Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕಾವೇರಿ ಆರತಿ | ಶಾಸಕ ರವಿಕುಮಾರ್ ಹೇಳಿಕೆಗೆ ಖಂಡನೆ ; ಪ್ರತಿಭಟನೆ

ಕಾವೇರಿ ಆರತಿ, ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಗಳ ಬಗ್ಗೆ ಶಾಸಕ ರವಿಕುಮಾರ್ ಗಣಿಗ ಹೇಳಿಕೆ ಖಂಡನೀಯ ಎಂದು ಪ್ರಗತಿಪರ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯನಗರದಲ್ಲಿ ಇಂದು ಪ್ರತಿಭಟನೆ ನಡೆಸಿದ ಅವರು, ಶಾಸಕರು ಒತ್ತಡಗಳಿಂದ ವಿವೇಕವಿಲ್ಲದೆ, ಆಲೋಚನೆ ಇಲ್ಲದೆ ಮಾತನಾಡಿದ್ದಾರೆ. ಕಳೆದ ಜೂ.6ರಂದು ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಸರ್ಕಾರದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರೈತ ಸಂಘಟನೆಗಳ, ಗ್ರಾಮಸ್ಥರ, ಸಾರ್ವಜನಿಕರ ಸಭೆಯಲ್ಲಿ ಸರ್ವಾನುಮತದಿಂದ ಯೋಜನೆಯಗಳನ್ನು ರದ್ದುಪಡಿಸಲು ನಿರ್ಣಯ ಕೈಗೊಳ್ಳಲಾಗಿದೆ, ಇದನ್ನು ಶಾಸಕರು ಮನವರಿಕೆ ಮಾಡಿಕೊಳ್ಳಬೇಕೆಂದು ನೆನಪಿಸಿದರು.

ಶಾಸಕರು ಅಧಿಕಾರದಿಂದ ಮಾತನಾಡುತ್ತಿದ್ದಾರೆ, ಕಾವೇರಿ ಆರತಿ, ಅಮ್ಯೂಸ್ ಮೆಂಟ್ ಪಾರ್ಕ್ ಯೋಜನೆಗಳು  ಭವಿಷ್ಯದಲ್ಲಿ ಕೆ.ಆರ್.ಎಸ್. ಅಣೆಕಟ್ಟು, ಅಚ್ಚುಕಟ್ಟು ಪ್ರದೇಶಗಳು, ರೈತರು ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಎಷ್ಟು ಅಪಾಯಕಾರಿ ಎಂಬುದನ್ನು ಅರ್ಥೈಸಿಕೊಳ್ಳಬೇಕೆಂದರು.

ಶಾಸಸರಿಗೆ ಅಧಿಕಾರವಿದೆ, ಸವಲತ್ತುಗಳು ಇವೆ, ಹೋರಾಟಗಾರರಿಗೆ ವಿಚಾರವಿದೆ, ಅಲೋಚನೆಗಳಿವೆ. ಆದರೆ ಯಾವುದೇ ಸೌಲಭ್ಯವಿಲ್ಲ. ಯಾವುದೇ ಷಡ್ಯಂತ್ರ ಹೋರಾಟಗಾರರಲ್ಲಿ ಇರುವುದಿಲ್ಲ. ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ನಿರ್ಧಾರಗಳನ್ನು ಉಲ್ಲಂಘನೆ ಮಾಡಿದ್ದಾರೆ. ಇದು ಶಾಸಕರಿಗೆ ಶೋಭೆ ತರುವುದಿಲ್ಲ. ಅಣೆಕಟ್ಟು, ನದಿ ಪ್ರದೇಶಗಳು, ಪ್ರವಾಸೋದ್ಯಮದ ಕೇಂದ್ರಗಳಲ್ಲ. ನಿಷೇಧಿತ ಪ್ರದೇಶಗಳಾಗಿವೆ ಎಂದರು. ನಂತರ ಕೆ.ಆರ್.ಎಸ್ ನಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಗೆ ಪ್ರಯಾಣ ಬೆಳೆಸಿದರು.

ಪ್ರತಿಭಟನೆಯಲ್ಲಿ ಹೋರಾಟಗಾರರಾದ ಸುನಂದ ಜಯರಾಂ, ಕೆ.ಬೋರಯ್ಯ, ನಾಗಣ್ಣಗೌಡ, ಹೆಚ್.ಡಿ.ಜಯರಾಂ, ಎಸ್.ನಾರಾಯಣ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ