚ್ಚರಿಕೆ ವಹಿಸಬೇಕು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಮಕ್ಕಳನ್ನು ಡೆಂಗಿ ಜ್ವರ ಪ್ರಕರಣಗಳಿಂದ ರಕ್ಷಿಸಬಹುದಾಗಿದೆ ಹಾಗಾಗಿ ಇಲಾಖೆಯಿಂದ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ ಮಕ್ಕಳಿಗೆ ಸೊಳ್ಳೆ ಬೆಳವಣಿಗೆಯ ಹಂತಗಳ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಅರಿವು ಮೂಡಿಸಿದರು.

ಈ ವೇಳೆ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ ಜೆ ಶ್ರೀನಿವಾಸ್, ಶಿಕ್ಷಕ ಮನೋಹರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ, ಜಿಲ್ಲಾ ಮಲೇರಿಯಾ ಕಚೇರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ್,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಬಿ ಹೇಮಣ್ಣ, ಆರೋಗ್ಯ ನಿರೀಕ್ಷಣಾಧಿಕಾರಿ ಕೃಷ್ಣೇಗೌಡ,ಪಣಿಂದ್ರ,ಮೇಘನಾ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸ್ಮಿತಾ,ಪದ್ಮ ಇತರರು ಹಾಜರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ